

ಉತ್ತರ ಕನ್ನಡ ಜಿಲ್ಲೆ, ರಾಜ್ಯ, ದೇಶ ಅನೇಕ ಪಕ್ಷ, ರಾಜಕಾರಣಿಗಳನ್ನು ಕಂಡಿದೆ. ಅಂಥವರಲ್ಲಿ ನರೇಂದ್ರ ಮೋದಿ, ವಿಶ್ವೇ ಶ್ವರ ಹೆಗಡೆ, ಅನಂತಕುಮಾರ ಹೆಗಡೆ ಸೇರಿದ ನೂರಾರು ಜನರಿದ್ದಾರು. ಮಿ.ಪ್ರತಿಪಕ್ಷ ಲೋಹಿಯಾ ಅನಾರೋಗ್ಯಕ್ಕೀಡಾದಾಗ ಸರ್ಕಾರಿ ಆಸ್ಫತ್ರೆ ಬಿಟ್ಟು ಕಾಸಗಿ ಆಸ್ಫತ್ರೆಯಲ್ಲಿ ಚಿಕಿತ್ಸೆ ಬೇಡ ಎಂದು ವಿರೋಧಿಸಿದ್ದರು. ರಾಜ್ಯ ವಿಧಾನಸಭಾ ಅಧ್ಯಕ್ಷ ಕಾಗೇರಿ ಬಡವರಿಗೆ ಚಿಕಿತ್ಸೆ ನೀಡದ ಶಿರಸಿ ಟಿ.ಎಸ್.ಎಸ್. ಆಸ್ಫತ್ರೆಯ ವಿಶೇಷ ಮುತುವರ್ಜಿಯ ವ್ಯವಸ್ಥೆಯಲ್ಲಿ ಕೋವಿಡ್ ಚಿಕಿತ್ಸೆ ಪಡೆದರೆಂದು ಕೇಳಿದೆ.
ಉತ್ತರ ಕನ್ನಡದ ಕಾಲುಶತಮಾನದ ಸಂಸದ ಅನಂತ ಹೆಗಡೆ ತಾವೂ ಪಾಲುದಾರರಾದ ಕೆ.ಎಸ್. ಹೆಗಡೆ ಆಸ್ಫತ್ರೆಯಲ್ಲಿ ಹೈಟೆಕ್ ಚಿಕಿತ್ಸೆ ಪಡೆದರು. ಇರಲಿ ಅವರ ಪ್ರಾಣ, ಭವಿಷ್ಯವೂ ಮಹತ್ವದ್ದೇ…. ಆದರೆ ಲಾಕ್ ಡೌನ್ ನೆಪದಲ್ಲಿ ದಿನಸಿ, ತರಕಾರಿ ಮಾರುವ ಮಾಫಿಯಾ ಸೃಷ್ಟಿಸಿರುವ ಶಿರಸಿ-ಸಿದ್ಧಾಪುರದ ಅಧಿಕಾರಿಗಳನ್ನು ನಿಯಂತ್ರಿಸುವ ತಾಕತ್ತಿಲ್ಲದ ಜನಪ್ರತಿನಿಧಿಗಳು ಕರೋನಾ ಲೂಟಿಯ ಪಾಲುದಾರರಾಗಿ ಉತ್ತರ ಕನ್ನಡವನ್ನು ದೋಚುತಿದ್ದಾರೆ. ಇದರ ನಡುವೆ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಜನಮೆಚ್ಚುವ ಕೆಲಸ ಮಾಡಿದ್ದಾರೆ.
ಜನಸಾಮಾನ್ಯರು ಹೇಳುವಂತೆ 25 ವರ್ಷಗಳಿಗಿಂತ ಹೆಚ್ಚು ಕಾಲ ಜನಪ್ರತಿನಿಧಿಗಳಾದ ಶಿರಸಿಯ ವಿಶ್ವೇಶ್ವರ ಹೆಗಡೆ, ಅನಂತಹೆಗಡೆ ಗಳಿಗೆ ಹಿಂದುತ್ವದ ಭಾಷಣದ ಮೇಲೆ ಮತದಾನ ಮಾಡುವ ಮೂರ್ಖರಿಗೆ ಅವರನ್ನು ಪ್ರಶ್ನಿಸುವ ನೈತಿಕತೆಯಾದರೂ ಉಳಿದಿದೆಯಾ? ಸಿದ್ಧಾಪುರ, ಶಿರಸಿ ಸೇರಿದಂತೆ ಉತ್ತರ ಕನ್ನಡದಿಂದ ಸಾಗಹಾಕುವ ರೋಗಿಗಳಲ್ಲಿ ಬಹಳಷ್ಟು ಜನ ಹೆಣವಾಗಿ ಊರಿಗೂ ಮರಳುತ್ತಿಲ್ಲ ಎನ್ನುವ ವಾಸ್ತವ ರಾಷ್ಟ್ರೀಯವಾದಿ, ಹಿಂದುತ್ವವಾದಿ ಜನಪ್ರತಿನಿಧಿಗಳಿಗೆ ಅರ್ಥವಾಗುತ್ತಿದೆಯಾ…….ಜನ ಪ್ರಶ್ನೆ ಮಾಡಿದ್ದರೆ ಉತ್ತರ ಕನ್ನಡ ಉತ್ತರ ಕಾಣದ ಮತಾಂಧರ ಜಿಲ್ಲೆ ಎಂಬ ಆರೋಪಕ್ಕೆ ಒಳಗಾಗುತಿತ್ತೇ?

ಹೆಬ್ಬಾರ್ ಕೋವಿಡ್ ಹೆಲ್ಪ್ ಲೈನ್ ಇಂದು ಯಲ್ಲಾಪುರ ಪಟ್ಟಣದ ತಾಲೂಕಾ ಪಂಚಾಯತ ಆವರಣದಲ್ಲಿ ಪಕ್ಷದ ಗಣ್ಯರ ಸಮ್ಮುಖದಲ್ಲಿ ” ಹೆಬ್ಬಾರ್ ಕೋವಿಡ್ ಹೆಲ್ಪ್ ಲೈನ್ ” ವಾಹನಕ್ಕೆ ಚಾಲನೆ ನೀಡಲಾಯಿತು. ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಪ್ರತಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಕೋವಿಂಡ್ ಸೋಂಕಿತರನ್ನು ಆಸ್ಪತ್ರೆಗೆ ಸಾಗಿಸಲು ಒಂದೊಂದು ವಾಹನವನ್ನು ಉಚಿತವಾಗಿ ನೀಡಲಾಗಿದೆ. ಈ ಹೆಲ್ಪ್ ಲೈನ್ ಸಂಖ್ಯೆ ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲಿದ್ದು, ಸಾರ್ವಜನಿಕರು ಮತ್ತು ಪಕ್ಷದ ಕಾರ್ಯಕರ್ತರು ಹೆಬ್ಬಾರ್ ಕೋವಿಡ್ ಹೆಲ್ಪ್ ಲೈನ್ ಸಂಖ್ಯೆಗೆ ಕರೆ ಮಾಡಿ ಕೋವಿಡ್ ಸೋಂಕಿತರನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗಬೇಕಾಗಿ ವಿನಂತಿಸಿಕೊಳ್ಳುತ್ತೇವೆ.ಸಹಾಯವಾಣಿ ಸಂಖ್ಯೆ +918050749099+918050767599
