ಅದೆಷ್ಟೋ ಜನರು ಕರೆಮಾಡಿ ಪಕ್ಕಾ ಮಾಡಿಕೊಂಡರು. ಹೌದು ಅವರೆಲ್ಲರ ಅನುಮಾನದಂತೆ ವಿಠ್ಠಲ್ ರಿಗೆ ಸಾವಿಲ್ಲ, ಅವರ ದೇಹ ಮಾತ್ರ ನಿನ್ನೆ ಮಣ್ಣು ಸೇರಿತು ಕಾಂಮ್ರೇಡ್ ವಿಠ್ಠಲ್ ಅಮರ್ ರಹೇ ಎನ್ನುವ ಘೋಷಣೆಯೊಂದಿಗೆ… ಇಂದು ನಿನ್ನೆ, ಮೊನ್ನೆಗಳಿಂದ ಯಮುನಾ ರ ಕರೆ ಸೇರಿ ಕನಿಷ್ಟ ನೂರಾರು ಜನ ಕಂ ಬನಿಯಾದರು ವಿಠ್ಠಲ್ ಗಳಿಸಿದ್ದ ಸ್ವತ್ತದು.
ಡಾ. ಆರ್. ವಿ. ಭಂಡಾರಿಯಂಥ ಕಟ್ಟರ್ ಜಾತ್ಯಾತೀತರು, ಪ್ರಗತಿಪರರು, ಬಂಡಾಯಸಾಹಿತಿಯ ಮಗನಾಗಿದ್ದ ವಿಠ್ಠಲ್ ರನ್ನು ಆರ್.ವಿ.ಯವರ ನೆರಳಲ್ಲಿ ಕಂಡಂಥ ನನ್ನಂಥ ಅದೆಷ್ಟೋ ಜನರಿದ್ದಾರು. ಆದರೆ ವಿಠ್ಠಲ್ ನಿಜ ಕಮ್ಯುನಿಷ್ಟ್ ಆಗಿದ್ದರು. ಅಡುಗೆ ಮನೆಯಲ್ಲಿ ಬಾಣಸಿಗನಾಗಿ, ಸಂಗಾತಿ ಯಮುನಾರಿಗೆ ಸಂಸಾರ, ಹೋರಾಟ, ಓಡಾಟಕ್ಕೆ ಹೆಗಲುಕೊಟ್ಟವರಾಗಿ ಮಹಿಳಾ ಸಮಾನತೆ, ಜಾತಿಸಮಾನತೆ, ಧರ್ಮಸಮನ್ವಯತೆ ಎಲ್ಲದರಲ್ಲೂ ವಿಠ್ಠಲ್ ರಿಗೆ ಅವರೇ ಸಾಟಿ. ಕಾಲಿಗೆ ಗೆಜ್ಜೆಕಟ್ಟಿಕೊಂಡಂತೆ ತಿರುಗುತ್ತಾ, ಓದುತ್ತಾ, ಅಲೆಯುತ್ತಾ ವಿಠ್ಠಲ್ ಕ್ರೀಯಾಶೀಲತೆಗೆ ಇನ್ನೊಂದು ಹೆಸರಾಗಿದ್ದವರು.
ಹೋರಾಟದ ಸಂಗಾತಿಗಳೊಂದಿಗೆ ಸಲುಗೆ, ಪ್ರೀತಿಯ ಬಿಗುಹಿಡಿತದಿಂದಲೇ ಮಾತನಾಡುತಿದ್ದ ವಿಠ್ಠಲ್ ಮನಸ್ಸು ಹೃದಯ ಮಗುವಿನಂತಿತ್ತು.
ಡಾ. ಸರ್ಜಾಶಂಕರ್ ಹರಳೀಮಠ ನಮ್ಮ ಹಿರಿಯ ಅಣ್ಣನಂಥ ಸ್ನೇಹಿತರು ಬಹಳ ದಿನಗಳ ನಂತರ ಕರೆಮಾಡಿ ಮಾತನಾಡಿದವರು ವಿಠ್ಠಲ್ ಭಂಡಾರಿಯವರ ಬಗ್ಗೆ ಕೇಳಿಸಿಕೊಂಡರು. ಶಿವಮೊಗ್ಗದ ಸರ್ಜಾಶಂಕರ್ ಹರಳೀಮಠ ಸಿದ್ಧಾಂತ,ಬದುಕು, ಆಚರಣೆ, ಸಹಜತೆಗಳಲ್ಲಿ ಎತ್ತರದಲ್ಲಿದ್ದವರು. ಅಂತರ್ಜಾತಿ ವಿವಾಹವಾದ ಅವರ ಕುಟುಂಬದಲ್ಲಿ ನೆಲೆಸಿರುವ ಶಾಂತಿಯ ಹಿಂದೆ ಅವರ ಆತ್ಮನಿರ್ಭರತೆ ಇದೆ. ಪರಸ್ಪರ ಕುಟುಂಬದ ಸದಸ್ಯರ ನಡುವಿನ ಪ್ರೀತಿ-ಸಹಜತೆ,ಸ್ವಾತಂತ್ರ್ಯ,ನಿರಾಡಂಬರತೆ ಗಳಿಗೆ ಅವರ ವ್ಯಕ್ತಿತ್ವ, ಕುಟುಂಬಗಳೇ ದೃಷ್ಟಾಂತ. ಸರ್ಜಾಶಂಕರರ ಸಹಜತೆ, ಜಾತ್ಯಾತೀತತೆ,ಸಾಮಾಜಿ ಕಾಳಜಿ,ಬದ್ಧತೆಗಳಿಗೆ ಸರಿಗಟ್ಟುವ ವಾತಾವರಣ ನಿರ್ಮಿಸಿಕೊಂಡು ಬದುಕುತಿದ್ದವರು ಯಮುನಾ ವಿಠ್ಠಲ್ ಸಂಗಾತಿಗಳು. ಬಹುವರ್ಷಗಳ ಯಮುನಾ ವಿಠ್ಠಲರ ಸ್ನೇಹ, ಕೆಲವು ವರ್ಷಗಳ ಸರ್ಜಾಶಂಕರರ ದೋಸ್ತಿ ನಮ್ಮಂಥವರಿಗೆ ಆಪ್ತವಾಗಿ ಮಾದರಿಯಾಗಿದ್ದರೆ ಅದಕ್ಕೆ ಕಾರಣ ಅವರ ಮೇಲಿನ ಪ್ರೀತಿ ಮತ್ತವರ ಸಹಜ ಬದ್ಧತೆಯ ಬದುಕಿನ ರೀತಿ. ಅಣ್ಣನಂಥ ಗುರು, ಗುರುವಿನಂಥ ವಿಠ್ಠಲ್ ಅಣ್ಣನ ಬಗ್ಗೆ ಕೇಳುತಿದ್ದರೆ ಮಾತು ಬತ್ತಿಹೋದಂತಿತ್ತು. ಪ್ರಜಾವಾಣಿಗೆ ರವೀಂದ್ರ ಬಳಗುಳಿ ಅನಿಸಿಕೆ ಕೇಳಿದಾಗಲೂ. ಇದ್ದಾಗ ಮರೆಯಾದಾಗ ಕೂಡಾ ನಮ್ಮ ಎದೆಯಲ್ಲುಳಿಯುವ ಇಂಥವರ ಭಾವ ನಮ್ಮದಾಗಬೇಕಷ್ಟೇ.