

ಕರೋನಾ ಎರಡನೇ ಅಲೆ ಉತ್ತರ ಕನ್ನಡವನ್ನು ದೇಶಮಟ್ಟದಲ್ಲಿ ಗುರುತಿಸಿದೆ. ದೇಶ, ರಾಜ್ಯದ ಲ್ಲಿ ಕೋವಿಡ್ ಪರೀಕ್ಷೆಗೊಳಗಾದವರಲ್ಲಿ 47% ಸರಾಸರಿ ಸೋಂಕು ದೃಢಪಟ್ಟ ಉತ್ತರ ಕನ್ನಡ ಜಿಲ್ಲೆ ದೇಶದಲ್ಲೇ ಸರಾಸರಿ ಪ್ರಮಾಣದಲ್ಲಿ ಮೊದಲಸ್ಥಾನದಲ್ಲಿದೆ. ಸಿದ್ಧಾಪುರ, ಅಂಕೋಲಾ, ಶಿರಸಿ, ದಾಂಡೇಲಿ, ಹಳಿಯಾಳ ಸೇರಿದ ಬಹುತೇಕ ತಾಲೂಕುಗಳಲ್ಲಿ ಕೋವಿಡ್ ಆರ್ಭಟ ಜೋರಾಗಿದೆ. ಇಂದು ಸಿದ್ಧಾಪುರ ತಾಲೂಕಿನ ಮನ್ಮನೆ ಗ್ರಾಮ ಪಂಚಾಯತ್ ಮನ್ಮನೆ ಗ್ರಾಮವನ್ನು ಶೀಲ್ಡ್ ಡೌನ್ ಮಾಡಲಾಗಿದೆ.
ಸ್ಥಳಿಯ ಶಾಸಕ, ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮುಖಗವಸು ತೆಗೆದು ಮದುವೆ ಸಂದರ್ಭದಲ್ಲಿ ಪಾಲ್ಗೊಂಡ ಮೇಲೆ ಈ ಗ್ರಾಮದಲ್ಲಿ ಕೋವಿಡ್ ಸೋಂಕಿತರ ಪ್ರಮಾಣ ಪತ್ತೆಯಾಗಿದ್ದು ಮತ್ತು ವಿಸ್ತರಿಸಿದ್ದು ಎನ್ನುವ ಆರೋಪವೂ ಕೇಳಿ ಬಂದಿದೆ. ಸ್ವಯಂ ಕೋವಿಡ್ ಸೋಂಕಿತರಾಗಿರುವ ಕಾಗೇರಿ ವಿಶ್ವೇಶ್ವರ ಹೆಗಡೆ ಕೂಡಾ ಈವರೆಗೂ ಕೋವಿಡ್ ಚಿಕಿತ್ಸೆಯಿಂದ ಮುಕ್ತವಾಗಿಲ್ಲ ಎನ್ನಲಾಗುತ್ತಿದೆ.
ಸಿದ್ಧಾಪುರ ಕೋಲಶಿರ್ಸಿ ಗ್ರಾ.ಪಂ.-93,ಮನ್ಮನೆ-77,ಅಣಲೇಬೈಲ್-65 ಪ್ರಕರಣಗಳು







