

ಅಮೇರಿಕ ಸಂಯುಕ್ತ ಸಂಸ್ಥಾನದ ಗ್ಲೋಬಲ್ ಸಿಟಿಜನ್ ಬಳಗದ ಹವಾಮಾನ ನ್ಯಾಯಕ್ಕಾಗಿ ಹೋರಾಡುತ್ತಿರುವ ಐವರು ಹೆಣ್ಣುಮಕ್ಕಳ ಸಾಲಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸಾಯಿಮನೆಯ ಬಾಲಕಿ ಕು. ವನ್ಯಾ ಬಾಲಚಂದ್ರ ಹೆಗಡೆ ಯನ್ನು ಗುರುತಿಸಲಾಗಿದೆ.ಚಿಕ್ಕ ವಯಸ್ಸಿನಲ್ಲೇ ಪರಿಸರ ಕುರಿತು ಅಂತರ್ಜಾಲದಲ್ಲಿ ತನ್ನದೇ ಅಂಕಣ ಬರೆಯುವುದರ ಜೊತೆಯಲ್ಲಿ ಪರಿಸರ ವಿಜ್ಞಾನದಲ್ಲಿ ಅತೀವ ಆಸಕ್ತಿ ಹೊಂದಿರುವ ಕು.ವನ್ಯಾ ಅವರಿಗೆ ಗ್ಲೋಬಲ್ ಸಿಟಿಜನ್ ನ್ಯೂಯಾರ್ಕ್ ಕೇಂದ್ರ ಕಚೇರಿ ಗುರುತಿಸಿ ಈ ಮಾನ್ಯತೆ ನೀಡಿರುವುದು ಜಿಲ್ಲೆಗೆ ಕೀರ್ತಿ ತಂದಿದೆ.

