

ಉತ್ತರ ಕನ್ನಡ ಜಿಲ್ಲಾಡಳಿತದಿಂದ ಸಹಾಯವಾಣಿ ಆರಂಭ
ಜಿಲ್ಲಾಮಟ್ಟದ ಸಹಾಯವಾಣಿ ಸಂಖ್ಯೆಗಳು
ವಿಪತ್ತು ನಿರ್ವಹಣೆ ಟೋಲ್ ಫ್ರೀ: 1077
ಡಿ.ಸಿ. ಕಚೇರಿ ನಿಯಂತ್ರಣ ಕೊಠಡಿ: 08382 229857
ಜಿಲ್ಲಾ ಕೋವಿಡ್ ವಾರ್ ರೂಂ: 08382 295738
ಜಿಲ್ಲಾ ವಿಪತ್ತು ನಿರ್ವಹಣೆ ವಾಟ್ಸ್‌ಆ್ಯಪ್: 94835 11015
ಕೋವಿಡ್: ತಾಲ್ಲೂಕುಗಳಲ್ಲಿ ಅಹವಾಲು ಸ್ವೀಕಾರ ವ್ಯವಸ್ಥೆ
ಕಾರವಾರ: 08382 226331
ಅಂಕೋಲಾ: 08388 230243
ಕುಮಟಾ: 08386 222054
ಹೊನ್ನಾವರ: 08387 220262
ಭಟ್ಕಳ: 08385 226422
ಶಿರಸಿ: 08384 226383
ಸಿದ್ದಾಪುರ: 08389 230127
ಯಲ್ಲಾಪುರ: 08419 261129
ಮುಂಡಗೋಡ: 08301 222122
ಹಳಿಯಾಳ: 08284 220134
ದಾಂಡೇಲಿ: 08284 295959
ದಿನದಿಂದ ದಿನಕ್ಕೆ ಉತ್ತರ ಕನ್ನಡ ಜಿಲ್ಲೆಯ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಎರಡನೇ ಅಲೆಯ ಸಿದ್ಧಾಪುರದ 280 ಕೇಸ್ ಗಳೊಂದಿಗೆ ಈವರೆಗೆ ಒಟ್ಟೂ1145 ಪ್ರಕರಣಗಳು ಸಿದ್ಧಾಪುರದಲ್ಲೇ ಇವೆ. ಜಿಲ್ಲೆಯಲ್ಲಿ ಪ್ರತಿದಿನ ಸಾವಿರದ ಸಮೀಪ ಕೋವಿಡ್ ಸೋಂಕಿತರು ಪತ್ತೆಯಾಗುತಿದ್ದಾರೆ. ಸಿದ್ಧಾಪುರ ಸೇರಿದಂತೆ ಕೆಲವು ತಾಲೂಕುಗಳಲ್ಲಿ ಅಪಾಯದ ಪ್ರಕರಣಗಳನ್ನು ಹೊರ ತಾಲೂಕು, ಜಿಲ್ಲೆಗಳಿಗೆ ಸಾಗಹಾಕಲಾಗುತ್ತಿದೆ.
ಕಾರವಾರದಲ್ಲಿ ಕೋವಿಡ್ ನಿರ್ವಹಣೆ ಜವಾಬ್ಧಾರಿ ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಗಳ ಬದಲು ವೈದ್ಯಕೀಯ ಶಿಕ್ಷಣ ಇಲಾಖೆಗೆ ನೀಡಲಾಗಿದೆ. ಜಿಲ್ಲಾಡಳಿತ, ಪ್ರಮುಖ ಅಧಿಕಾರಿಗಳನ್ನೇ ಅಸಹಾಯಕರನ್ನಾಗಿ ಮಾಡಿರುವ ಸರ್ಕಾರ ಕಾರವಾರದ ಕೋವಿಡ್ ಸೋಂಕಿತರಿಗೆ ಸಮಯಕ್ಕೆ ಸರಿಯಾಗಿ ಆಹಾರ, ಊಟೋಪಚಾರವನ್ನೂ ಮಾಡುತ್ತಿಲ್ಲ ಎನ್ನುವ ಗುರುತರ ಆರೋಪಗಳಿವೆ. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಚಲ್ತಾಹೈ ರೀತಿ ವರ್ತಿಸುತಿದ್ದರೆ.. ಇವರನ್ನು ಚುರುಕುಮಾಡಬೇಕಾದ ಕಾಂಗ್ರೆಸ್ ಮುಖಂಡರು ‘ಬಹಳ ಚೆನ್ನಾಗಿದೆ ಎಂದು ಆಡಳಿತಾರೂಢರ ಬೇಜವಾಬ್ಧಾರಿಯನ್ನು ಬೆಂಬಲಿಸುತಿದ್ದಾರೆ. ಉತ್ತರ ಕನ್ನಡ ಮತ್ತೊಂದು ಚಾಮರಾಜನಗರ ಆಗದಿರಲಿ ಎಂದು ಆಶಿಸಬೇಕಷ್ಟೆ.
ಟಿ.ಎಂ.ಸಿ. ಶಾಸಕಾಂಗ ಪಕ್ಷದ ನಾಯಕಿಯಾಗಿ ಮಮತಾ ಅವಿರೋಧ ಆಯ್ಕೆ; ಮೇ 5ಕ್ಕೆ ಸಿಎಂ ಆಗಿ ಪ್ರಮಾಣವಚನ
ಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿಯಾಗಿ ತೃಣಮೂಲ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಮಮತಾ ಬ್ಯಾನರ್ಜಿ ಅವರು ಮೇ 5ರಂದು ಪ್ರಮಾಮ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ.

ಕೋಲ್ಕತಾ: ಪಶ್ಚಿಮ ಬಂಗಾಳದ ನೂತನ ಮುಖ್ಯಮಂತ್ರಿಯಾಗಿ ತೃಣಮೂಲ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಮಮತಾ ಬ್ಯಾನರ್ಜಿ ಅವರು ಮೇ 5ರಂದು ಪ್ರಮಾಮ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಫಲಿತಾಂಶದ ಬೆನ್ನಲ್ಲೇ ಇಂದು ನಡೆದ ಟಿಎಂಸಿ ಶಾಸಕಾಂಗ ಸಭೆಯಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಶಾಸಕಾಂಗ ಪಕ್ಷದ ನಾಯಕಿಯಾಗಿ ಅಧಿಕೃತವಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಆ ಮೂಲಕ ಮಮತಾ ಬ್ಯಾನರ್ಜಿ ಅವರು ಸತತ ಮೂರನೇ ಬಾರಿಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

https://imasdk.googleapis.com/js/core/bridge3.453.0_en.html#goog_1253804149
ಇದೇ ಮೇ 5ರಂದು ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದ್ದು, ಮಮತಾ ಬ್ಯಾನರ್ಜಿ ಅವರೊಂದಿಗೆ ಯಾರೆಲ್ಲಾ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬುದು ತಿಳಿದುಬಂದಿಲ್ಲ.
ಸಂಜೆ 7 ಗಂಟೆಗೆ ರಾಜ್ಯಪಾಲರ ಭೇಟಿ
ಇನ್ನು ಇಂದು ಸಂಜೆ ರಾಜ್ಯಪಾಲರನ್ನು ಭೇಟಿ ಮಾಡಲಿರುವ ಮಮತಾ ಬ್ಯಾನರ್ಜಿ ಅವರು ನೂತನ ಸರ್ಕಾರ ರಚನೆ ಮಾಡಲು ಹಕ್ಕು ಮಂಡಿಸಲಿದ್ದಾರೆ. ಇದಕ್ಕಾಗಿ ಇಂದು ಸಂಜೆ 7 ಗಂಟೆಗೆ ಭೇಟಿಗೆ ಅನುಮತಿ ಕೋರಿದ್ದು, ರಾಜ್ಯಪಾಲರ ಕಚೇರಿ ಅನುಮತಿ ನೀಡಿದೆ ಎಂದು ತಿಳಿದುಬಂದಿದೆ.
ನಂದಿಗ್ರಾಮ ಫಲಿತಾಂಶ; ಚುನಾವಣಾ ಆಯೋಗದ ವಿರುದ್ಧ ಕೋರ್ಟ್ ಗೆ ಅರ್ಜಿ
ಇದೇ ವೇಳೆ ನಂದಿಗ್ರಾಮ ಕ್ಷೇತ್ರದ ಫಲಿತಾಂಶದ ಕುರಿತು ಚುನಾವಣಾ ಆಯೋಗದ ಕ್ರಮದ ವಿರುದ್ಧ ಕೋರ್ಟ್ ಗೆ ಅರ್ಜಿ ಸಲ್ಲಿಸುವುದಾಗಿ ಮಮತಾ ಘೋಷಣೆ ಮಾಡಿದ್ದು, ಫಲಿತಾಂಶ ಘೋಷಣೆಯೇ ಗೊಂದಲದಿಂದ ಕೂಡಿದೆ. ಸಾಕಷ್ಟು ಮತಗಳ ಮತಎಣಿಕೆ ಬಾಕಿ ಇರುವಾಗಲೇ ಆಯೋಗ ಫಲಿತಾಂಶ ಘೋಷಣೆ ಮಾಡಿದ್ದು ಅನುಮಾನ ಮೂಡಿಸುತ್ತಿದೆ. ಹೀಗಾಗಿ ಮರು ಮತ ಎಣಿಕೆ ಕುರಿತು ಕೋರ್ಟ್ ಗೆ ಅರ್ಜಿ ಸಲ್ಲಿಸುತ್ತೇವೆ ಎಂದು ಟಿಎಂಸಿ ಹೇಳಿದೆ.
ಈ ಹಿಂದೆ ಇದೇ ವಿಚಾರವಾಗಿ ಮಾತನಾಡಿದ್ದ ಮಮತಾ ಬ್ಯಾನರ್ಜಿ, ‘ನಾನು ಜನರ ತೀರ್ಪನ್ನು ಸ್ವೀಕರಿಸುತ್ತೇನೆ. ಫಲಿತಾಂಶ ಘೋಷಣೆಯ ನಂತರ ಕೆಲವು ಕಾಣದ ಕೈಗಳ ಕೈವಾಡ ನಡೆದಿವೆ. ನಾನು ಅದೇನು ಎಂದು ಶೀಘ್ರ ಬಹಿರಂಗಪಡಿಸುತ್ತೇನೆ. ಈ ಸಂಬಂಧ ಮರು ಮತಎಣಿಕೆ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಹಾಕುತ್ತೇವೆ ಎಂದು ಹೇಳಿದ್ದಾರೆ. (kpc)
