ಕೋವಿಡ್ 2ನೇ ಅಲೆ ತಾಂಡವವಾಡುತ್ತಿರುವ ಈ ಸಮಯದಲ್ಲಿ ಹೊರಗೆ ಓಡಾಡುವಾಗ, ಜನ ಸೇರುವ ಪ್ರದೇಶಗಳಲ್ಲಿ ಕಡ್ಡಾಯವಾಗಿ ಮುಖಗವಸನ್ನು ಧರಿಸಬೇಕೆಂದು ಸರ್ಕಾರ ಕಡ್ಡಾಯ ಮಾಡಿದೆ. ಮಾಸ್ಕ್ ಧರಿಸದವರಿಗೆ ಪೊಲೀಸರು ದಂಡ ಹಾಕುತ್ತಾರೆ.
ಶಿರಸಿ(ಉತ್ತರ ಕನ್ನಡ): ಕೋವಿಡ್ 2ನೇ ಅಲೆ ತಾಂಡವವಾಡುತ್ತಿರುವ ಈ ಸಮಯದಲ್ಲಿ ಹೊರಗೆ ಓಡಾಡುವಾಗ, ಜನ ಸೇರುವ ಪ್ರದೇಶಗಳಲ್ಲಿ ಕಡ್ಡಾಯವಾಗಿ ಮುಖಗವಸನ್ನು ಧರಿಸಬೇಕೆಂದು ಸರ್ಕಾರ ಕಡ್ಡಾಯ ಮಾಡಿದೆ. ಮಾಸ್ಕ್ ಧರಿಸದವರಿಗೆ ಪೊಲೀಸರು ದಂಡ ಹಾಕುತ್ತಾರೆ.
ಹಾಗೆಂದು ಕೆಲವು ಕಡೆ ಜನಪ್ರತಿನಿಧಿಗಳು, ರಾಜಕೀಯ ನಾಯಕರೇ ಮುಖಗವಸು ಹಾಕುವುದನ್ನು ಮರೆಯುತ್ತಾರೆ, ಅಸಡ್ಡೆ ಮಾಡುತ್ತಾರೆ ಎಂಬ ಆರೋಪ ಜನಸಾಮಾನ್ಯರಿಂದ ಕೇಳಿಬರುತ್ತದೆ. ಜನಪ್ರತಿನಿಧಿಗಳಿಗೆ ಒಂದು ನಿಯಮ, ಜನಸಾಮಾನ್ಯರಿಗೊಂದು ನಿಯಮ ಎಂದರೆ ಯಾವ ನ್ಯಾಯ ಎಂದು ನಾಗರಿಕರು ಪ್ರಶ್ನಿಸುತ್ತಾರೆ.
ನಿನ್ನೆ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್, ಆಪ್ತರೊಬ್ಬರ ಮದುವೆ ಕಾರ್ಯಕ್ರಮದಲ್ಲಿ ಮುಖಗವಸನ್ನು ಧರಿಸದೆ ಫೋಟೋಗೆ ಫೋಸ್ ಕೊಟ್ಟಿದ್ದು ಭಾರೀ ಸುದ್ದಿಯಾಗಿತ್ತು. ಸಾರ್ವಜನಿಕರಿಂದ ಆಕ್ರೋಶ ಕೂಡ ವ್ಯಕ್ತವಾಗಿತ್ತು.
ಇದೀಗ ಉತ್ತರ ಕನ್ನಡ ಮೂಲದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಕೂಡ ಸ್ನೇಹಿತರೊಬ್ಬರ ಮನೆಯ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಸ್ಕ್ ಧರಿಸದೆ ಫೋಟೋಗೆ ಫೋಸ್ ಕೊಟ್ಟಿದ್ದಾರೆ. ಮದುವೆಗೆ ಆಗಮಿಸಿ ಮಾಸ್ಕ್ ಹಾಕದೆ ನಿಂತು ಕೋವಿಡ್ ನಿಯಮಗಳನ್ನು ಕಾಗೇರಿಯವರು ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. (kpc)