ಹೊನ್ನಾವರ ಮೂಲದ ಪ್ರಗತಿಪರ ಸಾಹಿತಿ, ಹೋರಾಟಗಾರ ಕನ್ನಡ ಉಪನ್ಯಾಸಕ ಸಿದ್ಧಾಪುರದ ವಿಠ್ಠಲ್ ಭಂಡಾರಿ ಇಂದು ಸಂಜೆ6.30 ರ ಸಮಯದಲ್ಲಿ ಕೊನೆ ಉಸಿರೆಳೆದಿದ್ದಾರೆ. ಕಳೆದ ವಾರದಿಂದೀಚೆಗೆ ಕೋವಿಡ್ ಸೋಕಿತರಾಗಿ ಸಿದ್ಧಾಪುರದ ಸರ್ಕಾರಿ ಆಸ್ಫತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಫತ್ರೆಗೆ ದಾಖಲಿಸಲಾಗಿತ್ತು.
ಕಳೆದ ಮೂರು ದಿವಸಗಳಿಂದ ಕೋಮಾವಸ್ಥೆಗೆ ಜಾರಿದ್ದ ವಿಠ್ಠಲ್ ಭಂಡಾರಿ ಇಂದು ಚಿರನಿದ್ರೆಗೆ ವಶವಾದರು.
ಹೊನ್ನಾವರದ ಕೆರೆಕೋಣು,ಉತ್ತರ ಕನ್ನಡ ಜಿಲ್ಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಪರಿಚಯಿಸಿದ್ದ ಡಾ. ಆರ್.ವಿ.ಭಂಡಾರಿಯವರ ಪುತ್ರರಾಗಿದ್ದ ವಿಠ್ಠಲ್ ಭಂಡಾರಿ ಪ್ರಗತಿ ಪರ ಸಂಘಟನೆ, ಸಾಹಿತ್ಯ ಚಟುವಟಿಕೆ,ಸಾಹಿತ್ಯ, ಸಾಂಸ್ಕೃತಿಕ ಅಭಿರುಚಿಗಳಿಂದ
ಸದಾ ಕ್ರೀಯಾಶೀಲರಾಗಿ ಡಾ. ಆರ್.ವಿ. ಭಂಡಾರಿಯವರ ನೈಜ ವಾರಸುದಾರರಾಗಿ ಕಾರ್ಯನಿರ್ವಹಿಸಿದ್ದರು.
ರಾಜ್ಯ ಬಂಡಾಯ ಸಂಘಟನೆ, ಬಂಡಾಯ ಪ್ರಕಾಶನ, ಹೊನ್ನಾವರದ ಸಹಯಾನ ಸೇರಿದಂತೆ ಅನೇಕ ಸಂಘ-ಸಂಸ್ಥೆ ಗಳನ್ನು ಕಟ್ಟಿ ಬೆಳೆಸಿದ್ದ ಅವರು ಕನ್ನಡ ಉಪನ್ಯಾಸಕರಾಗಿ ಕೂಡಾ ಹೆಸರು ಮಾಡಿದ್ದರು. ಪತ್ನಿ ಸಿ.ಆಯ್.ಟಿ.ಯು. ರಾಜ್ಯ ಕಾರ್ಯದರ್ಶಿ ಯಮುನಾ ಗಾಂವಕರ್, ಸಹೋದರಿ, ಸಾಹಿತಿ ಮಾಧವಿ ಭಂಡಾರಿ ಸೇರಿದಂತೆ ಅಪಾರ ಸಂಗಾತಿಗಳು, ಬಂಧು ಬಳಗವನ್ನು ಅಗಲಿದ ಡಾ. ವಿಠ್ಠಲ್ ಭಂಡಾರಿಯವರ ಅಕಾಲಿಕ ಸಾವಿಗೆ ರಾಜ್ಯದಾದ್ಯಂತ ನೋವು-ಶೋಕ ವ್ಯಕ್ತವಾಗಿದೆ.