

ಕೋವಿಡ್-19 ಸೋಂಕು ಪತ್ತೆಗೆ ಹೊಸ ಪರೀಕ್ಷೆ: ಒಂದೇ ಕ್ಷಣದಲ್ಲಿ ಬರುತ್ತೆ ಫಲಿತಾಂಶ!
ಕೋವಿಡ್-19 ಸೋಂಕು ಪತ್ತೆಗೆ ಹೊಸ ಪರೀಕ್ಷೆ ಮಾದರಿಯನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದು, ಒಂದೇ ಕ್ಷಣದಲ್ಲಿ ಫಲಿತಾಂಶ ಬರಲಿದೆ.
ಗಮನಿಸಿ-ಉತ್ತರ ಕನ್ನಡ ಜಿಲ್ಲೆಯಲ್ಲಿ ಜೂನ್ 7 ರ ವರೆಗೆ ನೀವು ಮಂಗಳವಾರ ಮತ್ತು ಶುಕ್ರವಾರ ಮಾತ್ರ ಬೆಳಿಗ್ಗೆ 6 ರಿಂದ 10 ರ ವರೆಗೆ ಮನೆಯಿಂದ ಹೊರ ಬರಬಹುದು. ಕೋವಿಡ್ ಪ್ರಕರಣಗಳಿರುವ ಗ್ರಾಮೀಣ ಪ್ರದೇಶದಲ್ಲೇ ಜನ ಓಡಾಟ, ಸಾರ್ವಜನಿಕ ವ್ಯವಹಾರ ನಡೆಯುತ್ತಿರುವ ವರ್ತಮಾನ ತನಿಖೆಯಿಂದ ಸಿದ್ಧವಾಗಿದೆ.
ಮೃತರ ಹಕ್ಕುಗಳನ್ನು ರಕ್ಷಿಸಿ: ಶವಸಂಸ್ಕಾರ, ಆಂಬ್ಯುಲೆನ್ಸ್ ಸೇವೆಗಳ ದುಬಾರಿ ಶುಲ್ಕದ ವಿರುದ್ಧ ಸುಪ್ರೀಂ ಗೆ ಅರ್ಜಿ
ಶವಸಂಸ್ಕಾರಗಳು, ಆಂಬುಲೆನ್ಸ್ ಸೇವೆಗಳಿಗೆ ದುಬಾರಿ ಶುಲ್ಕ ವಿಧಿಸುತ್ತಿರುವುದರ ಪರಿಣಾಮವಾಗಿ ಅದೆಷ್ಟೋ ಕುಟುಂಬಗಳಿಗೆ ಅಗಲಿದ ತಮ್ಮ ಸದಸ್ಯರ ಅಂತ್ಯಸಂಸ್ಕಾರವನ್ನು ನೆರವೇರಿಸಲಾಗದೇ ಗಂಗಾ ನದಿಯಲ್ಲಿ ಶವಗಳನ್ನು ಹಾಕುತ್ತಿರುವುದು ಬೇಸರ ಮೂಡಿಸುತ್ತಿದೆ

ನವದೆಹಲಿ: ಶವಸಂಸ್ಕಾರಗಳು, ಆಂಬುಲೆನ್ಸ್ ಸೇವೆಗಳಿಗೆ ದುಬಾರಿ ಶುಲ್ಕ ವಿಧಿಸುತ್ತಿರುವುದರ ಪರಿಣಾಮವಾಗಿ ಅದೆಷ್ಟೋ ಕುಟುಂಬಗಳಿಗೆ ಅಗಲಿದ ತಮ್ಮ ಸದಸ್ಯರ ಅಂತ್ಯಸಂಸ್ಕಾರವನ್ನು ನೆರವೇರಿಸಲಾಗದೇ ಗಂಗಾ ನದಿಯಲ್ಲಿ ಶವಗಳನ್ನು ಹಾಕುತ್ತಿರುವುದು ಬೇಸರ ಮೂಡಿಸುತ್ತಿದೆ ಎಂದು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿರುವ ಅರ್ಜಿಯೊಂದರಲ್ಲಿ ಎನ್ ಜಿಒ ಡಿಎಂಸಿ ಹೇಳಿದೆ.
ಎನ್ ಜಿಒ ಡಿಸ್ಟ್ರೆಸ್ ಮ್ಯಾನೇಜ್ಮೆಂಟ್ ಕಲೆಕ್ಟೀವ್ ಇಂಡಿಯಾ ಜೋಸ್ ಅಬ್ರಹಮ್ ಮೂಲಕ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, “ಆಂಬುಲೆನ್ಸ್, ಶವಸಂಸ್ಕಾರ ಸೇವೆಗಳ ಶುಲ್ಕ ದುಬಾರಿಯಾಗುತ್ತಿರುವುದರ ಪರಿಣಾಮವಾಗಿ ಗಂಗಾ ನದಿಗಳಲ್ಲಿ ಅದೆಷ್ಟೋ ಮಂದಿ ತಮ್ಮನ್ನು ಅಗಲಿದ ಸದಸ್ಯರ ಶವಗಳನ್ನು ಗಂಗಾ ನದಿಯಲ್ಲಿ ಹಾಕುತ್ತಿದ್ದಾರೆ” ಎಂದು ತಿಳಿಸಿದೆ.

ಮೃತರ ಹಕ್ಕನ್ನು ಎತ್ತಿ ಹಿಡಿಯುವುದಕ್ಕೆ ಇತ್ತೀಚೆಗಷ್ಟೇ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸಲಹೆಗಳನ್ನು ಹೊರಡಿಸಿತ್ತು ಎಂದು ಎನ್ ಜಿಒ ಉಲ್ಲೇಖಿಸಿದೆ.
“ಪರಿಸ್ಥಿತಿ ಹೀಗಿದ್ದರೂ ಸಹ ಯಾವುದೇ ಕಠಿಣ ಕ್ರಮವಿಲ್ಲ, ಶುಲ್ಕ ಹೆಚ್ಚಿಸಿ ಲಾಭ ಮಾಡಿಕೊಳ್ಳುತ್ತಿದ್ದಾರೆ. ಈ ಹಿಂದೆಯೂ ಸುಪ್ರೀಂ ಕೋರ್ಟ್ ಹಲವು ಆದೇಶಗಳಲ್ಲಿ, ಮೃತರ ಹಕ್ಕುಗಳ ಬಗ್ಗೆ ಹೇಳಿದ್ದು, ಮೃತರ ಘನತೆಯನ್ನು ಗೌರವಿಸಬೇಕು ಎಂದು ಹೇಳಿದೆ. ಮೃತರ ಘನತೆ, ಹಕ್ಕುಗಳನ್ನು ಕಾಪಾಡುವುದಕ್ಕೆ ಕಾನೂನು ರಚಿಸಬೇಕು ಈ ಸಂಬಂಧ ಎಲ್ಲಾ ರಾಜ್ಯಗಳು. ಕೇಂದ್ರಾಡಳಿತ ಪ್ರದೇಶಗಳಿಗೂ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಬೇಕು ಎಂದು ಎನ್ ಜಿಒ ಆಗ್ರಹಿಸಿದೆ

ನವದೆಹಲಿ: ಕೋವಿಡ್-19 ಸೋಂಕು ಪತ್ತೆಗೆ ಹೊಸ ಪರೀಕ್ಷೆ ಮಾದರಿಯನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದು, ಒಂದೇ ಕ್ಷಣದಲ್ಲಿ ಫಲಿತಾಂಶ ಬರಲಿದೆ. ವಿಜ್ಞಾನಿಗಳು ಹೊಸ ಮಾದರಿಯ ಸಂವೇದಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದು, ಈಗಿನ ಕೋವಿಡ್-19 ಪತ್ತೆಯ ವಿಧಾನಗಳಿಗಿಂತಲೂ ಇದು ತ್ವರಿತವಾಗಿ ಫಲಿತಾಂಶವನ್ನು ನೀಡಲಿದೆ.
ಕೊರೋನಾ ವೈರಸ್ ಇರುವಿಕೆಯನ್ನು ಪತ್ತೆ ಮಾಡುವುದಕ್ಕೆ, ಜೆನೆಟಿಕ್ ಅಂಶಗಳ ಪ್ರತಿಗಳಂತಹ ವೈರಲ್ ಬಯೋಮೇಕರ್ಸ್ ನ ಸಂಖ್ಯೆಯನ್ನು ಹೆಚ್ಚಿಸಬೇಕಾಗುತ್ತದೆ. ಇದನ್ನು ಪಾಲಿಮರೇಸ್ ಚೈನ್ ರಿಯಾಕ್ಷನ್ ಎಂದು ಕರೆಯಲ್ಪಡುವ ತಂತ್ರವನ್ನು ಪ್ರಯೋಗಿಸಿ ಮಾಡಲಾಗುತ್ತದೆ, ಅಥವಾ ಟಾರ್ಗೆಟ್ ಬಯೋಮೇಕರ್ ಗೆ ಬೈಂಡಿಂಗ್ ಸಿಗ್ನಲ್ ನ್ನು ಹೆಚ್ಚಿಸುವ ವಿಧಾನವನ್ನು ಅನುಸರಿಸಲಾಗುತ್ತದೆ.
ಜರ್ನಲ್ ಆಫ್ ವ್ಯಾಕ್ಯೂಮ್ ಸೈನ್ಸ್& ಟೆಕ್ನಾಲಜಿಯಲ್ಲಿ ವಿವರಿಸಲಾಗಿರುವ ಸೂಕ್ಷ್ಮ ಪರೀಕ್ಷಾ ವಿಧಾನದಲ್ಲಿ ಮೇಲೆ ಹೇಳಿರುವ ಎರಡನೇ ರೀತಿಯ ವಿಧಾನವನ್ನು ಅತ್ಯಾಧುನಿಕವಾಗಿ ಬಳಕೆ ಮಾಡಲಾಗುತ್ತದೆ
ಕೆಲವು ರಿವರ್ಸ್ ಟ್ರಾನ್ಕ್ರಿಪ್ಷನ್ ಪಾಲಿಮರೇಸ್ ಚೈನ್ ರಿಯಾಕ್ಷನ್ (ಆರ್ ಟಿ-ಪಿಸಿಆರ್) ಟೆಸ್ಟ್ ಗಳನ್ನು ಕೋವಿಡ್-19 ಪರೀಕ್ಷೆಗೆ ಹೆಚ್ಚು ಅಧಿಕೃತ ಎಂದು ಪರಿಗಣಿಸಲಾಗಿದೆ. ಕೆಲವು ಪಿಸಿಆರ್ ಟೆಸ್ಟ್ ಗಳು ಕೆಲವೇ ಗಂಟೆಗಳಲ್ಲಿ ಫಲಿತಾಂಶವನ್ನು ನೀಡಿದರೆ ಮತ್ತೆ ಕೆಲವು ದಿನಗಳ ನಂತರ ಸಿಗುತ್ತವೆ. (kpc)
