
ಸಿದ್ಧಾಪುರದಲ್ಲಿ ಕೋವಿಡ್ ಪ್ರಮಾಣ ಹೆಚ್ಚುತ್ತಿದೆ. ಯಾವ ಊರಿನಲ್ಲಿ ಎಷ್ಟು ಪ್ರಕರಣಗಳು ಎಂಬುದನ್ನು ಸಮಾಜಮುಖಿ ಇಂದು ಶೇರ್ ಮಾಡುತ್ತಿರುವ ಸುದ್ದಿಗಳಲ್ಲಿ ಪ್ರಕಟಿಸುತಿದ್ದೇವೆ ಆಸಕ್ತರು ಗಮನಿಸಿ, ನಿಮ್ಮ ಆಪ್ತರು ನೆರೆಹೊರೆಯವರಿಗೂ ತಿಳಿಸಿ ಜಾಗೃತರಾಗಲು ಹೇಳಿ…ನಗರದ ಸಾಯಿನಗರ ಒಂದು ಐಗೋಡ್ ಒಂದು…..
ರಾಜ್ಯ ಬಿ.ಜೆ.ಪಿ. ಸರ್ಕಾರ ಪಡಿತರ ಅವಲಂಬಿತ ಅಸಹಾಯಕರ ವಿರುದ್ಧವಾಗಿ ಕೆಲಸ ಮಾಡುತ್ತಾ ಜನವಿರೋಧಿಯಾಗಿ ವರ್ತಿಸುತ್ತಿದೆ ಎಂದು ಆರೋಪಿಸಿರುವ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಅಸಹಾಯಕರಿಗೆ
ನೆರವಾಗಬೇಕಾದ ಕಾಲದಲ್ಲಿ ಅಸಹಾಯಕರಿಗೆ ಅವಹೇಳನ ಮಾಡುವ ಕೆಲಸ ಬಿ.ಜೆ.ಪಿ.ಗೆ ಶೋಭೆ ತರುವುದಿಲ್ಲ ಎಂದು ಖಂಡಿಸಿದ್ದಾರೆ.
ಸಿದ್ಧಾಪುರ ತಾಲೂಕು ಆಸ್ಫತ್ರೆಯಲ್ಲಿ ಕೋವಿಡ್ ವ್ಯ ವಸ್ಥೆಗಳ ಬಗ್ಗೆ ಮಾಹಿತಿ ಪಡೆದು ಮಾತನಾಡಿದ ಅವರು ಕಾಂಗ್ರೆಸ್ ಯಾವಾಗಲೂ ಜನಸಾಮಾನ್ಯರ ಪರ, ಈಗ ಕರೋನಾ ಸಂಕಷ್ಟ ಇರುವುದರಿಂದ ಪ್ರದೇಶ ಕಾಂಗ್ರೆಸ್ ಸಮೀತಿ ಕೋವಿಡ್ ಪೀಡಿತರಿಗೆ ನೆರವಾಗಲು ಕೋವಿಡ್ 19 ಕಾಂಗ್ರೆಸ್ ಸಹಾಯಹಸ್ತ ಕಾರ್ಯಕ್ರಮ ಆಯೋಜಿಸಿದೆ. ಎಐಸಿ.ಸಿ. ಕೆ.ಪಿ.ಸಿ.ಸಿ. ಸೂಚನೆ ಮೇರೆಗೆ ಕೋವಿಡ್ ಪೀಡಿತರು, ಅಸಹಾಯಕರಿಗೆ ಅಗತ್ಯ, ಅನಿವಾರ್ಯ ನೆರವು ನೀಡಲು ಹೆಲ್ಪ್ ಲೈನ್ ಪ್ರಾರಂಭಿಸಿದ್ದೇವೆ ಎಂದರು.
ಶಿರಸಿ ಸರ್ಕಾರಿ ಆಸ್ಪತ್ರೆಯ ಪ್ರಕರಣದ ಬಗ್ಗೆ ತನಗೆ ಸ್ಪಷ್ಟ ಮಾಹಿತಿ ಇಲ್ಲ ಎಂದ ಭೀಮಣ್ಣ ನಾಯ್ಕ ಜನರು ಆತಂಕದಲ್ಲಿರುವ ಸಮಯದಲ್ಲಿ ವ್ಯವಸ್ಥೆ, ವಾತಾವರಣ ಹದಗೆಡಿಸಿದರೆ ಅದಕ್ಕೆ ಕ್ಷಮೆ ಇಲ್ಲ ಎಂದರು.
