

ಜನ, ವಾಹನ ಓಡಾಟ ಇಲ್ಲದ ಸಾಗರ, ಯಲ್ಲಾಪುರ ರಸ್ತೆಯಲ್ಲಿ ಇಂದು ಒಂದೇ ಸಮನೆ ಎಂಬುಲನ್ಸ್ ಗಳ ಓಡಾಟ ನೋಡಿದ ಜನರು ಕಂಗಾಲಾಗುವಂತಿತ್ತು. ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಜಿಲ್ಲೆಯ ಆಸ್ಫತ್ರೆ ಗಳಲ್ಲಿ ಏನಾಯ್ತು ಎಂದು ಎಲ್ಲರೂ ವಿಚಾರಿಸುವ ಮೊದಲು ಹೊರಬಿದ್ದ ಸುದ್ದಿಯೆಂದರೆ… ಶಿರಸಿ ಸರ್ಕಾರಿ ಆಸ್ಫತ್ರೆಯಲ್ಲಿ ಆಕ್ಸಿಜನ್ ಸೋರಿಕೆಯಾಗಿ ಜೀವವಾಯು ಪಡೆಯುತಿದ್ದ ಕೋವಿಡ್ ಸೋಂಕಿತರನ್ನು ನೆರೆಯ ಸಿದ್ಧಾಪುರ,ಯಲ್ಲಾಪುರ ಗಳಿಗೆ ಸಾಗಿಸುವ ಅನಿವಾರ್ಯತೆ.
……….ಇಂಥ ಅನಿವಾರ್ಯತೆಗಳಲ್ಲಿ ಸದಾ ಜನರೊಂದಿಗೆ ಸ್ಫಂದಿಸುತ್ತದೆ. ಅನಿವಾರ್ಯತೆ ಇರುವವರಿಗೆ ಕಿಟ್ ವ್ಯವಸ್ಥೆ, ಪಿ.ಪಿ.ಇ. ಕಿಟ್, ಆಮ್ಲಜನಕ ಪೂರೈಕೆ ಹೀಗೆ ಆಪತ್ತು,ಅವಗಢ ಸೇರಿದಂತೆ ಯಾವುದೇ ಸಮಯದಲ್ಲಿ ನಾವು ಜನಪರವಾಗಿ ಕೆಲಸ ಮಾಡಲು ಪಕ್ಷದ ನಿರ್ಧೇಶನವಿದೆ,ಅದರಂತೆ ನಡೆದುಕೊಳ್ಳುತ್ತೇವೆ. -ಭೀಮಣ್ಣ ನಾಯ್ಕ, ಡಿ.ಸಿ.ಸಿ. ಅಧ್ಯಕ್ಷ
ಕೋವಿಡ್ ಸೋಂಕಿತರಿಗೆ ಅಂತಿಮ ಹಂತದಲ್ಲಿ ಆಮ್ಲಜನಕ ಅಳವಡಿಕೆ, ಆಯ್.ಸಿ.ಯು. ಸೌಲಭ್ಯ ಕಲ್ಪಸುವ ಅನಿವಾರ್ಯತೆ ಇರುತ್ತದೆ. ಈ ಕಾರಣಕ್ಕಾಗಿ ತಾಲೂಕು ಆಸ್ಫತ್ರೆಗಳಿಂದ ಹಿಡಿದು ಜಿಲ್ಲೆ, ವಿಭಾಗೀಯ ಆಸ್ಫತ್ರೆಗಳಲ್ಲಿ ಈ ಅನುಕೂಲತೆ ಕಲ್ಪಿಸಲಾಗುತ್ತದೆ.
ಶಿರಸಿಗೆ ಹೊಸದಾಗಿರುವ ಆಮ್ಲಜನಕ ಪೂರೈಕೆ ಈಗ ಪ್ರಯೋಗ ಹಂತದಲ್ಲಿದೆ. ಈ ಪ್ರಾರಂಭಿಕ ವ್ಯವಸ್ಥೆಯ ಕೊಳವೆಯಲ್ಲಿ ಕಾಣಿಸಿಕೊಂಡ ಲೀಕೇಜ್ ನಿಂದ ರೋಗಿಗಳಿಗೆ ತೊಂದರೆ ಆಗಬಾರದೆಂದು ತಕ್ಷಣ ಅವರನ್ನು ಸಿದ್ಧಾಪುರ, ಯಲ್ಲಾಪುರ ತಾಲೂಕು ಆಸ್ಫತ್ರೆಗಳಿಗೆ ರವಾನಿಸಲಾಗಿದೆ.
ಈ ಬಗ್ಗೆ ಸಮಾಜಮುಖಿಗೆ ಪ್ರತಿಕ್ರೀಯೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ತಾಂತ್ರಿ ತೊಂದರೆ ಯಿಂದ ಶಿರಸಿ ಸರ್ಕಾರಿ ಆಸ್ಫತ್ರೆಯ ಆಕ್ಸಿಜನ್ ಸೋರಿಕೆಯಾಗಿದೆ. ಇದರಿಂದ ಕೋವಿಡ್ ಸೋಂಕಿತರಿಗೆ ತೊಂದೆಯಾಗಬಾದೆಂದು ತಕ್ಷಣ ಯಲ್ಲಾಪುರ, ಸಿದ್ಧಾಪುರ ಆಸ್ಪತ್ರೆಗಳಿಗೆ ಈ ರೋಗಿಗಳನ್ನು ಸಾಗಿಸಲಾಗಿದೆ. ಈ ಪ್ರಕರಣದಿಂದ ಯಾರಿಗೂ ತೊಂದರೆ ಆಗಿಲ್ಲ. ನಾಳೆ ಮಧ್ಯಾಹ್ನದ ವರೆಗೆ ಶಿರಸಿಯಲ್ಲಿ ಎಂದಿನಂತೆ ಸಕಲ ವ್ಯವಸ್ಥೆ, ಚಿಕಿತ್ಸೆಗೆ ಅವಶ್ಯವಿರುವ ಅನುಕೂಲಗಳನ್ನು ಕಲ್ಪಿಸುತ್ತೇವೆ. ಇವೆಲ್ಲಾ ಇಲ್ಲಿನ ವ್ಯವಸ್ಥೆಗೆ ಹೊಸತು ಮುಂದೆ ಇಂಥ ವ್ಯತ್ಯಾಸ,ತೊಂದರೆಗಳಾಗದಂತೆ ಜವಾಬ್ಧಾರಿ ವಹಿಸುತ್ತೇವೆ ಎಂದರು.
ತಕ್ಷಣ ಸ್ಪಂದಿಸಿದ ಭೀಮಣ್ಣ- ಶಿರಸಿಯಲ್ಲಿ ಆಮ್ಲಜನಕ ಸೋರಿಕೆಯಾದ ವಿಷಯ ತಿಳಿದ ಭೀಮಣ್ಣ ಸ್ಥಳಿಯ ಜನಪ್ರತಿನಿಧಿಗಳು ಬರುವ ಮೊದಲೇ ಧಾವಿಸಿದರು. ಘಟನಾ ಸ್ಥಳದ ಸ್ಥಿತಿ ಅವಲೋಕಿಸಿದ ಅವರು ಆಸ್ಫತ್ರೆ ಸಿಬ್ಬಂದಿಗಳಿಂದ ಮಾಹಿತಿ ಪಡೆದು ಶಿರಸಿ ಸರ್ಕಾರಿ ಆಸ್ಫತ್ರೆಗೆ ಅವಶ್ಯವಿದ್ದ 5 ಜಂಬೋ ಸಿಲಿಂಡರ್ ಗಳನ್ನು ತಕ್ಷಣ ಪೂರೈಸಿದರು. ಈ ವೇಳೆಗಾಗಲೇ ತುರ್ತು ವ್ಯವಸ್ಥೆಗಾಗಿ ಎಲ್ಲಾ ರೋಗಿಗಳನ್ನು ಸಿದ್ಧಾಪುರ, ಯಲ್ಲಾಪುರಗಳಿಗೆ ಸಾಗಿಸಲಾಗಿತ್ತು.

ರಾಜ್ಯದ ಕೆಲವು ಕಡೆ ಆಕ್ಸಿಜನ್ ಸಮಸ್ಯೆಯಿಂದ ಅನೇಕರು ಜೀವ ತೆತ್ತಿದ್ದಾರೆ. ರೋಗಿಗಳು, ಅಸಹಾಯಕರ ಬಗ್ಗೆ ಬೇಜವಾಬ್ಧಾರಿತನ ಸರಿಯಲ್ಲ. ಸಂಬಂಧಿಸಿದ ವ್ಯವಸ್ಥೆ, ಅಧಿಕಾರಿಗಳು ಇಂಥ ಅವಗಢಗಳಾಗದಂತೆ ಜಾಗೃತಿ ವಹಿಸಬೇಕು. ಸ್ಥಳಿಯ ಜನಪ್ರತಿನಿಧಿಗಳು ಇಂಥ ಅವಶ್ಯ ವ್ಯವಸ್ಥೆ ಬಗ್ಗೆ ಕೂಡಾ ನಿರ್ಲಕ್ಷ ವಹಿಸುವುದು ಸರಿಯಲ್ಲ. ಕಾಂಗ್ರೆಸ್ ಇಂಥ ಅನಿವಾರ್ಯತೆಗಳಲ್ಲಿ ಸದಾ ಜನರೊಂದಿಗೆ ಸ್ಫಂದಿಸುತ್ತದೆ. ಅನಿವಾರ್ಯತೆ ಇರುವವರಿಗೆ ಕಿಟ್ ವ್ಯವಸ್ಥೆ, ಪಿ.ಪಿ.ಇ. ಕಿಟ್, ಆಮ್ಲಜನಕ ಪೂರೈಕೆ ಹೀಗೆ ಆಪತ್ತು,ಅವಗಢ ಸೇರಿದಂತೆ ಯಾವುದೇ ಸಮಯದಲ್ಲಿ ನಾವು ಜನಪರವಾಗಿ ಕೆಲಸ ಮಾಡಲು ಪಕ್ಷದ ನಿರ್ಧೇಶನವಿದೆ,ಅದರಂತೆ ನಡೆದುಕೊಳ್ಳುತ್ತೇವೆ. -ಭೀಮಣ್ಣ ನಾಯ್ಕ, ಡಿ.ಸಿ.ಸಿ. ಅಧ್ಯಕ್ಷ

