
ಆಹಾ ಆಹಾ ಪ್ರಜಾಪ್ರಭುವೇ ಕೈಬೆರಳಿಗೆ ಮಸಿಯನಿಕ್ಕಿಸಿಕೊಂಡೂ
ಮತದಾನ ಮಾಡೀ ಮಾಡೀ ಮತಿಹೀನನಾದ ವಿಭುವೇ ! ನಿನ್ನ ಕನಸಿನರಮನೆಯಲ್ಲಿ ಹಿರಿಯ ಗಣಗಳ ದಂಡು !! ಹಿರಿಹಿರಿಯಲೆಂದೇ ಹೊಂಚಿರುವದನು ಕಂಡುಅರಚಿ ಹೇಳಲು ಬರದ ಬಾಯಿ,ಬಕಾಸುರರೆದುರು ಸದಾ ಸಿದ್ಧಅನ್ನ ತುಂಬಿದ ಬಂಡಿಮತ್ತು ತುಂಬಿದ ಕಡಾಯಿನುಂಗಲೆಂದೇ ತೆರೆತೆರೆದುಕೊಂಡಿದ್ದನೊಣೆನೊಣೆದು ನುಂಗುವ ಬಾಯಿಬೇಗ ಮುಚ್ಚುವದಿಲ್ಲ, ನಿನಗೆ ಉಳಿವಿಲ್ಲ ನಿನಗೆ ಉಳಿವಿಲ್ಲಗರ್ದಿ ಗಮ್ಮತಿನಲಿ ಹಾಕಿ ತಾಳಚಿತ್ರಕ್ಕೆ ಜೋತಿಟ್ಟು ಸೂತ್ರದಾ ಗಾಳಹಣಿಕಿಕ್ಕಿ ಹಣಿಕಿಕ್ಕಿ ನೋಡೆ ಮಾಯಾಜಾಲಸ್ವರ್ಗ ರಂಭೆಯು ಉಂಟು ಇಂದ್ರ ವೈಭವ ನಂಟುತೇಲು ಪುಷ್ಪಕ ಮೇಲು ,
ಬೇಕಿಲ್ಲವಲ್ಲ ಕೀಲುಇಣಿಕಿ ನೋಡಲು ಹೇಳಿ,
ಹಣಿಕಿ ಹಾಕಲು ಹೇಳಿಮಂಡಿಯೂರಿದರೇನೇ ಸ್ವರ್ಗ! ಕನಸು!! ದಂಡಿ ದಂಡಿಯಲೀಗ ದುಂಡುಗೊಂಡರು ತಾವುದುಂಡು ಮೇಜಿನ ಜೊತೆಗೆ ತುಂಡು ಮೋಜುಆಹಾ ಪಂಚವರ್ಷದಲೊಮ್ಮೆ ಮಿಂಚುಗೊಳ್ಳುವ ಪ್ರಭುವೇ,ನಿನ್ನ ಸಂಚಿಯಲೀಗ ತುಂಬಿ ಗಾಳಿಒಳಗೊಳಗೆ ಕಿಚ್ಚಿಟ್ಟಿತೋ ಅವರ ಠೋಳಿಅಂದು ಬಗ್ಗಿಸಿದ ನಡುವಿಗೇಬಡಿದು, ಇಂದಿಗೂ ಮೇಲೇಳದಂತೆ ಕೈಗೊಂದು ಆಧಾರ, ಮೂಗಿಗಿದೆ ಮೂಗುದಾರನಿನ್ನ ಬೆವರಿನ ಹನಿಗೆ ನೇಣನಿಕ್ಕಿನಿನ್ನೆದೆಯ ಮಿಡಿತಕ್ಕೆ ಕಾದ ಕಬ್ಬಿಣ ಚುಚ್ಚಿಗಾಳಿಯೂದಿದರೀಗ ನಿನ್ನ ಚಟ್ಟಕ್ಕೆಮೆರೆಮೆರೆದುಕೊಂಡೇರಿ ತಾವು ಅಟ್ಟಕ್ಕೆ ಓ ಓ ಬಡಕಾಲಟಿ-ಎಲುಬ ಹಂದರದ ದೊರೆಯೇನಿನ್ನದೇ ನಿನ್ನದೇ ಮನಸು-ಕನಸಾಗಿರುವಸುವಿಧಾನಸೌಧವೆನ್ನುವ ಮಹಾಸಾಗರದಲ್ಲಿಹಣದ ಬಿರುಗಾಳಿ! ಕಡತಗಳೆ ಹೆದ್ದೆರೆ!!ಅಧಿಕಾರಿವರ್ಗವೆಂಬ ತಿಮಿಂಗಲುನಿಧಾನ ಗತಿ ಎಂಬ ಒಳಸುಳಿಮೇಲಾಗಿ ಆಗಾಗ ಜಾತೀಯತೆಯ ತ್ಸುನಾಮಿ!! ವಿರೋಧದವಕುಂಠನದಲ್ಲಿ ಮೈತುಂಬ ರಕ್ತ ಹೀರುವ ಕೊಳವೆಹೊಂಚಿ ಕೂತಿದೆ ಸತತ ಆ ಅಷ್ಟಪದಿಯುಹುಟ್ಟು –ಹಾಯಿಯು ಇರದನಿನ್ನ ಪುಟ್ಟ ಬಡ ತೆಪ್ಪ ದಡ ಸೇರುವದೆಂದೋ ವಿಜ್ಞಾನ-ದಾಸ ? -ಪುಟ್ಟು ಕುಲಕರ್ಣಿ
