

ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಅರ್ಚಕರಿಗೆ ರಾಜ್ಯ ಸರ್ಕಾರ ಶುಭಸುದ್ದಿ ನೀಡಿದೆ. ಅದರಂತೆ 27000 ದೇವಾಲಯಗಳ ಅರ್ಚಕರಿಗೆ 3 ತಿಂಗಳುಗಳ ಮುಂಗಡ ತಸ್ತಿಕ್ ಬಿಡುಗಡೆ ಮಾಡಿ ಆದೇಶಿಸಿದೆ. ಅಲ್ಲದೆ ‘ಸಿ’ ದರ್ಜೆ ದೇವಾಲಯಗಳ ಸಿಬ್ಬಂದಿಗಳಿಗೆ ದಿನಸಿ ಕಿಟ್‌ಗಳ ನೀಡುವಂತೆ ಆದೇಶ ಹೋರಡಿಸಲಾಗಿದೆ.

ಬೆಂಗಳೂರು: ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಅರ್ಚಕರಿಗೆ ರಾಜ್ಯ ಸರ್ಕಾರ ಶುಭಸುದ್ದಿ ನೀಡಿದೆ. ಅದರಂತೆ 27000 ದೇವಾಲಯಗಳ ಅರ್ಚಕರಿಗೆ 3 ತಿಂಗಳುಗಳ ಮುಂಗಡ ತಸ್ತಿಕ್ ಬಿಡುಗಡೆ ಮಾಡಿ ಆದೇಶಿಸಿದೆ. ಅಲ್ಲದೆ ‘ಸಿ’ ದರ್ಜೆ ದೇವಾಲಯಗಳ ಸಿಬ್ಬಂದಿಗಳಿಗೆ ದಿನಸಿ ಕಿಟ್‌ಗಳ ನೀಡುವಂತೆ ಆದೇಶ ಹೋರಡಿಸಲಾಗಿದೆ.
ಒಟ್ಟೂ 50 ಸಾವಿರ ಅರ್ಚಕರಿಗೆ ಫುಡ್ ಕಿಟ್ ವಿತರಿಸಲು ಮುಜರಾಯಿ ಇಲಾಖೆ ತೀರ್ಮಾನಿಸಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
https://imasdk.googleapis.com/js/core/bridge3.460.0_en.html#goog_2025781586
ಅಲ್ಲದೆ ಸರ್ಕಾರದಿಂದ ಒಟ್ಟೂ 4.50 ಕೋಟಿ ಹಣ ಬಿಡುಗಡೆಯಾಗಲಿದೆ.
ಇಂದು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ (ಕರ್ನಾಟಕ ಸರ್ಕಾರ) ಅಧ್ಯಕ್ಷರಾದ ಹೆಚ್.ಎಸ್.ಸಚ್ಚಿದಾನಂದಮೂರ್ತಿ ಅವರ ನೇತೃತ್ವದ ನಿಯೋಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಮುಜರಾಯಿ ಖಾತೆ ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿ ರವರನ್ನು ಬೇಟಿ ಮಾಡಿ, ಕೋವಿಡ್ 19 ಹಿನ್ನೆಲೆಯಲ್ಲಿ ಲಾಕ್ ಡೌನ್ ಸಂದರ್ಭದಲ್ಲಿ ಬ್ರಾಹ್ಮಣ ಸಮುದಾಯದ ಬಡ ಅರ್ಚಕರು ಪುರೋಹಿತರು ಮತ್ತು ಅಡುಗೆ ಕೆಲಸದವರಿಗೆ, ಮುಜರಾಯಿ ಇಲಾಖೆಯ ಅರ್ಚಕರು ಮತ್ತು ಸಿಬ್ಬಂದಿಗಳಿಗೆ ಧನಸಹಾಯ, ದಿನಸಿ ಕಿಟ್ ಗಳನ್ನು ಒದಗಿಸುವ ಬಗ್ಗೆ ಮನವಿ ಪತ್ರ ನೀಡಿತ್ತು.
(kpc)
