

ಅನುರಾಗ ಸಂಗಮ ಎನ್ನುವ ಕನ್ನಡ ಚಿತ್ರವೊಂದು ಮೂರು ದಶಕಗಳ ಹಿಂದೆ ತಯಾರಾಗಿತ್ತು. ವಿ. ಉಮಾಕಾಂತ್ ಈ ಚಿತ್ರದ ನಿರ್ಧೇಶಕರು ಈ ಚಿತ್ರದ ನಂತರ ಅಂಬರೀಷ ರಿಗಾಗಿಯೇ ರಂಗೇನಹಳ್ಳಿಯಾಗ ರಂಗಾದ ರಂಗೇ ಗೌಡ ಎನ್ನುವ ಯಶಸ್ವಿ ಚಿತ್ರ ನಿರ್ಧೇಶಿಸಿದ್ದರು ಇದೇ ಉಮಾಕಾಂತ್. ಈ ಉಮಾಕಾಂತ್ ಜೊತೆಗಿದ್ದವರು ವಿ ಮನೋಹರ್. ವಿ. ಮನೋಹರ್ ತಮ್ಮ ಓಮಲ್ಲಿಗೆ ಚಿತ್ರದ ಮೊದಲೇ ಅನುರಾಗ ಸಂಗಮ ಚಿತ್ರದಲ್ಲಿ ಓ.ಮಲ್ಲಿಗೆ ನಿನ್ನೊಂ ದಿಗೆ ನಾನಿಲ್ಲವೆ ಎನ್ನುವ ಅದ್ಭುತ ಗೀತೆ ಕೊಟ್ಟಿದ್ದರು. ಈ ವಿವಿಗಳು ಸೇರಿ ಮಾಡಿದ ಚಿತ್ರ ಅನುರಾಗ ಸಂಗಮ.
ಏ.30 ರಂದು ಸಿದ್ಧಾಪುರದಲ್ಲಿ ಧೃಡಪಟ್ಟ ಒಟ್ಟೂ 39 ಕೋವಿಡ್ ಸೋಂಕಿತರಲ್ಲಿ ಸಿದ್ಧಾಪುರ ಬಂಗ್ಲೆಗುಡ್ಡ, ಕಿಲಾರ,ಕೋಲಶಿರ್ಸಿಯ ತಲಾ ಒಂದೊಂದು ಪ್ರಕರಣಗಳು ಸೇರಿವೆ.

ಕುಮಾರ ಗೋವಿಂದ ಗೋವಿಂದು ಎನ್ನುವ ಮುಗ್ಧ, ಈತನ ತಂದೆ ತಾಯಿಯರು ರಮೇಶ್ ಅಪ್ಪನ ಕಾರಿಗೆ ಸಿಕ್ಕು ಅಪಘಾತವಾಗಿ ಸಾಯುತ್ತಾರೆ. ಅನಾಥನಾದ ಮಗುವನ್ನು ತಮ್ಮ ,ಮನೆಗೆ ಕರೆತರಬೇಕೆಂಬ ರಮೇಶ್ ಬೇಡಿಕೆ ಫಲಿಸಿ ಗೋವಿಂದು ಶ್ರೀಮಂತ ರಮೇಶ್ ಮನೆ ಸೇರುತ್ತಾನೆ. ಯಾರು ಏನೇ ಹೇಳಿದರೂ ರಮೇಶ್ ಗೆ ಗೋವಿಂದು ಮೇಲೆ ಮಮಕಾರ ಪ್ರೀತಿ.ರಮೇಶ್ ಉನ್ನತ ವ್ಯಾಸಂಗಕ್ಕಾಗಿ ಹೊರದೇಶಕ್ಕೆ ತರಳಿದ ಮೇಲೆ ಗೋವಿಂದು ರಮೇಶ್ ಪಾಲಕರಿಂದ ಮನೆಯಿಂದ ಹೊರತಳ್ಳಲ್ಪಡುತ್ತಾನೆ.
ಅತ್ತ ರಮೇಶ್ ವಿದೇಶದಲ್ಲಿ ಅಧ್ಯಯನ ಮುಗಿಸಿ ಬರುವ ಮೊದಲು ಮುಗ್ಧ ಗೋವಿಂದುಗೆ ಹೂವು ಮಾರುವ ಬಡ ಹುಡುಗಿ (ಕಸ್ತೂರಿ) ಯ ಪರಿಚಯವಾಗಿ ಅನುರಾಗ ಅಂಕುರಿಸಿರುತ್ತದೆ. ಬಡ ಅಂ(ದ)ಧ ಹುಡುಗಿಗಾಗಿ ಹಂಬಲಿಸಿದ ಗೋವಿಂದು ನಿಸ್ವಾರ್ಥದಿಂದಲೇ ಆಕೆಯ ಕಣ್ಣಿನ ಚಿಕಿತ್ಸೆಗೆ ಅಗತ್ಯ ಶಸ್ತ್ರ ಚಿಕಿತ್ಸೆ ಮಾಡಿಸುವ ಸಂದರ್ಭದಲ್ಲಿ ಕಳ್ಳತನದ ಆರೋಪದ ಮೇಲೆ ಜೈಲು ಪಾಲಾಗುತ್ತಾನೆ. ಕಸ್ತೂರಿ (ಸುಧಾರಾಣಿ) ಗೆ ದೃಷ್ಟಿ ಬಂದ ಮೇಲೆ ಗೋವಿಂದು ನನ್ನು ಮೊಟ್ಟಮೊದಲು ನೋಡುವ ಭಾಗ್ಯ ಸಿಗುವುದೇ ಇಲ್ಲ.
ಇತ್ತ ವಿದೇಶಿ ಶಿಕ್ಷಣ ಮುಗಿಸಿ ಬಂದ ರಮೆಶ್ ಗೆ ಒಬ್ಬಂಟಿ ವೈದ್ಯೆ ಸಂಬಂಧಿಯೊಬ್ಬರ ಮನೆಯಲ್ಲಿ ಸುಧಾರಾಣಿ ದರ್ಶನವಾಗುತ್ತದೆ. ಗೋವಿಂದು ಕಳೆದುಹೋದಂತಾಗಿ ರಮೇಶ್ ಕೈಹಿಡಿಯುವ ಕಸ್ತೂರಿಯ ಗೋವಿಂದುನ ಭಜನೆ ಫಲಿಸುವುದೇ ಇಲ್ಲ. ಅಂತಿಮವಾಗಿ ಗೋವಿಂದುಗೆ ತನ್ನ ಕಸ್ತೂರಿ ತನ್ನ ಪ್ರಾಣಸ್ನೇಹಿತ ರಮೇಶ್ ಗೆ ಜೋಡಿಯಾಗುವ ವಿಷಯ ಖುಷಿ- ನೋವಿಗೂ ಕಾರಣವಾಗುತ್ತದೆ!. ಕೊನೆಗೆ ಇದೇ ವಿಷಯ ರಮೇಶ್ ಗೂ ತಿಳಿದು ರಮೇಶ್ ಗೋವಿಂದುಗೆ ಕಪಾಳಮೋಕ್ಷ ಮಾಡುವ ಮೂಲಕ ಮಹಾತ್ಯಾಗಿ ಆಗಬೇಕೇನೋ ನೀನು, ಯಾಕೋ ನೀನು ಹೇಳಲಿಲ್ಲ ಎಂದು ಅಬ್ಬರಿಸುವಾಗ ಗೋವಿಂದುನ ಸತ್ತಂಥ ಆತ್ಮ ಕಸ್ತೂರಿಯ ಉಜ್ವಲ ಭವಿಷ್ಯವನ್ನೇ ಕನಸುತ್ತಿರುತ್ತದೆ. ಇದು ಚಿತ್ರದ ಕತೆ. ಇದಕ್ಕೆ ಅಗತ್ಯ ಚಿತ್ರಕತೆ, ಅದ್ಭುತ ನಿರೂಪಣೆಗಳ ಸೊಗಸು ಪ್ರೇಕ್ಷಕರ ಎದೆಗೇ ಮುಟ್ಟುತ್ತದೆ. ಇಂಥ ಎದೆಗಿಳಿಯುವ ಚಿತ್ರ 1995 ರಲ್ಲಿ ಕನ್ನಡ ಚಿತ್ರರಂಗದ ಬೇಸಿಗೆಯ ತಣ್ಣನೆಯ ಮಳೆಯಂತೆ ಭಾಸವಾಗಿತ್ತು. ಈ ಸಿನೆಮಾ ಬಂದು ಎರಡ್ಮೂರು ದಶಕಗಳೇ ಕಳೆದಿದ್ದರೂ ಈ ಚಿತ್ರ ಈಗಲೂ ತಾಜಾ ಎನಿಸಲು ಕಾರಣ ಆ ಚಿತ್ರದ ಫ್ರೆಶ್ ನೆಸ್. ಹಾಗೇ ಆ ಚಿತ್ರದ ಹಾಡುಗಳ ಮಾಧುರ್ಯ ಕೂಡಾ.
