



ಕೋವಿಡ್ ಪೀಡಿತರ ಮನೆಯವರೂ ಹೊರ ಬರುವಂತಿಲ್ಲ-
ಸಿದ್ದಾಪುರ
ಕರೊನಾ ಲಾಕ್ ಡೌನ್ ನಿಯಮಾವಳಿಯನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಗ್ರಾಮದಲ್ಲಿ ಯಾವುದೇ ಅಂಗಡಿಯನ್ನು ಬಾಗಿಲು ತೆಗೆಯುವ ಹಾಗಿಲ್ಲ. ಅಗತ್ಯ ವಸ್ತುಗಳನ್ನು ಮನೆ ಮನೆಗೆ ತಲುಪಿಸುವುದಕ್ಕೆ ಈಗಾಗಲೇ ಗ್ರಾಪಂನಿಂದ ಅನುಮತಿ ನೀಡಲಾಗಿದೆ. ಅನಾವಶ್ಯಕವಾಗಿ ಯಾರೂ ಓಡಾಡದೇ ಕರೊನಾ ನಿಯಂತ್ರಿಸುವುದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಗ್ರಾಪಂ ನೋಡಲ್ ಅಧಿಕಾರಿ ತಾಲೂಕು ಪಶುಸಂಗೋಪನಾ ಇಲಾಖೆಯ ಪ್ರಭಾರಿ ಸಹಾಯಕ ನಿರ್ದೇಶಕ ಡಾ.ಶ್ರೇಯಸ್ ರಾಜ್ ಹೇಳಿದರು.
ತಾಲೂಕಿನ ಹಾರ್ಸಿಕಟ್ಟಾ ಗ್ರಾಪಂನಲ್ಲಿ ನಡೆದ ಕೋವಿಡ್-19ರ ಮುಂಜಾಗೃತಾ ಸಭೆಯಲ್ಲಿ ಅವರು ಮಾತನಾಡಿದರು.
ಗ್ರಾಪಂ ಪಿಡಿಓ ರಾಜೇಶ ನಾಯ್ಕ ಮಾತನಾಡಿ ಗ್ರಾಪಂ ವ್ಯಾಪ್ತಿಯ ಎಲ್ಲ ಆಶಾ ಕಾರ್ಯಕರ್ತರು ಊರಿಗೆ ಹೊರಗಿನಿಂದ ಬಂದವರನ್ನು ಗುರುತಿಸಿ ಅವರ ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡಬೇಕು. ಯಾವುದೇ ಮನೆಯಲ್ಲಿ ಕರೊನಾ ಪಾಸಿಟಿವ್ ಇದ್ದಲ್ಲಿ ಅವರ ಮನೆಯವರು ಯಾರೂ ಹೊರಗೆ ಓಡಾಡದಂತೆ ನೋ ಡಿಕೊಳ್ಳಬೇಕು. ಅವರಿಗೆ ಅವಶ್ಯ ಇರುವ ಔಷಧಿಗಳನ್ನು ಪೂರೈಸಬೇಕು. ಅವಶ್ಯಕ ವಸ್ತು ಹಾಗೂ ತರಕಾರಿಗಳನ್ನು ಮನೆ ಮನೆಗೆ ನೀಡುವುದಕ್ಕೆ ಈಗಾಗಲೇ ಅವಕಾಶ ನೀಡಲಾಗಿದೆ. ಗ್ರಾಪಂನಿಂದ ಅವಶ್ಯಕ ವಸ್ತು ಹಾಗೂ ತರಕಾರಿಗಳನ್ನು ಮಾರಾಟ ಮಾಡುವುದಕ್ಕೆ ಅನುಮತಿ ಪಡೆದ ವಾಹನ ಮಾಲೀಕರು ಬೇರೆ ಉದ್ದೇಶಕ್ಕೆ ಬಳಸುತ್ತಿದ್ದಾರೆ ಎಂದು ಮಾಹಿತಿ ಬಂದಿದ್ದು ಅವರನ್ನು ವಿಚಾರಿಸಿ ಕ್ರಮ ಕೈಗೊಳ್ಳಲಾಗವುದು ಎಂದು ಹೇಳಿದರು.
ಗ್ರಾಪಂ ಅಧ್ಯಕ್ಷೆ ವಿದ್ಯಾ ಪ್ರಕಾಶ ನಾಯ್ಕ ಅಧ್ಯಕ್ಷತೆವಹಿಸಿದ್ದರು. ಗ್ರಾಪಂ ಸದಸ್ಯರಾದ ಆರ್.ಕೆ.ನಾಯ್ಕ, ಸೀತಾರಾಮ ಶೇಟ್, ಗ್ರಾಮಲೆಕ್ಕಾಧಿಕಾರಿ ಹೇಮಾವತಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಹೆಲ್ಪ ಡೆಸ್ಕ ಪ್ರತಿನಿಧಿಗಳು ಇದ್ದರು. ಕಾರ್ಯದರ್ಶಿ ಎಸ್.ಎಸ್.ಸಾಗರೇಕರ್ ಕಾರ್ಯಕ್ರಮ ನಿರ್ವಹಿಸಿದರು.
ನಿಧನ-ನಾರಾಯಣ ತಿಮ್ಮಪ್ಪ ನಾಯ್ಕ.
ಸಿದ್ದಾಪುರ: ತಾಲೂಕಿನ ನಿಡಗೋಡ ನಿವಾಸಿ ನಿವೃತ್ತ ಶಿಕ್ಷಕ ನಾರಾಯಣ ತಿಮ್ಮಪ್ಪ ನಾಯ್ಕ (72) ನಿಧನಹೊಂದಿದರು.
ಅವರಿಗೆ ಪತ್ನಿ, ನಾಲ್ವರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವಿದೆ.
ಎನ್.ಟಿ.ನಾಯ್ಕ ಗುರೂಜಿ ಎಂದೇ ಗುರುತಿಸಿಕೊಂಡಿದ್ದ ಅವರು ಹೆಗ್ಗೋಡಮನೆ ಹಾಗೂ ವಾಜಗದ್ದೆ ಸಹಿಪ್ರಾ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ಜನಮನ್ನಣೆಗಳಿಸಿದ್ದರು.

ಸಿದ್ಧಾಪುರದಲ್ಲಿ ಇಂದು ಕೋವಿಡ್ ದೃಢಪಟ್ಟವರ ಸಂಖ್ಯೆ 136
ಗುಣಮುಖರಾದವರು-98 ವಿವರ ಕೆಳಗಿನಂತಿದೆ.


ಸಿದ್ಧಾಪುರ ಎ.ಪಿ.ಎಂ.ಸಿ. ರಸ್ತೆಯಲ್ಲಿ ವಾಸಿಸುತಿದ್ದ ಭದ್ರಾಚಾರಿ ಯಾನೆ ಸನ್ಯಾಸಿ ಭದ್ರಯ್ಯ ಇಂದು ನಿಧನರಾದರು. ಸೇವಾ ಭಾರತ ಸಂಘಟನೆ ಅವರ ಶವ ಸಂಸ್ಕಾರವನ್ನು ವಿಧಿವತ್ತಾಗಿ ಪೂರೈಸಿದೆ.
ನಗರದ ಪಿಗ್ಮಿ ಸಂಗ್ರಹಕಾರ, ಎಲ್.ಐ.ಸಿ. ಪ್ರತಿನಿಧಿ ಶಿವಾನಂದ ಅನಂತ ಕಾಮತ್ ನಿನ್ನೆ ರಾತ್ರಿ ನಿಧನರಾಗಿದ್ದಾರೆ. ಇವರಿಗೆ ಯಕೃತ್ ಕಾಯಿಲೆ ಹಿನ್ನೆಲೆಯಲ್ಲಿ ಕೆಲವು ಕಾಲ ಚಿಕಿತ್ಸೆ ನೀಡಲಾಗಿತ್ತು.
