

ಸಿದ್ದಾಪುರ ತಾಲೂಕ ಆಸ್ಪತ್ರೆಯಲ್ಲಿ ಕೋವಿಡ್ ತಪಾಸಣೆ ಗೆ ಬರುವ ಸಾರ್ವಜನಿಕರಿಗೆ ಬಿಸಿಲಿನ ಜಳ ತಪ್ಪಿಸುವ ಕೆಲಸ ನಡೆದಿದೆ. ನೆರಳಿನ ವ್ಯವಸ್ಥೆ ಕಲ್ಪಿಸಿದ ರಾಜ್ಯ ಯುವ ನಾಮಧಾ ರಿ ವೇದಿಕೆ ಹಾಗೂ ಆಶೀರ್ವಾದ ಸೋಲಾರ್ ಸಿಸ್ಟಮ್ ಬೆಂಗಳೂರು ಇಂದು ಪೆಂಡಾಲ್ ಕುರ್ಚಿಗಳನ್ನು ಹಾಕಿ ತಪಾಸಣೆಗೆ ಬರುವ ಸಾರ್ವಜನಿಕರಿಗೆ ನೆರಳಿನವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದೆ.
ಮಾಧ್ಯಮ ಗಳೊಂದಿಗೆ ಮಾತನಾಡಿದ ಯುವ ನಾಮಧಾರಿ ವೇದಿಕೆ ಪ್ರತಿನಿಧಿ ಕೇಶವ ನಾಯ್ಕ್ ಕರೋನಾ ಪರೀಕ್ಷೆ ತಪಾಸಣೆಗೆ ಬರುವ ಜನರಿಗೆ ನೆರಳು,ಕುಳಿತುಕೊಳ್ಳಲು ವ್ಯವಸ್ಥೆ ಗಳಿಲ್ಲ ಎನ್ನುವುದು ಮಾಧ್ಯಮದ ಮೂಲಕ ನಮಗೆ ತಿಳಿಯಿತು ಆದ್ದರಿಂದ ನಾವು ವ್ಯವಸ್ಥೆಯನ್ನು ಕಲ್ಪಿಸುವ ಪ್ರಯತ್ನ ಮಾಡಿದ್ದೇವೆ ಜನರು ಇದರ ಉಪಯೋಗ ಪಡೆದು ಕೊಂಡು ಕೋವಿಡ್ ನಿಂದ ಮುಕ್ತ ರಾಗೋಣ ಎಂದರು.

ಒಂದು ನಿಮಿಷ ಸಮಯ ಕೊಟ್ಟು ಓದಿ ಮತ್ತು ಕೆಳಗಿನ ಪೋಸ್ಟರ್ ನೋಡಬೇಕೆಂದು ಮನವಿ
ಕೋವಿಡ್ ಜ್ಞಾನವನ್ನು ಪಡೆದುಕೊಂಡು ಇತರರಿಗೂ ಸಹಾಯ ಮಾಡಬಲ್ಲ ಎಲ್ಲರಿಗೂ ಇದನ್ನು ಷೇರ್ ಮಾಡುವುದರ ಮೂಲಕ ತಲುಪಿಸಬಹುದು.
ಹೆಲ್ಪ್‌ಲೈನ್ ವಾಲಂಟಿಯರ್‌ಗಳು: 500
ಡಾಕ್ಟರ್‌ಗಳು: 100 (BMC 92 ಮಾತ್ರವಲ್ಲದೇ ವಿವಿಧ ಕಾಲೇಜುಗಳ ವೈದ್ಯರಿದ್ದಾರೆ)
ಸ್ಪೆಷಲ್ ಕೌನ್ಸೆಲರ್‌ಗಳು: 25
ಫೀಲ್ಡ್ ವಾಲಂಟಿಯರ್‌ಗಳು: 50
ಸೆಂಟ್ರಲ್ ಮ್ಯಾನೇಜ್‌ಮೆಂಟ್ ಟೀಂ: 25
Hospital arrangement: HBS hospital.
ಸಹಯೋಗ: ಮರ್ಸಿ ಮಿಷನ್
ಜಿಲ್ಲಾ ಹೆಲ್ಪ್‌ಲೈನ್‌ಗಳು: ಜನಸಹಾಯ
ಇಷ್ಟು ಇದುವರೆಗೆ ಕೆಲಸ ಮಾಡುತ್ತಿರುವವರು. ಆದರೆ ವೈದ್ಯರು ಫೋನಿನಲ್ಲಿ/ಆಪ್ ಮೂಲಕ ಹೇಳಿದ ಸಲಹೆಗಳನ್ನು ಪಾಲಿಸುವಂತೆ ಮಾಡಿ ಆಕ್ಸಿಜನ್ ಬೆಡ್‌ಗಾಗಿ ಹುಡುಕುವ ಪರಿಸ್ಥಿತಿಗೆ ಹೋಗದಂತೆ ಮಾಡಬೇಕೆನ್ನುವುದು ನಮ್ಮ ಉದ್ದೇಶ. ಅದಕ್ಕಾಗಿ, ಫೋನಿನಲ್ಲಿ ಫಾಲೋಅಪ್ ಮಾಡುವ ಕೋವಿಡ್ ಕೌನ್ಸೆಲರ್‌ಗಳ ಅಗತ್ಯವಿದೆ. ನೀವೂ ಅವರಲ್ಲೊಬ್ಬರಾಗಿದ್ದರೆ ನೋಂದಾಯಿಸಿಕೊಳ್ಳಿ. ಇತರರಿಗೂ ಷೇರ್ ಮಾಡಿ.
ಧನ್ಯವಾದಗಳು
KCVT
ಜನಸಹಾಯ
mercymission
BMC92

