

ಕೇಂದ್ರದ ಮಾಜಿ ಸಚಿವ ಅನಂತ ಕುಮಾರ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಜೊತೆಗೆ ಬೆಳಗಾವಿಯ ಕಿತ್ತೂರು ಖಾನಾಪುರ ವಿಧಾನಸಭಾ ಕ್ಷೇತ್ರಗಳಿಗೂ ಸಂಸದರು. ಚುನಾವಣೆ ಸಮಯದಲ್ಲಿ ಕೋಮುಪ್ರಚೋದಕ ಭಾಷಣ ಮಾಡಿ ಮತದಾರರ ಮನಗೆಲ್ಲುವ ಅನಂತಕುಮಾರ ಹೆಗಡೆ ತಮ್ಮ 6 ಅವಧಿಗಳ ಲೋಕಸಭಾ ಸದಸ್ಯತ್ವದ ಅವಧಿಯಲ್ಲಿ ಮಾಡಿದ ಕೆಲಸಳೇನು ಎನ್ನುವುದು ಅವರಿಗೂ ತಿಳಿದಂತಿಲ್ಲ!
ಜಾತಿ-ಧರ್ಮಗಳ ಕೋಮುಪ್ರಚೋದಕ ಭಾಷಣ, ಕೆಲಸಗಳಿಂದ ಕುಖ್ಯಾತವಾಗಿರುವ ಅನಂತಕುಮಾರ ಹೆಗಡೆ ಚುನಾವಣೆ ನಂತರ ಸಾರ್ವಜನಿಕರಿಗೆ ಸುಲಭಕ್ಕೆ ಸಿಗುವ ಆಸಾಮಿಯಲ್ಲ ಎನ್ನುವ ಆರೋಪಗಳೂ ಅವರ ಮೇಲಿವೆ.
ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಅಪರೂಪವಾಗಿರುವ ಅನಂತಕುಮಾರ ಹೆಗಡೆಯವರನ್ನು ಹುಡುಕಿಕೊಡಿ ಎಂದು ಈಗ ಕಿತ್ತೂರಿನ ಜನ ಪತ್ರ ಬರೆದು ಸ್ಥಳಿಯ ತಹಸಿಲ್ಧಾರರಿಗೆ ಮನವಿ ಮಾಡಿದ್ದಾರೆ. ಹೀಗೆ ಮನವಿ ಮಾಡಿದ ಪತ್ರ ಈಗ ಸಾಮಾಜಿಕ ಜಾಲತಾಣದಲ್ಲೂ ಸದ್ದು ಮಾಡಿದೆ. ಶಿರಸಿ ಕ್ಷೇತ್ರ ಮತ್ತು ಉತ್ತರ ಕನ್ನಡದಲ್ಲಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಅನಂತಕುಮಾರ ಹೆಗಡೆ ಹುಡುಕಿಕೊಡಿ ಎನ್ನುವ ಪೋಸ್ಟ್ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡು ತ್ತಿರುವುದು ಮಾಮೂಲಿಯಾಗಿವೆ. ಮಾಧ್ಯಮಗಳು ಈ ಸುದ್ದಿಯನ್ನು ನಿರ್ಲಕ್ಷಿಸಿರುವುದೂ ವಿಶೇಶವಾಗಿದೆ.

