ಕೋವಿಡ್-19 ವಿರುದ್ಧ ಹಸುವಿನ ಸೆಗಣಿ ಥೆರಪಿ ಕುರಿತು ಗುಜರಾತಿನ ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಹಸುವಿನ ಸಗಣಿಯನ್ನು ಮೈಗೆ ಮೆತ್ತಿಕೊಳ್ಳುವುದರಿಂದ ಕೊರೋನಾ ವೈರಸ್ ವಿರುದ್ಧ ರಕ್ಷಣೆ ನೀಡುವುದಿಲ್ಲ, ಬದಲು, ಇನ್ನಿತರ ಸೋಂಕಿಗೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.
ಯುಎಸ್ ಗೆ ಆಗಮಿಸಿದ ಭಾರತೀಯ ಪ್ರಯಾಣಿಕನ ಲಗೇಜ್ ನಲ್ಲಿ ಹಸುವಿನ ಸೆಗಣಿ ಪತ್ತೆ!
ಯುಸ್ ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್ ಏಜೆಂಟರು ವಾಷಿಂಗ್ಟನ್ ಡಿಸಿಯ ಉಪನಗರದಲ್ಲಿರುವ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಭಾರತದ ಪ್ರಯಾಣಿಕರ ಲಗೇಜ್ ಬ್ಯಾಗ್ ನಲ್ಲಿ ಹಸುವಿನ ಸೆಗಣಿ ಪತ್ತೆ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಾಷಿಂಗ್ಟನ್: ಯುಸ್ ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್ ಏಜೆಂಟರು ವಾಷಿಂಗ್ಟನ್ ಡಿಸಿಯ ಉಪನಗರದಲ್ಲಿರುವ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಭಾರತದ ಪ್ರಯಾಣಿಕರ ಲಗೇಜ್ ಬ್ಯಾಗ್ ನಲ್ಲಿ ಹಸುವಿನ ಸೆಗಣಿ ಪತ್ತೆ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಸುವಿನ ಸಗಣಿಯನ್ನು ಯುಎಸ್ ನಲ್ಲಿ ನಿಷೇಧಿಸಲಾಗಿದೆ ಏಕೆಂದರೆ ಅವುಗಳು ಹೆಚ್ಚು ಸಾಂಕ್ರಾಮಿಕ ರೋಗ ಅಥವಾ ಕಾಲುಬಾಯಿರೋಗದ ಸಂಭಾವ್ಯ ವಾಹಕಗಳಾಗಿವೆ.
https://imasdk.googleapis.com/js/core/bridge3.456.2_en.html#goog_73466851
“ಇದು ಸುಳ್ಳು ಪ್ರಕಟಣೆಯಲ್ಲ. ಏರ್ ಇಂಡಿಯಾ ವಿಮಾನದ ಪ್ರಯಾಣಿಕ ಸಿಬಿಪಿಯ ತಪಾಸಣೆ ಕೇಂದ್ರಕ್ಕೆ ತಲುಪಿದ ನಂತರ ಸಿಬಿಪಿ ಕೃಷಿ ತಜ್ಞರು ಸೂಟ್ ಕೇಸ್ ನಲ್ಲಿ ಎರಡು ಹಸುವಿನ ಸಗಣಿ ಉಂಡೆಯನ್ನು ಕಂಡುಕೊಂಡಿದ್ದಾರೆ” ಎಂದು ಮಾಧ್ಯಮ ಪ್ರಕಟಣೆ ಸೋಮವಾರ ತಿಳಿಸಿದೆ.
“ಕಾಲುಬಾಯಿ ರೋಗವು ಜಾನುವಾರು ಮಾಲೀಕರು ಹೆಚ್ಚು ಭಯಪಡುವ, ಗಂಭೀರ ಕಾಯಿಲೆಗಳಲ್ಲಿ ಒಂದಾಗಿದೆ, ಮತ್ತು ಇದು ಕಸ್ಟಮ್ಸ್ ಮತ್ತು ಗಡಿ ಸಂರಕ್ಷಣೆಯ ಕೃಷಿ ಸಂರಕ್ಷಣಾ ಕಾರ್ಯಾಚರಣೆಯ ಮಹತ್ವದ ಕಾರ್ಯಾಚರಣೆಯಾಗಿದೆ” ಎಂದು ಬಾಲ್ಟಿಮೋರ್ ಫೀಲ್ಡ್ ಆಫೀಸ್ ಸಿಬಿಪಿಯ ಕ್ಷೇತ್ರ ಕಾರ್ಯಾಚರಣೆಗಳ ನಿರ್ದೇಶಕ ಕೀತ್ ಫ್ಲೆಮಿಂಗ್ ಹೇಳಿದರು.
ಹಸುವಿನ ಸಗಣಿ ವಿಶ್ವದ ಕೆಲವು ಭಾಗಗಳಲ್ಲಿ ಪ್ರಮುಖ ಶಕ್ತಿ ಮತ್ತು ಅಡುಗೆ ಮೂಲವಾಗಿದೆ ಎಂದು ತಿಳಿದಿದ್ದರೂ ಹಸುವಿನ ಚರ್ಮವನ್ನು ಡಿಟಾಕ್ಸಿಫೈಯರ್, ಆಂಟಿಮೈಕ್ರೊಬಿಯಲ್ ಮತ್ತು ರಸಗೊಬ್ಬರವಾಗಿ ಬಳಸಲಾಗುತ್ತದೆ ಎಂದು ವರದಿಯಾಗಿದೆ. ಈ ಪ್ರಯೋಜನಗಳ ಹೊರತಾಗಿಯೂ, ಕಾಲುಬಾಯಿ ರೋಗದ ಸಂಭಾವ್ಯ ಕಾರಣಗಳಿಂದಾಗಿ ಗೋವಿನ ಸಗಣಿ ನಿಷೇಧಿಸಲಾಗಿದೆ ಎಂದು ಸಿಬಿಪಿ ಹೇಳಿದೆ.
ಯು.ಎಸ್. ಕೃಷಿ ಇಲಾಖೆಯ ಪ್ರಕಾರ, ಕಾಲುಬಾಯಿ ರೋಗವು ವಿಶ್ವಾದ್ಯಂತದ ಜಾನುವಾರುಗಳಿಗೆ ತೊಂದರೆ ತರುವ ರೋಗವಾಗಿದ್ದು ಇದು ವ್ಯಾಪಕವಾಗಿ ಮತ್ತು ವೇಗವಾಗಿ ಹರಡಬಹುದು ಮತ್ತು ಜಾನುವಾರುಗಳ ಸಂಖ್ಯೆಗೆ ಗಮನಾರ್ಹ ನಷ್ಟವನ್ನು ತರಬಲ್ಲದು. 1929ರಿಂದ ಯುಎಸ್ ಕಾಲುಬಾಯಿ ರೋಗದಿಂದ ಮುಕ್ತವಾಗಿದೆ ಎಂದು ಹೇಳಿಕೆಯೊಂದರಲ್ಲಿ ತಿಳಿಸಿದೆ.
ಅಹಮದಾಬಾದ್: ಹಸುವಿನ ಸೆಗಣಿ ಥೆರಪಿ ಕುರಿತು ಗುಜರಾತಿನ ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಹಸುವಿನ ಸಗಣಿಯನ್ನು ಮೈಗೆ ಮೆತ್ತಿಕೊಳ್ಳುವುದರಿಂದ ಕೊರೋನಾ ವೈರಸ್ ವಿರುದ್ಧ ರಕ್ಷಣೆ ನೀಡುವುದಿಲ್ಲ, ಬದಲು, ಇನ್ನಿತರ ಸೋಂಕಿಗೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.
ಹಸುವಿನ ಸಗಣಿ ಥೆರಪಿಯಿಂದ ಕೋವಿಡ್-19 ವಿರುದ್ಧ ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ ಎಂಬ ನಂಬಿಕೆಯಿಂದ
ಸಣ್ಣ ಗುಂಪೊಂದು ಶ್ರೀ ಸ್ವಾಮಿನಾರಾಯಣ ಗುರುಕುಲ ವಿಶ್ವವೈದ್ಯ ಪ್ರತಿಷ್ಠಾನ ನಡೆಸುತ್ತಿರುವ ಗೋಶಾಲೆಗೆ ಬಂದಿದೆ. ಅಲ್ಲಿ ಸುಮಾರು 200 ಹಸುಗಳನ್ನು ಪೋಷಿಸಲಾಗುತ್ತಿದೆ.
ಹಸುವಿನ ಸೆಗಣಿ ಹಾಗೂ ಗೋಮೂತ್ರವನ್ನು ತಮ್ಮ ದೇಹಕ್ಕೆ ಹಾಕಿಕೊಳ್ಳಲು ಸುಮಾರು 15 ಜನರು ಪ್ರತಿ ಭಾನುವಾರ ಕಳೆದ ಒಂದು ತಿಂಗಳಿನಿಂದ ಇಲ್ಲಿಗೆ ಬರುತ್ತಿದ್ದಾರೆ. ನಂತರ ಹಾಲಿನೊಂದಿಗೆ ಅದನ್ನು ಸ್ವಚ್ಛಗೊಳಿಸುತ್ತಿರುವುದಾಗಿ ಶ್ರೀ ಸ್ವಾಮಿನಾರಾಯಣ ಗುರುಕುಲ ವಿಶ್ವವೈದ್ಯ ಪ್ರತಿಷ್ಠಾನದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಕೆಲ ಮುಂಚೂಣಿ ಕಾರ್ಯಕರ್ತರು, ಮೆಡಿಕಲ್ ಸ್ಟೋರ್ ಗಳಲ್ಲಿ ಕೆಲಸ ಮಾಡುವವರು ಕೂಡಾ ಈ ಥೆರಪಿ ಪಡೆದುಕೊಳ್ಳುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ಈ ಥೆರಪಿ ಜನರಿಗೆ ನಿಜವಾಗಿಯೂ ನೆರವಾಗಲಿದೆ ಎಂಬುದು ಗೊತ್ತಿಲ್ಲ. ಮೈಗೆ ಹಸುವಿನ ಸೆಗಣಿ ಮೆತ್ತಿಕೊಳ್ಳುವುದರಿಂದ ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ ಎಂಬ ಬಗ್ಗೆ ಯಾವುದೇ ಸಂಶೋಧನೆ ಹೇಳಿಲ್ಲ ಎಂದು ಗಾಂಧಿನಗರದ ಇಂಡಿಯನ್
ಇನ್ಸಿಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ನಿರ್ದೇಶಕ ಡಾ. ದಿಲೀಪ್ ಮಾವ್ಲಂಕರ್ ಹೇಳಿದ್ದಾರೆ.
ಹಸುವಿನ ಸೆಗಣಿ ಥೆರಪಿ ಅವಾಸ್ತವಿಕ ಎಂದಿರುವ ಭಾರತೀಯ ವೈದ್ಯಕೀಯ ಅಸೋಸಿಯೇಷನ್ ಮಹಿಳಾ ವಿಭಾಗದ
ಮುಖ್ಯಸ್ಥೆ ಡಾ. ಮೊನಾ ದೇಸಾಯಿ. ಸೆಗಣಿ ತ್ಯಾಜ್ಯವಲ್ಲದೆ ಬೇರೆನೂ ಇಲ್ಲ. ಹಸುವಿನ ಸೆಗಣಿ ಹಾಗೂ ಮೂತ್ರವನ್ನು
ದೇಹಕ್ಕೆ ಹಾಕಿಕೊಳ್ಳುವ ಮುನ್ನ ವೈದ್ಯರನ್ನು ಸಂಪರ್ಕಿಸಿ, ಇಂತಹ ಥೆರಪಿಗಳಿಂದ ದೂರವಿರಿ ಎಂದು ಸಲಹೆ ನೀಡಿದ್ದಾರೆ.
ಸೆಗಣಿ ಬಳಕೆಯಿಂದ ಹಲವಾರು ಶಿಲೀಂಧ್ರಗಳು ನಮ್ಮ ದೇಹ ಪ್ರವೇಶಿಸುವ ಸಾಧ್ಯತೆಯಿದ್ದು, ನಿಮಗೆ ಸೋಂಕು ತಗುಲಲಿದೆ. ಜನರು ಸ್ವಲ್ಪ ಎಚ್ಚರಿಕೆ ವಹಿಸಬೇಕು, ತಮ್ಮ ಜೀವಕ್ಕೆ ಅಪಾಯ ತಂದುಕೊಳ್ಳಬಾರದು ಎಂದು ದೇಸಾಯಿ ಹೇಳಿದ್ದಾರೆ. (kpc)