

ಶಿರಸಿ ಸಿದ್ಧಾಪುರದ ಶಾಸಕ, ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರಲ್ಲಿ ಕರೋನಾ ಸೋಂಕು ದೃಢಪಟ್ಟಿದೆ. ಶಿರಸಿ ಸಮೀಪದ ಕಾಗೇರಿಯ ವಿಶ್ವೇಶ್ವರ ಹೆಗಡೆ ಶಾಸಕರು, ರಾಜ್ಯ ವಿಧಾನಸಬಾ ಅಧ್ಯಕ್ಷರೂ ಆಗಿರುವುದರಿಂದ ಅವರು ಶಿರಸಿ ಸಿದ್ಧಾಪುರ ಶಿವಮೊಗ್ಗ ಮಾರ್ಗವಾಗಿ ಕಳೆದ ವಾರ ಓಡಾಟ ನಡೆಸಿದ್ದಾರೆ.
ಕಳೆದ ರವಿವಾರ ಮನ್ಮನೆಯಲ್ಲಿ ನಡೆದ ಜಿ.ಪಂ. ಮಾಜಿ ಸದಸ್ಯ ಈಶ್ವರ ನಾಯ್ಕ ರ ಮಗಳ ಮದುವೆಯಲ್ಲಿ ಪಾಲ್ಗೊಂಡಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಸ್ಕ್ ಧರಿಸದ ಸುದ್ದಿ-ಚಿತ್ರ ವೈರಲ್ ಆಗಿತ್ತು. ಶಾಸಕ ವಿಶ್ವೆಶ್ವರ ಹೆಗಡೆ ಕಾಗೇರಿ ರವಿವಾರದ ಮನ್ಮನೆ ವಿವಾಹ ಸಮಾರಂಭ ಸೇರಿದಂತೆ ಅನೇಕ ಸಾರ್ವಜನಿಕ, ಸರ್ಕಾರಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ಅವರ ಕಾರ್ಯಕ್ರಮ, ಅವರ ಸಂಬಂಧ- ಸಂಪರ್ಕದ ವ್ಯಕ್ತಿ, ಅಧಿಕಾರಿಗಳು, ಕಾರ್ಯಕರ್ತರು ಸೇರಿದಂತೆ ಅನೇಕರು ಅವರ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದಾರೆ ಹಾಗಾಗಿ ಶಿರಸಿ ಸಿದ್ಧಾಪುರದ ಜನತೆ ಸೇರಿದಂತೆ ರಾಜ್ಯದ ಅವರ ಸಂಪರ್ಕದ ಜನರು ಕೋವಿಡ್ ಪರೀಕ್ಷೆ ಮಾಡಿಕೊಳ್ಳಲು ಅವರ ಆಪ್ತ ಸಹಾಯಕರು ವಿನಂತಿಸಿರುವ ಮಾಹಿತಿ ಲಭ್ಯವಾಗಿದೆ.
