

ನಾಳೆ ರಾತ್ರಿಯಿಂದಲೇ ಮೇ 10 ರ ವರೆಗೆ 14 ದಿವಸಗಳ ಜನತಾ ಕರ್ಫ್ಯೂ ವಿಧಿಸಿರುವ ಸರ್ಕಾರ ನಾಳೆಯಿಂದ ಪ್ರತಿದಿನ ಬೆಳಿಗ್ಗೆ 6 ರಿಂದ 10 ರ ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದೆ. ವಾರಾಂತ್ಯದ ಕರ್ಫ್ಯೂ ಹೊರತುಪಡಿಸಿ ಉಳಿದ ದಿವಸಗಳಲ್ಲೂ ಖರೀದಿ, ಅಂಗಡಿ ಮು 0ಗ್ಗಟ್ಟು ತೆರೆಯಲು ಅವಕಾಶ ನೀಡದ ಉತ್ತರ ಕನ್ನಡ ಜಿಲ್ಲಾ ಆಡಳಿತ ಅಘೋಶಿತ ಕರ್ಫ್ಯೂ ನಡೆಸಿತ್ತು! ಇಂದು ಕೂಡಾ ಎಂದಿನಂತೆ ಅವಶ್ಯ ವಸ್ತು ಖರೀದಿಯಲ್ಲಿ ತೊಡಗಿದ್ದ ಜನ ವೈಯಕ್ತಿಕ ಅಂತರ ಕಾಪಾಡಲಿಲ್ಲ ಎಂದು ಪೊಲೀಸರು ಬೆತ್ತ ಬೀಸಿದರು.
ಸಿದ್ದಾಪುರ ನಗರದ ಕಿರಿದಾದ ತರಕಾರಿ ಮಾರುಕಟ್ಟೆಯಲ್ಲಿ ವೈಯಕ್ತಿಕ ಅಂತರ ಕಾಪಾಡುವುದು, ಕೋವಿಡ್ ನಿಯಮ ಪಾಲಿಸುವುದು ಕಷ್ಟ ಎಂದು ತಿಳಿದ ತಾಲೂಕಾ ಆಡಳಿತ ತರಕಾರಿ ಮಾರುಕಟ್ಟೆಯನ್ನು ನೆಹರೂ ಮೈದಾನಕ್ಕೆ ಸ್ಥಳಾಂತರಿಸಿದೆ. ಇಂದಿನಿಂ ದಲೇ ಈ ತರಕಾರಿ ಮಾರುಕಟ್ಟೆಯಲ್ಲಿ ಕೋವಿಡ್ ನಿಯಮಾನುಸಾರ ಬೆಳಿಗ್ಗೆ 6 ರಿಂದ 10 ಗಂಟೆಯವೆರೆಗೆ ತರಕಾರಿ ಹಣ್ಣು ಖರೀದಿಗೆ ಅವಕಾಶ ಕಲ್ಪಿಸಲಾಗಿದೆ.




