ಉತ್ತರ ಕನ್ನಡ ಜಿಲ್ಲೆಯ ಜನತಾದಳ ಯು ಅಧ್ಯಕ್ಷ ಕ್ಯಾದಗಿ, ಇಟಗಿ ಗ್ರಾಮ ಪಂಚಾಯತ್ ಗಳ ಮಾಜಿ ಸದಸ್ಯ ವಸಂತ ಹೆಗಡೆ ಮತ್ತು ನಿವೃತ್ತ ಉಪನ್ಯಾಸಕ ಪಿ.ಎಚ್.ನಾಯ್ಕ ಮೆಣಸಿ ನಿಧನರಾಗಿದ್ದಾರೆ.
ಕೋವಿಡ್ ಚಿಕಿತ್ಸೆ ಪಡೆದು ಗುಣಮುಖರಾಗಿದ್ದ ವಸಂತ ಹೆಗಡೆ ಸಶಿಗುಳಿ ಶಿವಮೊಗ್ಗ ಮೆಗ್ಗಾನ್ ಆಸ್ಫತ್ರೆಯಲ್ಲಿ ಬುಧವಾರ ಬೆಳಿಗ್ಗೆ ಹೃದಯಾಘಾತಕ್ಕೊಳಗಾಗಿದ್ದರು. ಕಳೆದ ಎರಡು ದಿವಸಗಳ ಹಿಂದೆ ಸಿದ್ಧಾಪುರದಲ್ಲಿ ಕೋವಿಡ್ ಚಿಕಿತ್ಸೆ ಪಡೆದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಶಿವಮೊಗ್ಗಕ್ಕೆ ರವಾನಿಸಲಾಗಿತ್ತು. ವಸಂತ ಹೆಗಡೆ ಈ ಹಿಂದೆ ತಲಾ ಒಂದೊಂದು ಬಾರಿ ಕ್ಯಾದಗಿ ಮತ್ತು ಇಟಗಿ ಗ್ರಾಮ ಪಂಚಾಯತ್ ಸದಸ್ಯರಾಗಿದ್ದರು. ಕಳೆದ ಕೆಲವು ವರ್ಷಗಳಿಂದ ಉತ್ತರ ಕನ್ನಡ ಜಿಲ್ಲಾ ಜೆ.ಡಿ.ಯು.ಅಧ್ಯಕ್ಷರಾಗಿದ್ದ ಹೆಗಡೆ ಸಾಮಾಜಿಕ, ರಾಜಕೀಯ ಸೇವೆಗಳ ಮೂಲಕ ಜನಪ್ರೀಯರಾಗಿದ್ದರು. ವಸಂತ ಹೆಗಡೆಯವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿರುವ ಕ್ಯಾದಗಿ ಗ್ರಾ.ಪಂ. ಮಾಜಿ ಅಧ್ಯಕ್ಷ ಎಸ್.ಆರ್. ನಾಯ್ಕ, ಇಟಗಿ ಗ್ರಾ.ಪಂ. ಮಾಜಿ ಅಧ್ಯಕ್ಷೆ ಲಲಿತಾ ನಾಯ್ಕ, ಕೆ.ಟಿ.ನಾಯ್ಕ ಹೆಗ್ಗೇರಿ ಸೇರಿದ ಕೆಲವರು ಅವರ ಸಾಮಾಜಿಕ ಕೆಲಸಗಳನ್ನು ಸ್ಮರಿಸಿದ್ದಾರೆ.
ಪಿ.ಎಚ್.ನಾಯ್ಕಮೆಣಸಿ- ಕುಮಟಾ ಬಾಳಿಗಾ ಕಾಲೇಜಿನ ವಿಜ್ಞಾನ ಉಪನ್ಯಾಸಕರಾಗಿ ನಿವೃತ್ತರಾಗಿದ್ದ ಪಿ.ಎಚ್. ನಾಯ್ಕ ಮೆಣಸಿ ಬುಧವಾರ ನಿಧನರಾಗಿದ್ದಾರೆ. ಸಿದ್ಧಾಪುರದ ಮೂಲನಿವಾಸಿ ದೀವರ ಸಮೂದಾಯದ ಮೊದಲ ವಿಜ್ಞಾನ ಸ್ನಾತಕೋತ್ತರ ಪದವಿಧರರಾಗಿದ್ದ ನಾಯ್ಕ ತಮ್ಮ ಸೇವಾ ನಿವೃತ್ತಿಯ ನಂತರ ಹುಟ್ಟೂರು ಮೆಣಸಿಯಲ್ಲಿ ವಿಶ್ರಾಂತ ಜೀವನ ನಡೆಸುತಿದ್ದರು. ತಾಲೂಕಾ ನಾಮಧಾರಿ ಅಭಿವೃದ್ಧಿ ಸಂಘ, ಸಾಹಿತ್ಯ ಪರಿಷತ್, ಸೇರಿದಂತೆ ಹಲವು ಸಂಘ ಸಂಸ್ಥೆಗಳಲ್ಲಿ ದುಡಿದಿದ್ದ ಪಿ.ಎಚ್. ನಾಯ್ಕ ಹಲವು ಪ್ರಶಸ್ತಿ, ಗೌರವ, ಪುರಸ್ಕಾರ ಪಡೆದ ಹಿರಿಯನಾಗರಿಕರಾಗಿದ್ದರು. ಸಿದ್ಧಾಪುರ ವಕೀಲರ ಸಂಘದ ಅಧ್ಯಕ್ಷ ದಿನೇಶ್ ನಾಯ್ಕರೊಂದಿಗೆ ಎಡರು ಜನ ಪುತ್ರರು, ಪುತ್ರಿ ಸೇರಿದ ಅಪಾರ ಬಂಧು ಬಳಗವನ್ನು ಅವರು ಅಗಲಿದ್ದಾರೆ. ಪಿ.ಎಚ್. ನಾಯ್ಕರ ನಿಧನಕ್ಕೆ ಸಿದ್ಧಾಪುರ ವಕೀಲರ ಸಂಘದ ಕಾರ್ಯದರ್ಶಿ ಕೆ.ಜಿ.ನಾಯ್ಕ, ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತ ಎಂ.ಬಿ.ನಾಯ್ಕ ಕಡಕೇರಿ, ತಾ.ಕ.ಸಾ. ಪ. ಮಾಜಿ ಅಧ್ಯಕ್ಷ ಸಮಾಜಮುಖಿ ಕನ್ನೇಶ್ ಕೋಲಶಿರ್ಸಿ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.