
ರೈತರಿಗೆ ಸಹಾಯಧನ-
2021-22 ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆ ಸಿದ್ದಾಪುರ ವತಿಯಿಂದ ಪಿ ಎಂ ಎಫ್ ಎಂಇ ಯೋಜನೆ (ಆತ್ಮ ನಿರ್ಭರ ಭಾರತ) ಅಡಿಯಲ್ಲಿ ಕಿರು ಆಹಾರ ಸಂಸ್ಕರಣೆ ಉದ್ಯಮ ಗಳಲ್ಲಿ ಆಸಕ್ತಿ ಹೊಂದಿದ ರೈತರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಶೇ. 35 ರ ಸಹಾಯಧನದಲ್ಲಿ ಗರಿಷ್ಠ ರೂ. 10 ಲಕ್ಷ ಸಹಾಯಧನ ಲಭ್ಯವಿರುತ್ತದೆ. ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ಯೋಜನಾ ಪ್ರಸ್ತಾವನೆ ಆದಾರಿತ ಕಾರ್ಯಕ್ರಮಗಳಿಗೆ ನೊಂದಣಿ ಮಾಡಿಕೊಳ್ಳಲಾಗುತ್ತಿದೆ. ಆದ್ದರಿಂದ ಆಸಕ್ತ ರೈತರು ಅವಶ್ಯಕ ದಾಖಲಾತಿಯೊಂದಿಗೆ ಏಪ್ರಿಲ್ 2021 ಅಂತ್ಯದೊಳಗೆ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಬೇಕಾಗಿ ಕೋರಲಾಗಿದೆ.
ಕರ್ನಾಟಕ ಸರಕಾರ ಕೇಂದ್ರ ಸರಕಾರದ ನಿರ್ದೇಶನದಂತೆ ಕಾರ್ಪೋರೇಟ್ ಕಂಪನಿಗಳ ಲೂಟಿಗೆ ದೊಡ್ಡ ಪ್ರಮಾಣದಲ್ಲಿ ನೆರವಾಗುವ ದುರುದ್ದೇಶದಿಂದಲೇ ರಾಜ್ಯದ ಬಡ ಬಿಪಿಎಲ್ ಕಾರ್ಡ್ ದಾರರಿಗೆ ಪಡಿತರ ವ್ಯವಸ್ಥೆಯ ಮೂಲಕ ನೀಡಲಾಗುತ್ತಿದ್ದ ತಲಾ ವ್ಯಕ್ತಿಗೆ 05 ಕೇಜಿ ಆಹಾರದಾನ್ಯವನ್ನು 02 ಕೇಜಿಗೆ ಇಳಿಸಿ ವಂಚನೆ ಎಸಗಲಾಗಿದೆಯೆಂದು ಭಾರತ ಕಮ್ಯುನಿಸ್ಟ್ ಪಕ್ಷ ( ಮಾರ್ಕ್ಸವಾದಿ ) ಉತ್ತರ ಕನ್ನಡ ಜಿಲ್ಲಾ ಸಮಿತಿ ಬಲವಾಗಿ ಖಂಡಿಸಿದೆ.
ಇದು, ಅದಾಗಲೇ ಜಾರಿಗೆ ತಂದಿರುವ ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ – 2020, ಆಹಾರ ಧಾನ್ಯಗಳನ್ನು/ಪದಾರ್ಥಗಳನ್ನು ಯಥೇಚ್ಛವಾಗಿ ದಾಸ್ತಾನು ಮಾಡಿ ಕಾರ್ಪೊರೇಟ್ ಲೂಟಿಗೆ ಎಲ್ಲ ಗ್ರಾಹಕ ನಾಗರೀಕರನ್ನು ತೆರೆದಿರುವುದಕ್ಕೆ ಪೂರಕವಾಗಿದ್ದು ಕಂಪನಿಗಳ ಲೂಟಿಯನ್ನು ವ್ಯಾಪಕಗೊಳಿಸಲಿದೆಯೆಂದು ಸಿಪಿಐ(ಎಂ) ಬಲವಾಗಿ ಪ್ರತಿರೋಧಿಸುವುದಾಗಿ ತಿಳಿಸಿದೆ..
ರಾಜ್ಯ ಹಾಗೂ ದೇಶದಲ್ಲಿ ಶೇ 85 ನಾಗರೀಕರ ತಲಾ ಆದಾಯ ದಿನವೊಂದಕ್ಕೆ 20 ರೂ ಕಡಿಮೆ ಇರುವಾಗ, 104 ದೇಶಗಳ ಅಪೌಷ್ಟಿಕತೆಯಲ್ಲಿ ನಮ್ಮ ದೇಶದ ಸ್ಥಾನವು ನಾಚಿಕೆ ಗೇಡಿನ 94 ಆಗಿರುವಾಗ, ಅಪೌಷ್ಠಿಕತೆಯನ್ನು ನಿವಾರಿಸಲು ದೇಶದ ಗೋಡೌನ್ ಗಳಲ್ಲಿ ಕೊಳೆಯುತ್ತಿರುವ 42 ಲಕ್ಷ ಟನ್ ಪಡಿತರವನ್ನು ವ್ಯಾಪಕವಾಗಿ ಹಂಚಿ ರಕ್ಷಿಸಬೇಕಾದ ಕರ್ತವ್ಯವನ್ನು ದುರುದ್ದೇಶದಿಂದಲೇ ಕೈಬಿಟ್ಟು ಬಡಜನತೆಯನ್ನು ಅಪೌಷ್ಠಿಕತೆಯ ಸಾವಿನ ದವಡೆಗೆ ವೇಗವಾಗಿ ತಳ್ಳುವ ನರಹತ್ಯೆಯ ನೀಚ ಕೆಲಸದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ತೊಡಗಿವೆಯೆಂದು ಸಿಪಿಐ(ಎಂ) ಕಟುವಾಗಿ ಟೀಕಿಸಿದೆ.
ಮಾನ್ಯ ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ರಾಜ್ಯ ಸರಕಾರ ಕೇಂದ್ರ ಸರಕಾರ ಹೇರುವ ಎಲ್ಲಾ ಧಾಳಿಗಳನ್ನು ಬಾಯಿ ಮುಚ್ಚಿಕೊಂಡು ಜಾರಿ ಮಾಡುವ ಕಾರ್ಪೊರೇಟ್ ಕಂಪನಿಗಳ ಗುಲಾಮಿ ಸರಕಾರವಾಗಿರುವುದನ್ನು ಇದು ಮತ್ತೊಮ್ಮೆ ಸಾಬೀತು ಪಡಿಸಿದೆ. 2021 ರ ಕೇಂದ್ರ ಸರಕಾರದ ಬಜೆಟ್ ನಲ್ಲಿಯೇ ಆಹಾರದ ಸಹಾಯಧನವನ್ನು 2020 ರ ಬಜೆಟ್ ಗೆ ಹೋಲಿಸಿದರೇ ಶೇ 41 ರಷ್ಠು ಕಡಿತ ಮಾಡಿದಾಗಲೇ ಯಡಿಯೂರಪ್ಪರವರು ಬಾಯಿ ಮುಚ್ಚಿಕೊಂಡಿದ್ದರು. ಈ ರಾಜ್ಯ ಸರಕಾರಕ್ಕೆ ರಾಜ್ಯದ ಬಡವರು, ದಲಿತರು,ಮಹಿಳೆಯರ ಕುರಿತ ಕಿಂಚಿತ್ತೂ ಕಾಳಜಿ ಇಲ್ಲವೆಂಬುದು ಇದರಿಂದ ಮತ್ತೊಮ್ಮೆ ಸಾಬೀತಾದಂತಾಗಿದೆ.
ರಾಜ್ಯದ ಜನತೆ ಆರ್ಥಿಕ ಬಿಕ್ಕಟ್ಟು ಹಾಗೂ ಕಳೆದ ಮೂರು- ನಾಲ್ಕು ವರ್ಷಗಳಿಂದ ಬರಗಾಲ, ಅತೀವೃಷ್ಟಿ, ಪ್ರವಾಹ ಮತ್ತು ಕೋವಿಡ್- 19 ಹಾಗೂ ಲಾಕ್ ಡೌನ್ ಗಳಿಂದ ಬಾಧಿತರಾಗಿದ್ದಾರೆ.
ಈ ಬಾಧಿತರ ಮೇಲೆ, ಪೆಟ್ರೋಲ್, ಡೀಸೆಲ್, ಗ್ಯಾಸ್, ರಸಾಯನಿಕ ಗೊಬ್ಬರಗಳ ಬೆಲೆ ಏರಿಕೆ ಮತ್ತು ಆಸ್ತಿ ಮತ್ತಿತರೇ ತೆರಿಗೆ ಭಾರಗಳನ್ನು ಈಗಾಗಲೇ ಹೇರಿ ಗಾಯದ ಮೇಲೆ ಬರೆ ಎಳೆಯಲಾಗಿದೆ. ಇದೀಗ ರಾಜ್ಯ ಸರಕಾರ ಪಡಿತರ ಕಡಿತ ಮಾಡಿ ಬರೆ ಎಳೆದ ಗಾಯಕ್ಕೆ ಖಾರ ತುಂಬುವ ಘನಂದಾರಿ ಕೆಲಸ ಮಾಡಿದೆ.
ಈ ಕೂಡಲೇ ಪಡಿತರ ಕಡಿತವನ್ನು ಹಿಂಪಡೆಯುವಂತೆ ಮತ್ತು ತಲಾ ವ್ಯಕ್ತಿಗೆ ಕನಿಷ್ಠ 10 ಕೇಜಿ ಸಮಗ್ರ ಪಡಿತರ ಒದಗಿಸುವಂತೆ ಭಾರತ ಕಮ್ಯುನಿಸ್ಟ್ ಪಕ್ಷ ( ಮಾರ್ಕ್ಸವಾದಿ ) ಉತ್ತರ ಕನ್ನಡ ಜಿಲ್ಲಾ ಸಮಿತಿ ಮುಖ್ಯ ಮಂತ್ರಿಗಳನ್ನು ಬಲವಾಗಿ ಒತ್ತಾಯಿಸಿದೆ.
ಅದೇ ರೀತಿ, ರಾಜ್ಯದ ನಾಗರೀಕರು, ಬಡವರು, ಸಂಘ ಸಂಸ್ಥೆಗಳು, ಪಕ್ಷದ ಘಟಕಗಳು ಸರಕಾರಗಳ ಈ ದೌರ್ಜನ್ಯವನ್ನು ಬಲವಾಗಿ ಪ್ರತಿರೋಧಿಸುವಂತೆ ಸಿಪಿಐ(ಎಂ) ಕರೆ ನೀಡುತ್ತದೆಂದು ಜಿಲ್ಲಾ ಸಮಿತಿ ಕಾರ್ಯದರ್ಶಿ ಶಾಂತಾರಾಮ ನಾಯಕ ತಿಳಿಸಿದ್ದಾರೆ.
ರೈತರಿಗೆ ಸಹಾಯಧನ-
2021-22 ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆ ಸಿದ್ದಾಪುರ ವತಿಯಿಂದ ಪಿ ಎಂ ಎಫ್ ಎಂಇ ಯೋಜನೆ (ಆತ್ಮ ನಿರ್ಭರ ಭಾರತ) ಅಡಿಯಲ್ಲಿ ಕಿರು ಆಹಾರ ಸಂಸ್ಕರಣೆ ಉದ್ಯಮ ಗಳಲ್ಲಿ ಆಸಕ್ತಿ ಹೊಂದಿದ ರೈತರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಶೇ. 35 ರ ಸಹಾಯಧನದಲ್ಲಿ ಗರಿಷ್ಠ ರೂ. 10 ಲಕ್ಷ ಸಹಾಯಧನ ಲಭ್ಯವಿರುತ್ತದೆ. ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ಯೋಜನಾ ಪ್ರಸ್ತಾವನೆ ಆದಾರಿತ ಕಾರ್ಯಕ್ರಮಗಳಿಗೆ ನೊಂದಣಿ ಮಾಡಿಕೊಳ್ಳಲಾಗುತ್ತಿದೆ. ಆದ್ದರಿಂದ ಆಸಕ್ತ ರೈತರು ಅವಶ್ಯಕ ದಾಖಲಾತಿಯೊಂದಿಗೆ ಏಪ್ರಿಲ್ 2021 ಅಂತ್ಯದೊಳಗೆ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಬೇಕಾಗಿ ಕೋರಲಾಗಿದೆ.
