

ಹೊಸ ಆದೇಶದಂತೆ ಶಿರಸಿ ಉಪವಿಭಾಗದ ಸಿದ್ದಾಪುರ, ಯಲ್ಲಾಪುರ, ಶಿರಸಿ, ಮುಂಡಗೋಡು ಸೇರಿ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಜೂನ್ 7 ರ ವರೆಗೆ ಮಂಗಳವಾರ ಮತ್ತು ಶುಕ್ರವಾರ ಮಾತ್ರ ಮುಂಜಾನೆ 6 ರಿಂದ ಹತ್ತರ ವರೆಗೆ ಖರೀದಿಗೆ ಅವಕಾಶ ಉಳಿದ ದಿಗಳಲ್ಲಿ ಸಂಪೂರ್ಣ ಲಾಕ್ ಡೌನ್
ಸಿದ್ದಾಪುರ: ತಾಲೂಕಿನ ಪ್ರಸಿದ್ಧ ನಾಟಿ ವೈದ್ಯ ಕಡಕೇರಿಯ ಗೋವಿಂದ್ ಗಣಪತಿ ನಾಯ್ಕ (65) ಭಾನುವಾರ ಕೊರೋನಾ ಸೋಂಕಿನಿಂದ ನಿಧನರಾದರು. ಅವರು ಪತ್ನಿ, ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. ಅವರ ಅಕಾಲಿಕ ನಿಧನ ಆಯುರ್ವೇದ ಕ್ಷೇತ್ರ ಕ್ಕೆ ತುಂಬಲಾರದ ನಷ್ಟವಾಗಿದೆ. ಸಮಾಜ ಸೇವೆಯ ಗುಣಗಳನ್ನು ಬೆಳೆಸಿಕೊಂಡಿದ್ದ ಅವರು ಯಾವಾಗಲೂ ಸಮಾಜದ ಒಳಿತಿಗಾಗಿ ಯೋಚಿಸುತ್ತಿದ್ದರು ಹಾಗೂ ಶ್ರಮಿಸುತ್ತಿದ್ದರು.
ಜನರು ಸಹಾಯಯಾಚಿಸಿದರೆ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದರು. ಸಣ್ಣಮನೆ ಗೋವಿಂದಣ್ಣ ಎಂದು ಮನೆಮಾತಾಗಿದ್ದ ಅವರು ಜನರ ಪ್ರೀತಿ ಪಾತ್ರರಾಗಿದ್ದರು. ಜಾಂಡಿಸ್, ಕಿಂಡ್ನಿ ಕಲ್ಲು, ಬಿಳಿಸೆರಗು, ಮಂಡಿನೋವು, ಪೈಲ್ಸ್, ಕಸ, ಅಲರ್ಜಿ, ಅಸ್ತಮಾ, ಕಫ ಸೇರಿದಂತೆ ಅನೇಕ ಕಾಯಿಲೆಗಳಿಗೆ ಹಾಗೂ ಜಾನುವಾರುಗಳ ರೋಗಗಳಿಗೂ ಆಯುರ್ವೇದಿಕ್ ಔಷಧಿ ನೀಡುತ್ತಿದ್ದರು.
ಬೇಡ್ಕಣಿ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ, ತ್ಯಾರ್ಸಿ(ಕಡಕೇರಿ) ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅವರ ನಿಧನಕ್ಕೆ ಊರಿನ ಗಣ್ಯರು, ಅಪಾರ ಜನಸ್ತೋಮ ಕಂಬನಿ ಮಿಡಿದಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ.


ಲಾಕ್ಡೌನ್ ನಿಯಮ ಉಲ್ಲಂಘಿಸಿ ಮಾಂಸ ಮಾರಿದವರ ಮೇಲೆ ಪ್ರಕರಣ- ಲಾಕ್ ಡೌನ್ ನಿಯಮಗಳ ನಡುವೆ ಅನಧೀಕೃತವಾಗಿ ಕೋಳಿ ಮಾಂಸ ಮಾರುತಿದ್ದ ಎರಡು ಚಿಕನ್ ಸ್ಟಾಲ್ ಗಳ ಮೇಲೆ ಸಿದ್ಧಾಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ನಗರದ ಅಲ್ ರಜಾ ಚಿಕನ್ ಮತ್ತು ಕಾಳಿಕಾಂಬಾ ಚಿಕನ್ ಸೆಂಟರ್ ಗಳಲ್ಲಿ ಮಾಂಸ ಮಾರಿದ ಆರೋಪದ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆ ಅನ್ವಯ ಪ್ರಕರಣಗಳು ದಾಖಲಾಗಿವೆ.
