

2440 ಜನರಲ್ಲಿ ಕೋವಿಡ್ ಸೋಂಕು ಕಾಣಿಸಿಕೊಳ್ಳುವ ಮೂಲಕ ಸಿದ್ಧಾಪುರ ಉತ್ತರ ಕನ್ನಡ ಜಿಲ್ಲೆಯ ಹೆಚ್ಚು ಕೋವಿಡ್ ಪೀಡಿತ ಜನರಿರುವ ತಾಲೂಕಿನಲ್ಲಿ ಒಂದಾಗಿದೆ. ದೇಶದಲ್ಲಿ ಕೋವಿಡ್ ಪರೀಕ್ಷೆಗೊಳಗಾದ ಕೋಟ್ಯಾಂತರ ಜನರಲ್ಲಿ ಪ್ರತಿಶತ 27 ಜನರಲ್ಲಿ ಕರೋನಾ ದೃಢ ಪಟ್ಟಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರತಿಶತ 46+ ಜನರಲ್ಲಿ ಕೋವಿಡ್ ಸೋಂಕು ದೃಢವಾಗಿ ದೇಶದಲ್ಲೇ ಹೆಚ್ಚು ಜನರಲ್ಲಿ ಸರಾಸರಿಕರೋನಾ ದೃಢವಾಗಿರುವ ಹಿಂದೆ ದಾಂಡೇಲಿ ಮತ್ತು ಹಳಿಯಾಳಗಳ ಪ್ರತಿಶತ 65 ಜನರ ಕೋವಿಡ್ ಪ್ರಮಾಣ ಕಾರಣವಾಗಿದೆ.
ಸಿದ್ಧಾಪುರ ಶಿರಸಿಗಳಲ್ಲಿ ಬೆಂಗಳೂರಿನಿಂದ ವಲಸೆ ಬಂದವರ ಪ್ರಮಾಣ, ಜಿಲ್ಲೆಯಲ್ಲಿ ಹೆಚ್ಚು ಕೋವಿಡ್ ಪರೀಕ್ಷೆಗಳಾಗಿರುವ ತಾಲೂಕುಗಳಲ್ಲಿ ಯಲ್ಲಾಪುರ ಮತ್ತು ಸಿದ್ಧಾಪುರ ಮೊದಲ ಸ್ಥಾನಗಳಲ್ಲಿರುವುದು ಸೇರಿದಂತೆ ಅನೇಕ ಅಂಶಗಳು ಕೋವಿಡ್ ಸೋಂಕಿತರ ಪ್ರಮಾಣವನ್ನು ವೃದ್ಧಿಸಿವೆ. ತಾಲೂಕಿನಲ್ಲಿ ಒಂದು ವರ್ಷಗಳೀಚೆ ಒಟ್ಟೂ 25 ಜನರು ಕೋವಿಡ್ ನಿಂದ ಮೃತಪಟ್ಟಿದ್ದಾರೆ ಆದರೆ ಸಿದ್ದಾಪುರದಲ್ಲೇ ಪರೀಕ್ಷೆಯಾಗಿ ಮೃತರಾದವರ ಸಂಖ್ಯೆ ಕೇವಲ 20. ಇದೇ ವಾರ ಗುಣಮುಖರಾಗಿ ಕೋವಿಡ್ ಗೆದ್ದ 300 ಕ್ಕಿಂತ ಹೆಚ್ಚು ಜನರು ಸೇರಿ ಈವರೆಗೆ 1800 ಜನರು ಕರೋನಾ ವಿರುದ್ಧ ಜಯಿಸಿದ್ದಾರೆ.
ಸಾವು, ಚೇತರಿಕೆ ಪ್ರಮಾಣ, ಒಟ್ಟೂ ಸೋಂಕಿತರ ಪ್ರಮಾಣಗಳ ತುಲನಾತ್ಮಕತೆಯಲ್ಲಿ ಪರೀಕ್ಷೆಮಾಡಿಸಿಕೊಂಡವರ ಪ್ರಮಾಣ ಜಿಲ್ಲೆ ರಾಜ್ಯದ ಸರಾಸರಿ ಪ್ರಮಾಣಕ್ಕಿಂತ ಹೆಚ್ಚು. ಸಿದ್ಧಾಪುರದ ಒಟ್ಟೂ ನಾಲ್ಕು ಗ್ರಾಮ ಪಂಚಾಯತ್ ಗಳನ್ನು ಕಂಟೈನ್ ಮೆಂಟ್ ಜೋನ್ ಗಳನ್ನಾಗಿಸಲಾಗಿದೆ. ಇವುಗಳಲ್ಲಿ ಕೋಲಶಿರ್ಸಿ ಗ್ರಾಮ ಪಂಚಾಯತ್ ಬಿಟ್ಟರೆ ಬೇರೆ ಕಂಟೈನ್ ಮೆಂಟ್ ಗ್ರಾಮ ಪಂಚಾಯತ್ ಗಳಲ್ಲಿ ಸೋಂಕಿತರ ಪ್ರಮಾಣ ನೂರು ಜನರನ್ನು ಮೀರಿಲ್ಲ.
ಕೋಲಶಿರ್ಸಿ, ಮನ್ಮನೆ (ಆಡುಕಟ್ಟಾ) ಗ್ರಾಮ ಪಂಚಾಯತ್ ಗಳಲ್ಲಿ ಅಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕೋವಿಡ್ ಲಸಿಕೆ ನೀಡಿಕೆ,ಕೋವಿಡ್ ಪರೀಕ್ಷೆ ಸೇರಿದಂತೆ ಕರೋನಾ ಸಂಬಂಧಿ ಕೆಲಸಗಳಲ್ಲಿ ಗುರಿಮೀರಿದ ಸಾಧನೆ ಮಾಡಿವೆ. ಈ ಎಲ್ಲಾ ಕಾರಣಗಳ ಹಿನ್ನೆಲೆಯಲ್ಲಿ ಸಿದ್ಧಾಪುರ ಹೆಚ್ಚು ಕೋವಿಡ್ ಸೋಂಕಿತರಿರುವ ತಾಲೂಕುಗಳಲ್ಲಿ ಒಂದೆನಿಸಿದೆ.
ಸಿದ್ಧಾಪುರ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಅಲ್ಲಿರುವ ಮನೆಗಳು, ಜನಸಂಖ್ಯೆ ಆಧಾರದಲ್ಲಿ ನೋಡಿದರೆ ಕೆಲವು ಗ್ರಾಮಗಳಲ್ಲಿ ಗ್ರಾಮದ ಜನಸಂಖ್ಯೆಯ ಪ್ರತಿಶತ 60-80 ಜನಸಂಖ್ಯೆ ಕೋವಿಡ್ ಭಾದಿತವಾಗಿದೆ. ಆದರೆ ಅಣಲೇಬೈಲು, ಹಸರಗೋಡು ಇವುಗಳಿಗಿಂತ ಹೆಚ್ಚಿನ ಮನೆಗಳು, ಜನಸಂಖ್ಯೆ ಇರುವ ಕೋಲಶಿರ್ಸಿ,ಮನ್ಮನೆಗಳಲ್ಲಿ ನೂರನ್ನು ಮೀರಿದ ಪ್ರಕರಣಗಳು ಜನಸಂಖ್ಯೆ, ಮನೆಗಳ ಆಧಾರದಲ್ಲಿ ಪ್ರತಿಶತ 5 ರಿಂದ 10 ಮಾತ್ರ.
ಸಿದ್ಧಾಪುರದ ಒಟ್ಟೂ ಜನಸಂಖ್ಯೆ 1ಲಕ್ಷ ಇದರಲ್ಲಿ ಈವರೆಗೆ ಕೋವಿಡ್ ಪರೀಕ್ಷೆಗೆ ಒಳಗಾದವರ ಸಂಖ್ಯೆ38961, ಕೋವಿಡ್ ಲಸಿಕೆ ಪಡೆದವರ ಸಂಖ್ಯೆ- 17826 ಇವರೊಂದಿಗೆ ಹೊರ ಊರುಗಳಲ್ಲಿ ಪರೀಕ್ಷೆಗೆ ಒಳಗಾದವರ ಸಂಖ್ಯೆ ಸುಮಾರು ಹತ್ತು ಸಾವಿರ, ಪರ ಊರುಗಳಲ್ಲಿದ್ದು ಲಸಿಕೆ ಪಡೆದವರು ಸುಮಾರು ಒಂದುಸಾವಿರ, ತಾಲೂಕಾಸ್ಪತ್ರೆ ದಾಖಲೆಯ ಪ್ರಕಾರ ಕೋವಿಡ್ ಸಾವುಗಳ ಸಂಖ್ಯೆ21, ಪರೀಕ್ಷೆಗೊಳಗಾಗದೆ, ಪರ ಊರುಗಳಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸತ್ತವರ ಸಂಖ್ಯೆ 20 ಕ್ಕೂ ಹೆಚ್ಚು. ಈ ಅಂಕಿಸಂಖ್ಯೆಗಳ ಆಧಾರದಲ್ಲಿ ಸಿದ್ಧಾಪುರ ಕೋವಿಡ್ ನಿಂದ ತತ್ತರಿಸಿದೆ ಎನ್ನುವುದಕ್ಕೆ ಯಾವುದೇ ಪ್ರಬಲ ಸಾಕ್ಷಿ, ಅಂಕಿ ಸಂಖ್ಯೆಗಳ ಆಧಾರ ಇಲ್ಲ. ಈ ಮಹತ್ವದ ಮಾಹಿತಿಯ ಕೊನೆ ನುಡಿ ಎಂದರೆ….
ಕೋವಿಡ್ ಗೆ ಹೆದರುವ ಬದಲು ಪರೀಕ್ಷೆಗೆ ಒಳಗಾಗಿ ಕೋವಿಡ್ ಸೋಲಿಸಬಹುದು ಎನ್ನುವ ವಾಸ್ತವ ಸತ್ಯ.
