

ಜನತಂತ್ರ ವ್ಯವಸ್ಥೆ ಒಪ್ಪುವ ಯಾರೂ ದೇಶದ ಪ್ರಧಾನಿಯೊಬ್ಬರು ನೇರವಾಗಿ ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡುವುದನ್ನು ಒಪ್ಪುವುದಿಲ್ಲ ಎಂದು ಆಕ್ಷೇಪಿಸಿರುವ ಕಾಂಗ್ರೆಸ್ ಪ್ರಧಾನಮಂತ್ರಿ ಮೋದಿ ಸರ್ವಾಧಿಕಾರ ನಡೆಸುವ ಮೂಲಕ ದೇಶದ ಅರಾಜಕತೆಗೆ ಕಾರಣರಾಗುತಿದ್ದಾರೆ ಎಂದು ಆರೋಪಿಸಿದೆ.
ಸಿದ್ಧಾಪುರ ತಾಲೂಕಾ ಆಸ್ಫತ್ರೆಗೆ ಕಾಂಗ್ರೆಸ್ ನಿಂದ ಉಚಿತ ಪಿ.ಪಿ.ಇ. ಕಿಟ್ ವಿತರಿಸಿದ ನಂತರ ಮಾತನಾಡಿದ ರಾಜ್ಯ ಕಾಂಗ್ರೆಸ್ ವಕ್ತಾರ ಭೀಮಣ್ಣ ನಾಯ್ಕ ಕಾಂಗ್ರೆಸ್ ಜನರಿಗೆ ಅನುಕೂಲ ಮಾಡುವ ಹಿನ್ನೆಲೆಯಲ್ಲಿ ಕೆಲಸ ಮಾಡುತ್ತಿದೆ. ಅನಿವಾರ್ಯ ಎಂಬುಲೆನ್ಸ್, ಕೋವಿಡ್ ಲಸಿಕೆ,ಅಗತ್ಯ ಪಿ.ಪಿ.ಇ. ಕಿಟ್ ಸೇರಿದಂತೆ ಜನರ ಅನುಕೂಲಕ್ಕಾಗಿ ಸಾರ್ವಜನಿಕರ ಒಳಿತಿಗೆ ಶ್ರಮಿಸುವ ಆರೋಗ್ಯ ಕಾರ್ಯಕರ್ತರಿಗೆ ಸಹಕಾರವಾಗುವ ವ್ಯವಸ್ಥೆಗಳನ್ನು ಮಾಡುತ್ತಿದೆ. ಕರೋನಾ ಸೇನಾನಿಗಳಾಗಿ ಕೆಲಸ ಮಾಡುವ ಎಲ್ಲರ ಬಗ್ಗೆ ನಮಗೆ ಗೌರವವಿದೆ. ಆದರೆ ಪ್ರಧಾನಿಗಳು ಜನತಂತ್ರ ವ್ಯವಸ್ಥೆಯ ಶಾಸಕರು, ಸಂಸದರು, ಸಚಿವರು, ಚುನಾಯಿತ ರಾಜ್ಯ ಸರ್ಕಾರವನ್ನೇ ಉಪೇಕ್ಷಿಸಿ ನೇರ ಅಧಿಕಾರಿಗಳಿಗೆ ಜವಾಬ್ಧಾರಿ ನೀಡುವುದು ಸರಿಯಲ್ಲ. ಪ್ರಧಾನಮಂತ್ರಿ ಮೋದಿ ಅವರ ಪಕ್ಷಕ್ಕೆ ಸರ್ವಾಧಿಕಾರಿಯಾದರೆ ನಮ್ಮ ಅಭ್ಯಂತರ ವಿಲ್ಲ ಆದರೆ ದೇಶಕ್ಕೆ ಸರ್ವಾಧಿಕಾರಿಯಾಗುವ ಪ್ರಧಾನಿಗಳ ಪ್ರಯತ್ನ ಅರಾಜಕತೆಗೆ ದಾರಿ ಮಾಡುತ್ತದೆ ಎಂದರು.
ಪಿ.ಪಿ.ಇ. ಕಿಟ್ ವಿತರಿಸುವ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಆರ್. ಎಂ. ಹೆಗಡೆ, ನಾಶಿರ್ ಖಾನ್, ಸೇವಾದಳದ ಗಾಂಧೀಜಿ, ಬಸವರಾಜ್ ದೊಡ್ಮನಿ, ವಸಂತ ನಾಯ್ಕ ಸೇರಿದಂತೆ ಹಲವರಿದ್ದರು.


