

ಭಟ್ಕಳ ತಾಲೂಕಿನಲ್ಲಿ ತೌಕ್ತೆ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಗಳಿಗೆ ಕಂದಾಯ ಸಚಿವ ಆರ್.ಆಶೋಕ ಭೇಟಿ ನೀಡಿ ಪರಿಶೀಲನೆ ನಡೆಸಿದರು, ನಂತರ ತೌಕ್ತೆ ಚಂಡಮಾರುತದ ಅವಘಡದಿಂದ ಮೃತರಾದ ತಾಲೂಕಿನ ಲಕ್ಷ್ಮಣ ಈರಪ್ಪ ನಾಯ್ಕ ಅವರ ಕುಟುಂಬದವರಿಗೆ ಸುಮಾರು 5 ಲಕ್ಷ ರೂಪಾಯಿ ಮೊತ್ತದ ಪರಿಹಾರ ಧನದ ಪ್ರತಿಯನ್ನು ವಿತರಿಸಲಾಯಿತು. ಹಾನಿಗೊಳಗಾದವರ ಪಟ್ಟಿಯನ್ನು ಶೀಘ್ರವಾಗಿ ತಯಾರಿಸುವಂತೆ ಅಧಿಕಾರಿಗಳಿಗೆ ಅಶೋಕ್ ರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಸೂಚಿಸಿದರು..
ಈ ಸಂದರ್ಭದಲ್ಲಿ ಶಾಸಕರಾದ ಸುನೀಲ್ ನಾಯ್ಕ, ದಿನಕರ ಕೆ ಶೆಟ್ಟಿ, ರೂಪಾಲಿ ನಾಯ್ಕ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.



