

ಕೋವಿಡ್ ಗೆ ಬಲಿಯಾಗುತ್ತಿರುವವರ ಸಂಖ್ಯೆ ಏರುತ್ತಿದೆ. ಕಳೆದ ಎರಡು ದಿವಸಗಳ ಹಿಂದೆ ಸೊರಬಾ ಮಾ ಕೊಪ್ಪದ ತಾ.ಪಂ. ಮಾಜಿ ಅಧ್ಯಕ್ಷ ಫಕೀರಪ್ಪ ನಿಧನರಾಗಿದ್ದಾರೆ. ಮಾಕೊಪ್ಪ ಫಕೀರಪ್ಪ ಬಂಗಾರಪ್ಪನವರ ಅನುಯಾಯಿಯಾಗಿದ್ದು ಹೋರಾಟದಿಂದ ರಾಜಕೀಯ ಕ್ಷೇತ್ರಕ್ಕೆ ಬಂದವರಾಗಿದ್ದರು.


ರಾಜುಧೂಳಿ-
ಅಖಿಲ ಭಾರತ ಹಿಂದು ಮಹಾಸಭಾದ ರಾಜ್ಯಾಧ್ಯಕ್ಷರು, ಭಾರತೀಯ ಜನತಾ ಪಕ್ಷದ ಮುಖಂಡ ರಾಜು ಧೂಳಿ ಅವರು ಕೊರೊನಾ ಸೋಂಕಿನಿಂದ ಇಂದು ನಿಧನರಾಗಿದ್ದಾರೆ.
ರಾಜು ಧೂಳಿ ಅವರು ಹಳಿಯಾಳ ಭಾಗದಲ್ಲಿ ಭಾರತೀಯ ಜನತಾ ಪಕ್ಷದವನ್ನು ತಳ್ಳಮಟ್ಟದಿಂದ ಕಟ್ಟಿ ಬೆಳೆಸಿ ಪಕ್ಷದ ನೀಡಿದ ಎಲ್ಲಾ ಜವಾಬ್ದಾರಿಯನ್ನು ಅತ್ಯಂತ ಶ್ರದ್ಧೆಯಿಂದ ನಿರ್ವಹಿಸಿದ್ದರು ಅವರ ಅಗಲಿಕೆಯಿಂದ ಪಕ್ಷಕ್ಕೆ ತುಂಬಲಾರದ ನಷ್ಟ ಉಂಟಾಗಿದೆ.
ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಿ, ಕುಟುಂಬ ವರ್ಗದವರಿಗೆ ಹಾಗೂ ಸಹಸ್ರಾರು ಅಭಿಮಾನಿಗಳಿಗೆ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಭಾವುಕನಾಗಿ ಪ್ರಾರ್ಥಿಸುತ್ತೇನೆ. ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಶೋಕ ಸಂದೇಶ ತಿಳಿಸಿದ್ದಾರೆ.
