

- ಕಾರವಾರ, ದಾಂಡೇಲಿ ಫುಲ್ ಲಾಕ್ ಡೌನ್, * ಜಿಲ್ಲೆಯಲ್ಲಿ 26 ಕ್ಕೆ ಏರಿದ ಕಂಟೈನ್ಮೆಂಟ್ ಜೋನ್ ಸಂಖ್ಯೆ
- ಹೋಮ್ ಐಸೋಲೇಶನ್ ನಿಂದ ಕೋವಿಡ್ ಕಾಳಜಿ ಕೇಂದ್ರಗಳಿಗೆ ಸೋಂಕಿತರನ್ನು ಕರೆತರುವ ಪ್ರಯತ್ನ
- ಯಲ್ಲಾಪುರ, ಸಿದ್ಧಾಪುರಗಳಿಗೆ ಕೋವಿಡ್ ಪರೀಕ್ಷೆಯಲ್ಲಿ ಮೊದಲಸ್ಥಾನ
- ಅವಶ್ಯವಿದ್ದರೆ ಇನ್ನಷ್ಟು ತಾಲೂಕುಗಳಲ್ಲಿ ಫುಲ್ ಲಾಕ್ ಡೌನ್
- ಕಾರವಾರದಲ್ಲಿ ಇಂದು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಜಿಲ್ಲಾಧಿಕಾರಿಗಳ ಸಭೆ
ಉತ್ತರ ಕನ್ನಡ ಜಿಲ್ಲೆಯ ಕೋವಿಡ್ ಕಾಳಜಿ ಕೇಂದ್ರಗಳು ಸುಸಜ್ಜಿತವಾಗಿದ್ದರೂ ಅಲ್ಲಿಗೆ ತೆರಳಲು ಹಿಂದೇಟು ಹಾಕುತ್ತಿರುವ ಕೋವಿಡ್ ಸೋಂಕಿತ ರನ್ನು ಆಕರ್ಷಿಸಲು ಜಿಲ್ಲಾಡಳಿತ ಮುಂದಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ದಾಂಡೇಲಿ, ಹಳಿಯಾಳದಲ್ಲಿ ಕೋವಿಡ್ ಪರೀಕ್ಷೆಗೊಳಪಟ್ಟವರಲ್ಲಿ ಪ್ರತಿಶತ 60 ಕ್ಕಿಂತ ಹೆಚ್ಚು ಜನರಲ್ಲಿ ಕರೋನಾ ಸೋಕು ದೃಢಪಡುತ್ತಿದೆ. ಈ ಪ್ರಮಾಣದಿಂದಾಗಿ ಉತ್ತರ ಕನ್ನಡ ಜಿಲ್ಲೆ ದೇಶದಲ್ಲೇ ಅತಿ ಹೆಚ್ಚು ಸರಾಸರಿ ಕೋವಿಡ್ ದೃಢಪಡುತ್ತಿರುವ ಜಿಲ್ಲೆ ಎಂದು ಕುಖ್ಯಾತವಾಗಿದೆ. ಹೆಚ್ಚು ಪರೀಕ್ಷೆ, ಹೆಚ್ಚು ಸೋಂಕು ಪತ್ತೆ ವಿದ್ಯಮಾನ ಕೂಡಾ ಉತ್ತರ ಕನ್ನಡ ಜಿಲ್ಲೆಯ ವಿಶೇಷವಾಗಿದೆ.
ಜಿಲ್ಲೆಯಲ್ಲಿ ದಾಂಡೇಲಿ ಕಾರವಾರಗಳಲ್ಲಿ ಸಂಪೂರ್ಣ ಲಾಕ್ ಡೌನ್ ಘೋಶಿಸಿದ್ದರೆ ಉಳಿದ 12 ತಾಲೂಕುಗಳಲ್ಲಿ ಮುಂಜಾನೆ 6 ರಿಂದ ಖರೀದಿಗೆ ಅವಕಾ ಶ ನೀಡಲಾಗಿದೆ. ಕೋವಿಡ್ ಪರೀಕ್ಷೆಯಲ್ಲಿ ಸಿದ್ದಾಪುರ ಮತ್ತು ಯಲ್ಲಾಪುರ ಮೊದಲ ಸ್ಥಾನದಲ್ಲಿದ್ದರೆ ಕಾರವಾರ, ಹಳಿಯಾಳ, ದಾಂಡೇಲಿ ಸೇರಿದಂತೆ ಬಹುತೇಕ ಎಲ್ಲಾ ತಾಲೂಕುಗಳಲ್ಲಿ ನಿಶ್ಚಿತ ಗುರಿಗಿಂತ ಹೆಚ್ಚು ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.
ಜಿಲ್ಲೆಯಲ್ಲಿ ಪ್ರತಿ ತಾಲೂಕುಗಳಲ್ಲಿ ಒಂದರಿಂದ ಐದರ ವರೆಗೆ ಕೋವಿಡ್ ಕೇರ್ ಸೇಂಟರ್ಗಳನ್ನು ಮಾಡಲಾಗಿದೆ. ಇಂಥ ಕಾಳಜಿ ಕೇಂದ್ರಗಳಲ್ಲಿ ಸೋಂಕಿತರು ಉಳಿದದ್ದು ಕಡಿಮೆ. ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವ ಬಹಳಷ್ಟು ಸೋಂಕಿತರು ವಿಶ್ರಾಂತಿ ಪಡೆಯದೆ ಕರೋನಾ ವಿಸ್ತರಿಸುವ ಅಂಶ ಬೆಳಕಿಗೆ ಬಂದಿದ್ದು ಅಂಥ ಪ್ರಮಾಣ ಮತ್ತು ಸೂಕ್ತ ಚಿಕಿತ್ಸೆ ಗಾಗಿ ಟೆಲಿಮೆಡಿಸಿನ್ ವ್ಯವಸ್ಥೆ ಕಲ್ಫಿಸಿ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಸೋಂಕಿತರಿಗೆ ಸೂಕ್ತ ವ್ಯವಸ್ಥೆ ಮಾಡಲು ಜಿಲ್ಲಾಡಳಿತ ಮುಂದಾಗಿದೆ.
