ಕಾರವಾರದ ಯುವಕ ಸಂಕೇತ್ ಸಹದೇವ ಪ್ರಸಿದ್ಧ ತೆಲುಗು ಡ್ಯಾನ್ಸ್ ಶೋ “ಡ್ಯಾನ್ಸ್ ಪ್ಲಸ್ 2021” ನಲ್ಲಿ ವಿಜೇತರಾಗಿ ಹೊರಹೊಮ್ಮಿದ್ದಾರೆ.
ಕಾರವಾರದ ಯುವಕ ಸಂಕೇತ್ ಸಹದೇವ ಪ್ರಸಿದ್ಧ ತೆಲುಗು ಡ್ಯಾನ್ಸ್ ಶೋ “ಡ್ಯಾನ್ಸ್ ಪ್ಲಸ್ 2021” ನಲ್ಲಿ ವಿಜೇತರಾಗಿ ಹೊರಹೊಮ್ಮಿದ್ದಾರೆ.
ಫೈನಲ್ ಹಂತ ತಲುಪಿದ್ದ ಸಂಕೇತ್ ತಮ್ಮ ಅದ್ಭುತ ನೃತ್ಯದ ಮೂಲಕ ಪ್ರಶಸ್ತಿ ಗೆದ್ದಿದ್ದಾರೆ. ಸಂಕೇತ್ ಅವರಿಗೆ ಟ್ರೋಫಿ ಜತೆಗೆ 20 ಲಕ್ಷ ರೂ. ನಗದು ಬಹುಮಾನ ಲಭಿಸಿದೆ.
ಇನ್ನು ಇದೇ ರಿಯಾಲಿಟಿ ಶೋ ನಲ್ಲಿ ಶಿವಮೊಗ್ಗದ ನಿವೇದಿತಾ ಹಾಗೂ ಮಂಗಳೂರಿನ ವೆಲಾಸಿಟಿ ತಂಡ ಸಹ ಭಾಗವಹಿಸಿತ್ತು.
ಬಾಲ್ಯದಿಂದಲೂ ಡ್ಯಾನ್ಸರ್ ಆಗಬೇಕೆಂದು ಕನಸು ಕಂಡಿದ್ದ ಸಂಕೇತ್ ಇದುವರೆಗೆ ವಿವಿಧ ನೃತ್ಯ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸಿದ್ದಾರೆ. (kpc)