


ಹುಬ್ಬಳ್ಳಿ ರಾಯನಾಳ ಬಳಿ ನಡೆದ ಟ್ಯಾಂಕರ್ ಕಾರು ಅಪಘಾತದಲ್ಲಿ ಬೆಳಗಾವಿ ಸಂಚಾರಿ ಠಾಣೆಯ ವೃತ್ತ ನಿರೀಕ್ಷಕ ಸಿದ್ಧಾಪುರ ಮೂಲದ ಮಹಾಬಲೇಶ್ವರ ನಾಯ್ಕ ಗಾಯಗೊಂಡಿದ್ದು ಅವರ ಸಂಬಂಧಿ (ಬಾಳೆಕೊಪ್ಪದ) ಜಡ್ಡಿಗದ್ದೆ ಗುರುಪ್ರಸಾದ ನಾಯ್ಕ ಸ್ಥಳದಲ್ಲೇ ಮೃತರಾದ ದುರ್ಘಟನೆ ನಡೆದಿದೆ.
ಹುಬ್ಬಳ್ಳಿ ಕಡೆಯಿಂದ ಹೊರಟಿದ್ದ ಸ್ವಿಫ್ಟ್ ಕಾರಿಗೆ ಎದುರಿನಿಂದ ಬಂದ ಟ್ಯಾಂಕರ್ ಹೊಡೆದ ಪರಿಣಾಮ ಈ ಸಾವು-ನೋವು ಸಂಭವಿಸಿದ್ದು ಕಾರ್ ಪಲ್ಟಿಯಾಗಿ ಚಾಲನೆ ಮಾಡುತಿದ್ದ ಮಹಾಬಲೇಶ್ವರ ನಾಯ್ಕ ನರಮುಂಡಿಗೆ ಅಪಾಯದಿಂದ ಪಾರಾಗಿದ್ದಾರೆ. ಅವರನ್ನು ಹುಬ್ಬಳ್ಳಿ ಆಸ್ಫತ್ರೆಗೆ ದಾಖಲಿಸಲಾಗಿದೆ. ಅವರ ಸಂಬಂಧಿ ಗುರುಪ್ರಸಾದ ನಾಯ್ಕ ಸ್ಥಳದಲ್ಲೇ ಮೃತರಾಗಿದ್ದಾರೆ. ಕಾರು ರಸ್ತೆಯಿಂದ 50 ಅಡಿ ಆಳದ ಕಂದಕಕ್ಕೆ ಬಿದ್ದಿದ್ದು ಮಹಾಬಲೇಶ್ವರ ನಾಯ್ಕ ಬಚಾವಾಗಿರುವುದೇ ಆಶ್ಚರ್ಯ ಎನ್ನಲಾಗುತ್ತಿದೆ. ನಾಯ್ಕ ಈಗ ಹುಬ್ಬಳ್ಳಿ ಕೆ.ಎಲ್.ಇ ಆಸ್ಫತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದು ಸಂಪೂರ್ಣ ಚೇತರಿಸಿಕೊಂಡಿದ್ದಾರೆ.




