ಸಿದ್ದಾಪುರದ ಅರಣ್ಯ ಇಲಾಖೆಯ ಸಿಬ್ಬಂದಿ ರಾಘವೇಂದ್ರ ಹೊಸೂರು ಕರೋನಾಕ್ಕೆ ಬಲಿಯಾದ ಮಾಹಿತಿ ಬಂದಿದೆ. ರಾಘವೇಂದ್ರ ಹೊಸೂರು ಮೂಲತ: ಸಿದ್ಧಾಪುರ ಹೊಸೂರಿನ ಮಡಿವಾಳ ಕೇರಿಯವರು ಶಿರಸಿಯಲ್ಲಿ ವಾಸವಾಗಿದ್ದ ಇವರು ಶಿರಸಿಗೆ ವರ್ಗಾವಣೆಯಾಗಿದ್ದರು. ಮೃತರು ತಾಯಿ ,ಪತ್ನಿ ಮಕ್ಕಳು ಸೇರಿದಂತೆ ಅಪಾರ ಸ್ನೇಹಿತರು, ಬಂಧು ಬಳಗವನ್ನು ಅಗಲಿದ್ದಾರೆ.
ಬಂಗಾರ್ಯ ಮೋಶ್ಯಾ ನಾಯ್ಕ. ಇನ್ನಿಲ್ಲ
ಸಿದ್ದಾಪುರ: ತಾಲೂಕಿನ ಹಿರಿಯ ಯಕ್ಷಗಾನ ಕಲಾವಿದರು ಹಾಗೂ ಮುಠ್ಠಳಿ ಹಳಿಯಾಳದ ಮಹಿಷಾಸುರ ಮರ್ಧಿನಿ ದೇವಸ್ಥಾನದ ಸಂಸ್ಥಾಪಕರು ಹಾಗೂ ಪ್ರಧಾನ ಅರ್ಚಕರಾಗಿದ್ದ ಬಂಗಾರ್ಯ ಮೋಶ್ಯಾ ನಾಯ್ಕ (89) ಹಳಿಯಾಳ ಮಂಗಳವಾರ ನಿಧನಹೊಂದಿದರು.
ಅವರಿಗೆ ಪತ್ನಿ, ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವಿದೆ.
ಹುಕ್ಲಮಕ್ಕಿ ಯಕ್ಷಗಾನಮೇಳದ ಮ್ಯಾನೇಜರ್ ಆಗಿ, ಹಳಿಯಾಳ ಮಹಿಷಾಸುರ ಮರ್ಧಿನಿ ಯಕ್ಷಗಾನ ಮಂಡಳಿಯ ಸಂಸ್ಥಾಪಕರಾಗಿದ್ದಲ್ಲದೆ ಯಕ್ಷಗಾನ ಕಲಾವಿದರಾಗಿಯೂ ತಮ್ಮನ್ನು ಗುರತಿಸಿಕೊಂಡಿದ್ದರು. ಹಾರ್ಸಿಕಟ್ಟಾ ವ್ಯವಸಾಯ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು. ಹಾರ್ಸಿಕಟ್ಟಾ ಗ್ರಾಪಂ ಘಟಕದ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಹಾಗೂ ತಾಲೂಕು ಮಟ್ಟದ ಮುಖಂಡರಾಗಿದ್ದರು.
ಸಂತಾಪ: ಬಂಗಾರ್ಯ ನಾಯ್ಕ ಹಳಿಯಾಳ ಅವರ ನಿಧನಕ್ಕೆ ದಿವಾನ್ ಯಕ್ಷಸಮೂಹ ಹಾರ್ಸಿಕಟ್ಟಾದ ಅಧ್ಯಕ್ಷ ಪಿ.ವಿ.ಹೆಗಡೆ ಹೊಸಗದ್ದೆ, ಕಾರ್ಯದರ್ಶಿ ರಮೇಶ ಹೆಗಡೆ ಹಾರ್ಸಿಮನೆ, ಆರ್.ವಿ.ಹೆಗಡೆ ಹೊನ್ನೆಹದ್ದ, ಅನಂತ ಶಾನಭಾಗ, ಶ್ರೀಕಾಂತ ಶಾನಭಾಗ, ಗೋಪಾಲ ಹೆಗಡೆ ಹುಲಿಮನೆ, ಗೋಪಾಲ ಹೆಗಡೆ ವಾಜಗದ್ದೆ,ಯಕ್ಷಚಂದನ ದಂಟಕಲ್ಲಿನ ಅಧ್ಯಕ್ಷ ಹಾಗೂ ಯಕ್ಷಗಾನ ಭಾಗವತರಾದ ಸತೀಶ ಹೆಗಡೆ ದಂಟಕಲ್, ಎಂ.ಆರ್.ಹೆಗಡೆ ದಂಟಕಲ್, ಸುಜಾತಾ ಹೆಗಡೆ ದಂಟಕಲ್ಲ ಮತ್ತಿತರರು ಸಂತಾಪ ವ್ಯಕ್ತಪಡಿಸಿದ್ದಾರೆ.