ಕರ್ನಾಟಕದ ಲೂಸಿಂಗ್ ಟನ್ ಜಲಪಾತ ಎನ್ನುವ ಹೆಗ್ಗಳಿಕೆ ಇರುವ ಹೆಗ್ಗರಣಿ ಉಂಚಳ್ಳಿ ಜಲಪಾತಕ್ಕೆ ಕೋವಿಡ್, ಲಾಕ್ ಡೌನ್ ಹಿನ್ನೆಲೆಯಲ್ಲಿ ಸ್ಥಳೀಯರೇ ಲಾಕ್ ಮಾಡಿದ್ದಾರೆ. ಶಿರಸಿ ಗೆ ಸಮೀಪದ ಸಿದ್ಧಾಪುರ ತಾಲೂಕಿನ ಈ ಉಂಚಳ್ಳಿ ಜಲಪಾತದ ರಸ್ತೆ ಮತ್ತು ಮುಖ್ಯಧ್ವಾರಕ್ಕೆ ಬೀಗಜಡಿದಿರುವ ಉಂಚಳ್ಳಿ ಗ್ರಾಮ ಅರಣ್ಯ ಸಮೀತಿ,ಲಾಕ್ ಡೌನ್ ಮುಗಿಯುವ ವರೆಗೆ ಪ್ರವಾಸಿಗರು, ಸ್ಥಳೀಯರಿಗೂ ಪ್ರವೇಶ ವಿಲ್ಲ ಎಂದಿದೆ. ಎಲ್ಲಾ ಋತು, ಕಾಲಗಳಲ್ಲಿಯೂ ಆಕರ್ಷಕವಾಗಿ ಕಾಣುವ ಉಂಚಳ್ಳಿ ಜಲಪಾತಕ್ಕೆ ಹೊರ ಊರು, ಜಿಲ್ಲೆ, ರಾಜ್ಯಗಳ ಜನರು ಪ್ರವಾಸಕ್ಕೆ ಬಂದರೆ ಸ್ಥಳಿಯರು ಪಿಕ್ ನಿಕ್ ಎಂದು ಇಲ್ಲಿ ಆಗಮಿಸುವುದು ವಾಡಿಕೆ.
ಏ.30 ರಂದು ಪತ್ತೆಯಾದ ಒಟ್ಟೂ ಸಿದ್ಧಾಪುರದ 39 ಕೋವಿಡ್ ಸೋಂಕಿತರಲ್ಲಿ ಬೀರಲಮಕ್ಕಿಯ 2 + ಮತ್ತು ಕೊಂಡ್ಲಿ 3, ಸುಂಕತ್ತಿ1
ಲಾಕ್ ಡೌನ್ ಅವಧಿಯಲ್ಲಿ ಪ್ರವಾಸ, ಓಡಾಟ ನಿಷಿದ್ಧವಾದರೂ ಕೆಲವರು ವ್ಯವಸ್ಥೆಯ ಕಣ್ಣು ತಪ್ಪಿಸಿ ಇಲ್ಲಿಗೆ ಬರುವುದಿದೆ ಹಾಗಾಗಿ ಪರಿಸರ ಶಾಂತತೆ. ಕೋವಿಡ್ ನಿಂದ ರಕ್ಷಣೆ ಹಿನ್ನೆಲೆಗಳಲ್ಲಿ ಸ್ಥಳೀಯರು ರಸ್ತೆ,ಮುಖ್ಯಧ್ವಾರ ಮುಚ್ಚಿ ಯಾರೂ ಕೋವಿಡ್ ಲಾಕ್ ಡೌನ್ ಅವಧಿಯಲ್ಲಿ ಉಂಚಳ್ಳಿಗೆ ಬರದಂತೆ ಮಾಡಿದ್ದಾರೆ. ಇದರಿಂದಾಗಿ ಕೋವಿಡ್ ವಿಸ್ತರಣೆಗೆ ತಡೆ, ಪರಿಸರ, ಕಾಡುಪ್ರಾಣಿಗಳ ರಕ್ಷಣೆಗೆ ಕೂಡಾ ನೆರವಾಗಲಿದೆ ಎಂದು ನಂಬಲಾಗಿದೆ.