

ಒಂದಾನೊಂದು ಕಾಲದಲ್ಲಿ ಉತ್ತರ ಕನ್ನಡ ಜಿಲ್ಲೆಯ ಪ್ರಭುದೇವ ಎನ್ನುವ ಬಿರುದಿಗೆ ಪಾತ್ರನಾಗಿದ್ದ ಸಿದ್ಧಾಪುರದ ಪಾಂಡು ಸ್ವಾಮಿ ನೇಪಥ್ಯದಲ್ಲಿದ್ದಂತಿದ್ದರು. ಕಳೆದ ವರ್ಷ ಮಾರಕ ಕರೋನಾ ಭೀತಿ ಪ್ರಾರಂಭವಾಯಿತು ನೋಡಿ ಆಗ ಕರೋನಾ ಸೇನಾನಿಗಳಿಗೆ ತನ್ನ ಸ್ವಂತ: ಖರ್ಚಿನಲ್ಲಿ ನೀರು, ಬಿಸ್ಕಟ್ ನೀಡುತ್ತಾ ಕರೋನಾ ಸೇನಾನಿಗಳಿಗೆ ನೆರವಾಗತೊಡಗಿದರು.
ಒಂದೆರಡು ತಿಂಗಳು ಈ ಕಾಯಕ ಮುಂದುವರಿಸಿದ ಪಾಂಡು ಸ್ವಾಮಿ ಪ್ರಚಾರ ಬಯಸಲಿಲ್ಲ, ಈ ಬಗ್ಗೆ ಯಾರಿಗೂ ಹೇಳಿಕೊಳ್ಳಲೂ ಇಲ್ಲ. ಕರೋನಾ ಮೊದಲ ಕಾಲದಿಂದಲೂ ತನ್ನ ಚಿತ್ರ ಬರೆಯುವಿಕೆ. ಪ್ಲೆಕ್ಸ್ ಕೆಲಸ, ಸ್ಟಿಕರ್ ಕಟ್ಟಿಂಗ್ ಎಂದು ಎಲೆಮರೆಯ ಕಾಯಿಯಂತೆ ಕೆಲಸಮಾಡುತಿದ್ದ ಪಾಂಡು ಸ್ವಾಮಿ ಕಳೆದ ವರ್ಷ ಕರೋನಾ ಸೇನಾನಿಯಾಗಿ ಅಸಹಾಯಕರು, ವೃದ್ಧರಿಗೆ ನೆರವು ನೀಡುವ, ತನ್ನ ವಾಹನದಲ್ಲಿ ಅವರನ್ನು ಮನೆಗೆ ತಲುಪಿಸುವ ಕೆಲಸಮಾಡುತ್ತಲೇ ಕರೋನಾ ಸೇನಾನಿಗಳಿಗೆ ನೀರು- ಆಹಾರ ನೀಡುತ್ತಾ ತಮ್ಮ ಎಂದಿನ ತರಮರೆಯ ಕೆಲಸ ಮುಂದುವರಿಸಿದ್ದರು.
ಪ್ರಚಾರ, ಪ್ರಸಿದ್ಧಿ-ಲಾಭಗಳ ಹಂಗಿಗೆ ಬೀಳದ ಪಾಂಡುಸ್ವಾಮಿಯವರನ್ನು ಗುರುತಿಸಿದ್ದು ಪ್ರಜಾವಾಣಿ, ಎಲ್ಲಾ ಮಾಧ್ಯಮಗಳಂತೆ ಸುದ್ದಿ- ಲೇಖಲ ಮಾಡಿದ ಪ್ರಜಾವಾಣಿ 2021 ರ ಕರೋನಾ ಸೇನಾನಿಗಳ ಜೊತೆಗೆ ಸಮಾಜಸೇವೆಗಾಗಿ ಪಾಂಡುಸ್ವಾಮಿಯವರನ್ನೂ ಕರೆದು ಸನ್ಮಾನಿಸಿತು. ಅಷ್ಟರ ವರೆಗೆ ತನ್ನಷ್ಟಕ್ಕೆ ತಾನೇ ಮಾಡುತಿದ್ದ ಪಾಂಡು ಸೇವೆ ಪ್ರಸಿದ್ಧವಾಯಿತು. ಈಗಲೂ ಪ್ರಚಾರ ಬೇಡ ಎನ್ನುವ ಪಾಂಡು ಸ್ವಾಮಿ ಪ್ರಜಾವಾಣಿ ಗುರುತಿಸಿದ 12 ತಾಲೂಕುಗಳ 5 ಜನ ಕರೋನಾ ಸೇನಾನಿಗಳಲ್ಲಿ ಒಬ್ಬರು. ನೃತ್ಯಪಟು, ಕಲಾವಿದ, ಸಮಾಜಸೇವಕ ಆಗಿರುವ ಸಿದ್ಧಾಪುರ ಬಂಗ್ಲೆಗುಡ್ಡದ ಪಾಂಡುಸ್ವಾಮಿಯವರಿಗೆ ಅಭಿನಂದನೆಗಳೊಂದಿಗೆ ಸಮಾಜಮುಖಿ ಸಲಾಂ.
ಹಾರ್ಸಿಕಟ್ಟಾದಲ್ಲಿ ನುಡಿನಮನ….
ಸಿದ್ದಾಪುರ
ತಾಲೂಕಿನ ಹಾರ್ಸಿಕಟ್ಟಾದಲ್ಲಿ ಸ್ಥಳೀಯ ಯಕ್ಷಗಾನ ಅಭಿಮಾನಿಗಳು, ಗೆಳೆಯರ ಬಳಗದವರು ಇತ್ತೀಚೆಗೆ ನಿಧನಹೊಂದಿದ ಪ್ರೊ.ಎಂ.ಹೆಗಡೆ ಅವರಿಗೆ ಗುರುವಾರ ಶೃದ್ಧಾಂಜಲಿ ಸಲ್ಲಿಸಿದರು.
ವಿ.ಚಂದ್ರಶೇಖರ ಭಟ್ಟ ಗಾಳಿಮನೆ ಮಾತನಾಡಿ ವಾಗ್ಮಿಗಳು, ವಿದ್ವಾಂಸರು, ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿದ್ದ ಪ್ರೊ.ಎಂ.ಎ.ಹೆಗಡೆ ಅವರು ಬಹುಮುಖ ಪ್ರತಿಭೆ ಇದ್ದವರಾಗಿದ್ದರು ಎಂದು ಹೇಳಿದರು.
ಯಕ್ಷಗಾನ ಭಾಗವತ ಸತೀಶ ಹೆಗಡೆ ದಂಟಕಲ್ ಮಾತನಾಡಿ ಪ್ರೊ.ಎಂ.ಎ.ಹೆಗಡೆ ಅವರ ನೆನಪಿನಲ್ಲಿ ಪ್ರತಿ ವರ್ಷ ಒಂದು ಕಾರ್ಯಕ್ರಮ ನಡೆಸಬೇಕೆಂದರು.
ಅನಂತ ಶಾನಭಾಗ ಹಾರ್ಸಿಕಟ್ಟಾ, ಟಿಎಸ್‍ಎಸ್‍ನ ಮಾಜಿ ನಿರ್ದೇಶಕ ರವಿಂದ್ರ ಹೆಗಡೆ ಹಿರೇಕೈ, ಗೋಪಾಲ ಹೆಗಡೆ ಹುಲಿಮನೆ, ರಘುಪತಿ ಹೆಗಡೆ ಹೂಡೆಹದ್ದ, ಎಂ.ಆರ್.ಹೆಗಡೆ ದಂಟಕಲ್,ರಮೇಶ ಹೆಗಡೆ ಹಾರ್ಸಿಮನೆ ಶೃದ್ದಾಂಜಲಿ ನುಡಿಯನ್ನಾಡಿದರು.
ಶ್ರೀಧರ ಭಟ್ಟ ಮಾಣಿಕ್ಯನಮನೆ,ಶ್ರೀಕಾಂತ ಶಾನಭಾಗ, ಕಲ್ಯ ಮಡಿವಾಳ, ಗುರುಮೂರ್ತಿ ಶಾನಭಾಗ ಇತರರಿದ್ದರು.
ಕಾರ್ಯಕ್ರಮ ಪೂರ್ವದಲ್ಲಿ ಒಂದು ನಿಮಿಷ ಮೌನಾಚರಣೆ ನಡೆಸಲಾಯಿತು.



