ಶಿರಸಿ ಎಂ.ಇ.ಎಸ್. ಕಾಲೇಜಿನ ನಿವೃತ್ತ ಉಪನ್ಯಾಸಕ ಎಸ್. ವಿ.ಹೆಗಡೆ ಇಂದು ಸಾಗರದಲ್ಲಿ ನಿಧನರಾದರು. ಸಿದ್ಧಾಪುರದ ಪ್ರತಿಷ್ಥಿತ ದೊಡ್ಮನೆ ಕುಟುಂಬದ ಸದಸ್ಯರಾಗಿದ್ದ ಎಸ್.ವಿ.ಹೆಗಡೆ ಸಮಾಜಶಾಸ್ತ್ರ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು.
ರಾಮಚಂದ್ರ ಗಣೇಶ ಭಟ್ಟ
ಸಿದ್ದಾಪುರ: ತಾಲೂಕಿನ ಹೆಗ್ಗಾರಹಳ್ಳಿಯ ನಿವಾಸಿ ಪುರೋಹಿತ ರಾಮಚಂದ್ರ ಗಣೇಶ ಭಟ್ಟ (78) ಅವರು ಶನಿವಾರ ನಿಧನ ಹೊಂದಿದರು.
ಅವರಿಗೆ ಪತ್ನಿ, ಇಬ್ಬರು ಪುತ್ರಿಯರು ಹಾಗೂ ಪುತ್ರ ಜೋತಿಷಿ, ಯಕ್ಷಗಾನ ಸಂಘಟಕ ಮನೋಜ ಭಟ್ಟ ಹಾಗೂ ಅಪಾರ ಬಂಧು- ಬಳಗ ಹಾಗೂ ಶಿಷ್ಯರು ಇದ್ದಾರೆ.
ರಾಮಚಂದ್ರ ಭಟ್ಟ ಅವರು ಸಿದ್ದಾಪುರ ಪಟ್ಟಣದ ಕೆಇಬಿ ಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಅರ್ಚಕರಾಗಿದ್ದರು. ಯಕ್ಷಗಾನದ ಹವ್ಯಾಸಿ ಕಲಾವಿದರಾಗಿಯೂ ಪಾತ್ರ ನಿರ್ವಹಣೆ ಮಾಡುತ್ತಿದ್ದರು. ಕೊಳಗಿ-ಶಿರಳಗಿ ಮೇಳದಲ್ಲಿ ಸಕ್ರಿಯ ಕಲಾವಿದರಾಗಿಯೂ ಸೇವೆ ಸಲ್ಲಿಸಿದ್ದರು. ಪೋಷಕ ಪಾತ್ರಗಳಾದ ನಾರದ, ಗರುಡ ಮುಂತಾದ ಪಾತ್ರ ನಿರ್ವಹಣೆಯಲ್ಲಿ ಹೆಸರುವಾಸಿಯಾಗಿದ್ದರು.