ಹುಷಾರ್……. ಮದುವೆ, ಕಾರ್ಯಕ್ರಮಗಳಿಂದ ಕೋವಿಡ್ ವಿಸ್ತರಣೆ, ಇದು ಕರೋನಾ ಸಲಹೆ-ಮದುವೆ ಮನೆಯಲ್ಲಿ ನಿಯಮ ಉಲ್ಲಂಘಿಸಿದ್ದಕ್ಕೆ ಬಿದ್ದ ಕೇಸ್ ಗಳು

ದೇಶವನ್ನು ತಲ್ಲಣಗೊಳಿಸಿರುವ ಕೋವಿಡ್19ಅನೇಕರನ್ನು ಬಲಿ ಪಡೆದಿದೆ. ರಾಜ್ಯದಾದ್ಯಂತ ವ್ಯಾಪಕವಾಗಿ ವಿಸ್ತ ರಿಸುತ್ತಿರುವ ಕರೋನಾ ಅನೇಕರನ್ನು ಬಲಿ ಪಡೆದಿದೆ. ಮಾರಣಾಂತಿಕವಾಗಿ ವ್ಯಾಪಿಸುತ್ತಿರುವ ಕರೋನಾ ವಿಸ್ತರಣೆ ಹಿಂದೆ ಮದುವೆ, ಹಬ್ಬ, ಕಾರ್ಯಕ್ರಮಗಳ ಪಾತ್ರ ಪ್ರಮುಖವಾಗಿದೆ. ಮಡಿಕೇರಿಯಿಂದ ಕಾರವಾರದವರೆಗೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕರೋನಾ ವಿಸ್ತರಿಸು ತ್ತಿರುವ ಹಿಂದೆ ಚುನಾವಣೆ,ಮದುವೆ, ಮುಂಜಿ ಸೇರಿದ ಪಾರ್ಯಕ್ರಮಗಳೇ ಪ್ರಮುಖ ಪಾತ್ರ ಎನ್ನುವುದನ್ನು ಸಮೀಕ್ಷೆಗಳು ಸಾಬೀತುಮಾಡಿವೆ.

ಶಿರಸಿ ಬನವಾಸಿ ಭಾಗದ ಕೆಲವು ಮದುವೆಗಳಲ್ಲಿ ಪಾಲ್ಗೊಂಡವರಲ್ಲಿ ಬಹುತೇಕ ಜನರಲ್ಲಿ ಕೋವಿಡ್ ಪತ್ತೆಯಾಗಿರುವುದಕ್ಕೆ ನಿದರ್ಶನಗಳಿವೆ. ಶಿರಸಿ-ಸಿದ್ಧಾಪುರ ಸಾಗರ ಸೇರಿದ ಮಲೆನಾಡು ಭಾಗಗಳಲ್ಲಿ, ಕರಾವಳಿ, ಬಯಲುಸೀಮೆಗಳಲ್ಲೂ ಜನ ಸೇರುವ ಕಾರ್ಯಕ್ರಮಗಳಿಂದಲೇ ಕರೋನಾ ವಿಸ್ತರಿಸುತ್ತಿರುವ ಬಗ್ಗೆ ತಜ್ಞರು ಎಚ್ಚರಿಸಿದ್ದಾರೆ.

ಕಳೆದ ವರ್ಷದ ಕರೋನಾ ಮೊದಲ ಅವಧಿಯಲ್ಲಿ ಜನರಲ್ಲಿ ಭಯ, ಆತಂಕಗಳಿದ್ದವು. ಸರ್ಕಾರಗಳೂ ಕೂಡಾ ವಿಳಂಬವಾಗಿಯಾದರೂ ಸಂಪೂರ್ಣ ಲಾಕ್ ಡೌನ್ ಮಾಡಿದ್ದುದು ಕರೋನಾ ಹಿಮ್ಮೆಟ್ಟಿಸಲು ಸಹಕಾರಿಯಾಗಿತ್ತು. ಈ ವರ್ಷ ಕರೋನಾ ರುದ್ರ ನರ್ತನ, ಸಾವು- ನೋವುಗಳ ಮಧ್ಯೆ ಜನರ ನಿರ್ಲಕ್ಷ-ಉಪೇಕ್ಷೆ ಎದ್ದು ಕಾಣುತ್ತಿದೆ. ಮದುವೆ, ಹಬ್ಬ-ಜಾತ್ರೆಗಳಲ್ಲಿ ಪಾಲ್ಗೊಂಡವರು ಕರೋನಾ ಸೋಂಕಿತರಾಗುತ್ತಿರುವುದು ಈಗಿನ ವಿದ್ಯಮಾನಕ್ಕೆ ಉದಾಹರಣೆ.

ಅನಾವಶ್ಯಕ ಭಯ- ಕರೋನಾ ಬರದಂತೆ ಜಾಗೃತಿ ವಹಿಸುವುದು, ಮುನ್ನೆಚ್ಚರಿಕೆ ವಹಿಸುವುದು ಅಪೇಕ್ಷಣೀಯ ಆದರೆ ಕರೋನಾ ಬಾಧಿತರನ್ನು ಅಸ್ಪೃಶ್ಯರಂತೆ ನೋಡುವುದು ಸಮಾಜದ ಸಾಮಾಜಿಕ ಕ್ಷೋಭೆಯಾಗಿ ಕಾಣುತ್ತಿದೆ. ಆಸ್ಫತ್ರೆಗಳಲ್ಲಿ ಕರೋನಾ ಬಾಧಿತರಿಗೆ ಸೇವೆ ಮಾಡಲು ಹಿಂಜರಿಯುವುದು, ಮೃತ ಕರೋನಾ ಸೋಂಕಿತರನ್ನು ಅಂತ್ಯಸಂಸ್ಕಾರ ಮಾಡಲು ಸಂಬಂಧಿಗಳೇ ಹಿಂದೇಟು ಹಾಕುವುದು ಸೇರಿದಂತೆ ಅನೇಕ ರಗಳೆ, ಅಸಹ್ಯಗಳಿಗೆ ಈಗಿನ ಕರೋನಾ ಭಯ ಕಾರಣವಾಗುತ್ತಿದೆ. ಆದರೆ ಅನುಭವಿಗಳು, ಶುಸ್ರುಕಿಯರು, ಕರೋನಾ ಬಾಧಿತರ ಚಿಕಿತ್ಸೆ ಮಾಡುತ್ತಿರುವ ಜನರು, ವೈದ್ಯರು, ಸ್ವಯಂ ಸೇವಕರು ಕರೋನಾ ಬಾಧಿತರಿಗೆ ನೆರವು ನೀಡುತಿದ್ದು ಮುನ್ನೆಚ್ಚರಿಕೆ, ಮುಂಜಾಗೃತೆ, ಕರೋನಾ ನೀತಿ-ನಿಯಮ, ಶಿಸ್ತು ಪಾಲನೆ ಗಳಿಂದ ಕರೋನಾ ಬಾಧಿತರ ಜೊತೆಗಿದ್ದೂ ಕರೋನಾ ಬರದಂತೆ ಸುರಕ್ಷಿಯವಾಗಿರಬಹುದೆಂಬುದನ್ನೂ ಲಕ್ಷಾಂತರ ಜನರು ನಿರೂಪಿಸಿದ್ದಾರೆ.

ಮದುವೆಯಲ್ಲಿ ಕೋವಿಡ್ ನಿಯಮ ಉಲ್ಲಂಘನೆ: ಹಾಸ್ಯನಟಿ ಸುಗಂಧ ಮಿಶ್ರಾ, ಇತರರ ವಿರುದ್ಧ ಕೇಸ್ ದಾಖಲು

ಹಾಸ್ಯನಟಿ ಸುಗಂಧ ಮಿಶ್ರಾ ಅವರು ಕಳೆದ ವಾರ ಇಲ್ಲಿನ ರೆಸಾರ್ಟ್‌ ವೊಂದರಲ್ಲಿ ಹಾಸ್ಯನಟ ಸಂಕೇತ್ ಭೋಸಲೆ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಮದುವೆ ಸಮಾರಂಭದಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದ….

sugandh

ಫಗ್ವಾರಾ: ಹಾಸ್ಯನಟಿ ಸುಗಂಧ ಮಿಶ್ರಾ ಅವರು ಕಳೆದ ವಾರ ಇಲ್ಲಿನ ರೆಸಾರ್ಟ್‌ ವೊಂದರಲ್ಲಿ ಹಾಸ್ಯನಟ ಸಂಕೇತ್ ಭೋಸಲೆ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಮದುವೆ ಸಮಾರಂಭದಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ನಟಿ ಹಾಗೂ ಇತರರ ವಿರುದ್ಧ ಕೇಸ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮದುವೆಯಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿ ಹೆಚ್ಚಿನ ಜನರು ಭಾಗವಹಿಸಿದ ವಿಡಿಯೋ ವೈರಲ್ ಆದ ನಂತರ ಸುಗಂಧ ಮಿಶ್ರಾ ಹಾಗೂ ವರನ ಕಡೆಯವರು, ರೆಸಾರ್ಟ್‌ ಮಾಲೀಕರು ಮತ್ತು ಮದುವೆಯಲ್ಲಿ ಭಾಗವಹಿಸಿದವರ ವಿರುದ್ಧ ಬುಧವಾರ ರಾತ್ರಿ ಪ್ರಕರಣ ದಾಖಲಿಸಲಾಗಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಪರಮ್‌ಜಿತ್ ಸಿಂಗ್ ಹೇಳಿದ್ದಾರೆ.

https://imasdk.googleapis.com/js/core/bridge3.453.0_en.html#goog_181582685

ಏಪ್ರಿಲ್ 26 ರಂದು ಈ ಮದುವೆ ಸಮಾರಂಭ ನಡೆದಿತ್ತು.

ಭಾರತೀಯ ದಂಡ ಸಂಹಿತೆ ಮತ್ತು ವಿಪತ್ತು ನಿರ್ವಹಣಾ ಕಾಯ್ದೆಯ ಸೆಕ್ಷನ್ 188 ಅಡಿಯಲ್ಲಿ ಕೇಸ್ ದಾಖಲಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ.

ಜಲಂಧರ್ ಮೂಲದ ಮಿಶ್ರಾ ಹಾಗೂ ಮಹಾರಾಷ್ಟ್ರ ಮೂಲದ ಭೋಸಲೆ ಇಬ್ಬರೂ ‘ದಿ ಕಪಿಲ್ ಶರ್ಮಾ ಶೋ’ ಮೂಲಕ ಖ್ಯಾತಿ ಗಳಿಸಿದ್ದರು. (kpc)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಗಾಂಧಿ ಜಯಂತಿ… ಚಿತ್ರ-ಸುದ್ದಿಗಳು & ವಿಡಿಯೋಗಳು….

ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸದಸ್ಯರು ಸಿದ್ದಾಪುರ ತಾಲೂಕಿನ 19 ಬಸ್‌ ನಿಲ್ಧಾಣಗಳನ್ನು ಸ್ವಚ್ಛಗೊಳಿಸಿ ಗಾಂಧಿ ಜಯಂತಿ ಆಚರಿಸಿದರು. ಸರ್ಕಾರಿ ಪ.ಪೂ.ಕಾಲೇಜ್‌ ನಾಣಿಕಟ್ಟಾದ ಗಾಂಧಿಜಯಂತಿ...

ಸಾಹಿತಿಗಳು, ಹೋರಾಟಗಾರರಿಗೆ ಸಾವಿಲ್ಲ….ಹಾವಿನ ಹಂದರದಿಂದ ಹೂವ ತಂದವರು ಬಿಡುಗಡೆ

ಸಾಹಿತಿಗಳು ಮತ್ತು ಹೋರಾಟಗಾರರಿಗೆ ಸಾವೇ ಇಲ್ಲ. ಅವರು ಅವರ ಕೃತಿಗಳ ಮೂಲಕ ಸಾವಿನ ನಂತರ ಕೂಡಾ ಚಿರಂಜೀವಿಗಳಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದಿರುವ ಕ.ಸಾ.ಪ. ರಾಜ್ಯಾಧ್ಯ...

ಇಂದಿನ ಅಪಸವ್ಯಗಳಿಗೆ ಅಂದಿನ ಗಾಂಧಿ ಪರಿಹಾರ

ವೈಯಕ್ತಿಕ ನೈತಿಕತೆ, ಸಾಮಾಜಿಕ ಶಿಸ್ತು,ಸಾರ್ವಜನಿಕ ಸಿಗ್ಗಿನ ಬಗ್ಗೆ ಪ್ರತಿಪಾದಿಸಿದ ಮಹಾತ್ಮಾಗಾಂಧಿಜಿ ಇಂದಿನ ಸಮಸ್ಯೆ,ಸಾಮಾಜಿಕ ಅಪಸವ್ಯಗಳಿಗೆ ಅಂದೇ ಪರಿಹಾರ ಸೂಚಿಸಿದ್ದರು. ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.‌...

ಹಲಗೇರಿಯ ರೇಪ್‌ ಆರೋಪಿಗೆ ಹತ್ತು ವರ್ಷಗಳ ಕಠಿಣ ಶಿಕ್ಷೆ, ದಂಡ

ಸಿದ್ಧಾಪುರ ಹಲಗೇರಿಯ ವೀರಭದ್ರ ತಿಮ್ಮಾ ನಾಯ್ಕ ನಿಗೆ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಶಿಕ್ಷೆ ಮತ್ತು ೩೦...

ವಿಭಾಗ ಮಟ್ಟದ ವಾಲಿಬಾಲ್‌ ಪಂದ್ಯಾವಳಿ, ಆಮಂತ್ರಣ ಪತ್ರಿಕೆ ಬಿಡುಗಡೆ

ಸಿದ್ದಾಪುರ: ಅಕ್ಟೋಬರ 7 ಮತ್ತು 8 ರಂದು ಸಿದ್ದಾಪುರದ ನೆಹರೂ ಮೈದಾನದಲ್ಲಿ ನಡೆಯಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಬೆಳಗಾವಿ ವಿಭಾಗ ಮಟ್ಟದ ಹೊನಲು-ಬೆಳಕಿನ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *