

ಚಿಕ್ಕಮಗಳೂರು: ಕೊರೋನಾ ಸೋಂಕಿತ ಅಣ್ಣ ಆಸ್ಪತ್ರೆಯಿಂದ ಮನೆಗೆ ಬಂದಿದ್ದಕ್ಕೆ ಮಚ್ಚಿನಿಂದ ಕೊಚ್ಚಿ ಕೊಂದ ತಮ್ಮ!
ಕೊರೋನಾ ಮಹಾಮಾರಿ ಜನರನ್ನು ಕೊಲ್ಲುತ್ತಿದ್ದರೆ ಇತ್ತ ಸಂಬಂಧಗಳಲ್ಲೂ ಬಿರುಕು ಮೂಡಿಸುತ್ತಿದೆ. ಒಂದೆಡೆ ಸೋಂಕಿತ ತಾಯಿಯನ್ನು ಮಗ ಹೊರಗೆ ಹಾಕಿದ್ದರೆ, ಇಲ್ಲೊಬ್ಬ ತಮ್ಮ ಅಣ್ಣನನ್ನೇ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.

ಚಿಕ್ಕಮಗಳೂರು: ಕೊರೋನಾ ಮಹಾಮಾರಿ ಜನರನ್ನು ಕೊಲ್ಲುತ್ತಿದ್ದರೆ ಇತ್ತ ಸಂಬಂಧಗಳಲ್ಲೂ ಬಿರುಕು ಮೂಡಿಸುತ್ತಿದೆ. ಒಂದೆಡೆ ಸೋಂಕಿತ ತಾಯಿಯನ್ನು ಮಗ ಹೊರಗೆ ಹಾಕಿದ್ದರೆ, ಇಲ್ಲೊಬ್ಬ ತಮ್ಮ ಅಣ್ಣನನ್ನೇ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.
ಚಿಕ್ಕಮಗಳೂರಿನ ಕಳಸ ತಾಲೂಕಿನ ಮರಸಣಿಗೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. 45 ವರ್ಷದ ಮಹಾವೀರ್ ನನ್ನು ಸಹೋದರ ಪಾರ್ಶ್ವನಾಥ್ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.
ಕಳೆದ ವಾರ ಮಹಾವೀರ್ ಸೋಂಕಿಗೆ ತುತ್ತಾಗಿದ್ದು ಮೂಡಿಗೆರೆ ಸರ್ಕಾರಿ ಕೋವಿಡ್ ಆಸ್ಪತ್ರೆಗೆ ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಸರಿಯಿಲ್ಲ ಎಂದುಕೊಂಡು ಮಹಾವೀರ್ ಮನೆಗೆ ಹಿಂದಿರುಗಿದ್ದರು. ಇನ್ನು ಸೋಂಕಿತ ಅಣ್ಣ ಚಿಕಿತ್ಸೆ ಪಡೆಯದೇ ಮನೆಗೆ ಬಂದಿರುವುದರ ಸಂಬಂಧ ಇಬ್ಬರ ನಡುವೆ ಜಗಳ ನಡೆದಿದೆ.
ಕೊನೆಗೆ ಪಾರ್ಶ್ವನಾಥ್ ಕೋಪಗೊಂಡ ಅಣ್ಣನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಅಣ್ಣ ತಮ್ಮನ ಜಗಳ ಕುರಿತಾಗಿ ತಾಯಿ ಅಕ್ಕಪಕ್ಕದ ಮನೆಯವರಿಗೆ ಹೇಳಿದರೂ ತಮಗೂ ಸೋಂಕು ಹರಡಬಹುದು ಎಂದು ಹೆದರಿ ಯಾರು ಬರಲಿಲ್ಲ. ಇನ್ನು ಪ್ರಕರಣ ಸಂಬಂಧ ಪೊಲೀಸರು ಆರೋಪಿ ಪಾರ್ಶ್ವನಾಥನನ್ನು ಬಂಧಿಸಿದ್ದಾರೆ. (kpc)
