
ಸಿದ್ಧಾಪುರ ತಾಲೂಕಿನ ಗವಿನಗುಡ್ಡ, ಹಿರೇಕೈ ಭಾಗದಲ್ಲಿ ಕೋವಿಡ್ ಪ್ರಕರಣಗಳು ಪತ್ತೆಯಾಗುತಿದ್ದು ಇಂದಿನ ವರದಿ ಪ್ರಕಾರ ಹಿರೇಕೈ ಗ್ರಾಮದ 12 ಜನರಲ್ಲಿ ಕರೋನಾ ಸೋಂಕು ದೃಢಪಟ್ಟಿದೆ. ಇವರಲ್ಲಿ ಕೆಲವರು ಬನವಾಸಿ ಕಂಡ್ರಾಜಿಯ ಮದುವೆಯೊಂದರಲ್ಲಿ ಪಾಲ್ಗೊಂಡ ಬಳಿಕ ಜ್ವರದಿಂದ ಬಳಲುತಿದ್ದರು ಎನ್ನಲಾಗಿದೆ.
ಸಿದ್ದಾಪುರ: ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ಉತ್ತರಕನ್ನಡ ಜಿಲ್ಲೆಯಲ್ಲಿರುವ ಎಲ್ಲ ಆಸ್ಪತ್ರೆಗಳು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತವೆ. ಜಿಲ್ಲೆಯ ಜನತೆ ಭಯಪಡುವ ಅವಶ್ಯಕತೆ ಇಲ್ಲ. ಎಲ್ಲರೂ ಒಟ್ಟಾಗಿ ಕೋವಿಡ್ ಎದುರಿಸಬೇಕು ಎಂದು
ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.
ಈ ವರೆಗೆ 2013 ಬೆಡ್ ಗಳಿಂದ ಚಿಕಿತ್ಸೆ ನೀಡಲಾಗುತಿತ್ತು. ಈಗ 4000 ಬೆಡ್ ಗಳು ಲಭ್ಯವಿದ್ದು, ಅವುಗಳಲ್ಲಿ ಒಂದು ಸಾವಿರ ಬೆಡ್ ಗಳು ಆಮ್ಲಜನಕ ಪೂರೈಸಬಹುದಾದ ವ್ಯವಸ್ಥೆ ಮಾಡಲಾಗಿದೆ. -ಶಿವರಾಮ ಹೆಬ್ಬಾರ್
ಅವರು ಇಂದು ಸಿದ್ದಾಪುರ ತಾಲೂಕು ಆಸ್ಪತ್ರೆಯ ಕೋವಿಡ್ ಕೇಂದ್ರ ಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು .
ಸಾರ್ವಜನಿಕರು ಸಹಕರಿಸಿದರೆ 14 ದಿನದ ಲಾಕ್ಡೌನ್ ಬ್ರೇಕ್ ಆಗುತ್ತೆ . ಸಹಕರಿಸದಿದ್ದರೆ ಇದ್ದರೆ ಲಾಕ್ ಡೌನ್ ಮುಂದುವರಿಯುವ ಸಾಧ್ಯತೆ ಇದೆ ಎಂದು ಲಾಕ್ ಡೌನ್ ಮುಂದುವರಿಯಲಿದೆ ಎಂಬ ಸುಳಿವು ಸಚಿವರು ನೀಡಿದರು.
ಶಿರ್ಸಿಯಲ್ಲಿ ಒಂದು ತಾಸಿಗೆ 6000 ಜನಕ್ಕೆ ಆಕ್ಸಿಜನ್ ಪೂರೈಸುವ ಘಟಕವನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು.
ಘಟ್ಟದ ಮೇಲೆ ಮತ್ತು ಘಟ್ಟದ ಕೆಳಗೆ ಪ್ರವಾಸ ದೃಷ್ಟಿಯಿಂದ ಸಮಯ ವ್ಯರ್ಥವಾಗುವುದರಿಂದ ಆರ್ಟಿ ಪಿಸಿಆರ್ ಟೆಸ್ಟಿಂಗ್ ಲ್ಯಾಬ್ ಶೀಘ್ರವಾಗಿ ಶಿರಸಿ ಯಲ್ಲಿ ಪ್ರಾರಂಭಿಸಲಾಗುವುದು.
https://www.youtube.com/watch?v=oca_MLt_Mo8
ಕೋವಿಡ್ ನಿಂದ ಯಾರು ಕೂಡ ಜೀವ ಕಳೆದುಕೊಳ್ಳಬಾರದು ಎಂಬುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ.
ಮುಂಡಗೋಡು, ಸಿದ್ದಾಪುರ ,ಯಲ್ಲಾಪುರ ತಾಲೂಕು ಗಳಿಗೆ ಅನುಕೂಲ ವಾಗುವಂತೆ ಶಿರಸಿ ಯಲ್ಲಿ ಟೆಸ್ಟ್ ಲ್ಯಾಬ್ ಪ್ರಾರಂಭಿಸಲಾಗುವುದು. ಖಾಸಗಿ ಆಸ್ಪತ್ರೆ ಗಳಿಗಿಂತ ಸರಕಾರಿ ಆಸ್ಪತ್ರೆಯಲ್ಲಿ ಎಲ್ಲಾ ವ್ಯವಸ್ಥೆ ಇರುವುದರಿಂದ ಜನರು ತಪ್ಪು ತಿಳಿದುಕೊಳ್ಳದೆ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಯನ್ನ ಪಡೆದುಕೊಳ್ಳುವಂತೆ ವಿನಂತಿಸಿಕೊಂಡರು.
ಸರ್ಕಾರ ಕೋವಿಡ್ ಗಾಗಿ ಜಿಲ್ಲೆಗೆ 5 ಕೋಟಿ ರೂಪಾಯಿನ ಕೊಟ್ಟಿದೆ ಬಡವರಿಗೂ ಆದ್ಯತೆ ಸಿಗಬೇಕು ಸಾರ್ವಜನಿಕರು ಸಹಕಾರ ಕೊಡಬೇಕು ಜಿಲ್ಲೆಯಲ್ಲಿ 563 ಆಕ್ಸಿಜನ್ ಬೆಡ್ , 865 ಸಾದಾ ಬೆಡ್ ಗಳಿದ್ದು 79 ಆಕ್ಸಿಜನ್ ಬೇಡ ಮತ್ತು 45 ಸಾದಾ ಬೆಡ್ ಬಳಕೆಯಲ್ಲಿದ್ದು, ಉಳಿದವು ಖಾಲಿ ಇವೆ. ಯಲ್ಲಾಪುರ, ಕುಮುಟಾ, ಕಾರವಾರ ಹೆಚ್ಚಿನ ಬೆಡ್ ಗಳ ಸಂಖ್ಯೆ ಅವಶ್ಯಕತೆ ಇದ್ದು, ಹತ್ತು-ಹನ್ನೆರಡು ದಿನಗಳೊಳಗಾಗಿ 4 ಸಾವಿರ ಬೆಡ್ ಪೂರೈಕೆಯಾಗಲಿದ್ದು, 1 ಸಾವಿರ ಆಕ್ಸಿಜನ್ ಬೆಡ್ ಮತ್ತು 3 ಸಾವಿರ ಇತರೆ ಬೆಡ್ ಗಳನ್ನು ಒದಗಿಸಲಾಗುವುದು ಕಾರವಾರ ಮತ್ತು ಶಿರಸಿ ಎರಡು ಆಕ್ಸಿಜನ್ ಟ್ಯಾಂಕರ ತರಲು ನಿರ್ಧರಿಸಲಾಗಿದೆ ಈಗ ಜಂಬೊ ಸಿಲೆಂಡರ್ ಗಳ ಮೇಲೆ ಚಿಕಿತ್ಸೆ ನಡಿತಾ ಇದೆ. ಯಲ್ಲಾಪುರದಲ್ಲಿ ಆಕ್ಸಿಜನ್ ಘಟಕ ಅತಿ ಶೀಘ್ರದಲ್ಲಿ ಪ್ರಾರಂಭವಾಗಲಿದ್ದು ಒಂದು ಗಂಟೆಗೆ 150 ಲೀಟರ್ ಉತ್ಪಾದಿಸುವ ಗುರಿಯನ್ನು ಹೊಂದಲಾಗಿದೆ.
ಪರ ಜಿಲ್ಲೆಗಳಿಂದ ಆಗಮಿಸಿದವರು ಕಡ್ಡಾಯವಾಗಿ ಟೆಸ್ಟ್ ಮಾಡಿಸಿಕೊಳ್ಳಬೇಕು ಸಾರ್ವಜನಿಕರಿಗೆ ಹಾಗೂ ತಮ್ಮ ಕುಟುಂಬಕ್ಕೆ ತೊಂದರೆಯಾಗದಂತೆ ಕಾಳಜಿ ವಹಿಸಬೇಕು.
ವೈದ್ಯರು ಬಹಳ ಸಮಯ ಕೆಲಸ ಮಾಡುವುದರಿಂದ ಸಣ್ಣಪುಟ್ಟ ತಪ್ಪುಗಳು ಆಗಬಹುದು. ಸಾರ್ವಜನಿಕರು ಸಹಕರಿಸಬೇಕು. ಸಿರ್ಸಿ ಘಟನೆ ಯಾರಿಗೂ ಸಮಾಧಾನ ತರುವಂತದ್ದಲ್ಲ. ಆದರೆ ವೈದ್ಯರು ನಿಜಸ್ಥಿತಿಯನ್ನು ಹೇಳಿದಾಗ ಆತ್ಮವಿಶ್ವಾಸ ಬರುತ್ತದೆ.
ಜಿಲ್ಲಾ ಪಂಚಾಯತ್ ಸದಸ್ಯ ನಾಗರಾಜ್ ನಾಯ್ಕ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಚಂದ್ರಕಲಾ ನಾಯ್ಕ,
ತಹಸಿಲ್ದಾರ್ ಪ್ರಸಾದ್ ಎಸ್ಸೆ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ರಾವ್, ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿ ಕುಮಾರ್ ನಾಯ್ಕ್, ತಾಲೂಕ ವೈದ್ಯಾಧಿಕಾರಿ ಡಾಕ್ಟರ್ ಲಕ್ಷ್ಮಿಕಾಂತ್, ತಾಲೂಕಾಸ್ಪತ್ರೆಯ ಆಡಳಿತಾಧಿಕಾರಿ ಡಾಕ್ಟರ್ ಪುರಾಣಿಕ್ ಉಪಸ್ಥಿತರಿದ್ದರು.



