

ಕರೋನಾ ಮತ್ತು ಜನಪ್ರತಿನಿಧಿಗಳ ಬೇಜವಾಬ್ಧಾರಿಯಿಂದ ದೇಶದಲ್ಲೇ ನಂ.1 ಜಿಲ್ಲೆ ಎಂದು ಗುರುತಿಸಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಯ ಕರೋನಾ ಮಾರ್ಗಸೂಚಿ ಬದಲಾಗಿದೆ. ಇಂದು ಪ್ರಕಟವಾಗಿರುವ ಹೊಸ ಮಾರ್ಗಸೂಚಿಯ ಪ್ರಕಾರ ಜಿಲ್ಲೆಯಲ್ಲಿ 20 ಕ್ಕಿಂತ ಹೆಚ್ಚು ಜನರು ಮದುವೆ, ಕಾರ್ಯಕ್ರಮಗಳಲ್ಲಿ ಪಾಲ್ಗೊ ಳ್ಳುವಂತಿಲ್ಲ. ಗ್ರಾಮ ಪಂಚಾಯತ್ ವ್ಯಾಪ್ತಿ ಮತ್ತು ಪ.ಪಂ. ನಗರಸಭೆ, ಪುರಸಭೆ ವ್ಯಾಪ್ತಿಯ ಗ್ರಾಮ, ವಾರ್ಡ್ ಗಳಲ್ಲಿ ನಾಲ್ವತ್ತಕ್ಕಿಂತ ಹೆಚ್ಚು ಜನರು ಕೋವಿಡ್ ಸೋಂಕಿತರಿದ್ದರೆ ಅದು ಕಂಟೇನ್ ಮೆಂಟ್ ವಲಯ. ಉತ್ತರ ಕನ್ನಡ ಜಿಲ್ಲೆಯ ಕಂಟೇನ್ ಮೆಂಟ್ ವಲಯಗಳು.
ಜಿಲ್ಲೆಯ ಕಂಟೇನ್ ಮೆಂಟ್ ಸ್ಥಳಗಳು- ಕಾರವಾರ- ಚಿತ್ತಕುಲಾ, ಮಲ್ಲಾಪುರ.
ಸಿದ್ಧಾಪುರ- ಅಣಲೇಬೈಲ್ (ಸರಕುಳಿ) ಕೋಲಶಿರ್ಸಿ, ಮನ್ಮನೆ
ಯಲ್ಲಾಪುರ-ಮಾವಿನಮನೆ, ಉಮ್ಮಚಗಿ, ನಂದೊಳ್ಳಿ
ಅಂಕೋಲಾ-ಬಬ್ರುವಾಡ, ಹಿಲ್ಲೂರು
ಹಳಿಯಾಳ-ಮುರ್ಖವಾಡ,
ಮುಂಡಗೋಡು-ಇಂದೂರು, ಜೊಯಿಡಾ- ರಾಮನಗರ, ಅಖೇತಿ
ದಾಂಡೇಲಿ-ಅಂಬಿಕಾನಗರ, ಅಂಬೇವಾಡಿ
ಭಟ್ಕಳ-ಶಿರಾಲಿ, ಹೊನ್ನಾವರ-ಕರ್ಕಿ, ಶಿರಸಿ-ಬನವಾಸಿ
