

ಉತ್ತರ ಕನ್ನಡ ಜಿಲ್ಲೆ ಹಲವು ಕ್ಷೇತ್ರಗಳಲ್ಲಿ ದಾಖಲೆ ಬರೆಯುತ್ತಿದೆ. ಇದಕ್ಕೆ ಕರೋನಾ ವೂ ಹೊರತಲ್ಲ 30 ಸಾವಿರಕ್ಕಿಂತ ಹೆಚ್ಚು ಕರೋನಾ ಸೋಂಕಿತರಿದ್ದ ಉತ್ತರ ಕನ್ನಡ ಜಿಲ್ಲೆಯಲ್ಲಿ ಚೇತರಿಕೆ ಅಥವಾ ಗುಣಮುಖರಾದವರ ಸಂಖ್ಯೆ ಶೇಕಡಾ 99. ಹೆಚ್ಚಿನ ಕರೋನಾ ಪರೀಕ್ಷೆ, ಸ್ವಯಂ ಪರೀಕ್ಷೆಗೆ ಒಳಪಟ್ಟ ಜನರಿಂದ ಕೋವಿಡ್ ಪ್ರಮಾಣ ಹೆಚ್ಚಿದೆ. ಈ ಕಾರಣಕ್ಕಾಗಿ ಎರಡ್ಮೂರು ಹಂತಗಳಲ್ಲಿ ಲಾಕ್ ಡೌನ್ ಮಾಡಿರುವುದು ಇಲ್ಲಿಯ ವಿದ್ಯಮಾನ. ಈಗಿನ ಲಾಕ್ ಡೌನ್ ವಿರೋಧಿಸುವವರಿಗೂ, ಪಾಲಿಸುವವರಿಗೂ ಶಾಕ್ ಒಂದು ಕಾದಿದೆ. ಅದೇನೆಂದರೆ…… ಇಂದು ಜಿಲ್ಲೆಯಾದ್ಯಂತ ಪ್ರವಾಸ ಮಾಡಿ ವಾಸ್ತವ ಪರಿಶೀಲಿಸಿದ ಜಿಲ್ಲಾ ಪೋಲಿಸ್ ವರಿಷ್ಠ ಶಿವಪ್ರಕಾಶ ದೇವರಾಜು ನುಡಿ.
ಶಿರಸಿ-ಸಿದ್ಧಾಪುರ ನಂತರ ಹೊನ್ನಾವರ, ಕುಮಟಾ ಗಳಲ್ಲಿ ಕೋವಿಡ್ ನಿರ್ವಹಣೆ ಪ್ರಗತಿ ಪರಿಶೀಲನೆ ಮಾಡಿದ ಎಸ್.ಪಿ. ಶಿವಪ್ರಕಾಶ ತಾಲೂಕಾ ಆಸ್ಫತ್ರೆಗಳ ಕೋವಿಡ್ ನಿರ್ವಹಣೆ, ಅಲ್ಲಿಯ ವಾಸ್ತವ ಸ್ಥಿತಿಗತಿಗಳ ಬಗ್ಗೆ ವೈದ್ಯರು, ಅಧಿಕಾರಿಗಳೊಂದಿಗೆ ಚರ್ಚಿಸಿದರು.
ನಿರೀಕ್ಷಿತ ಮಟ್ಟದಲ್ಲಿ ಉತ್ತರ ಕನ್ನಡದಲ್ಲಿ ಕರೋನಾ ನಿಯಂತ್ರಣ ಸಾಧ್ಯವಾಗಿಲ್ಲ ಹಾಗಾಗಿ ಜಿಲ್ಲೆಯಲ್ಲಿ ಈಗ ಹೇರಲಾಗಿರುವ ಲಾಕ್ಡೌನ್ ನಿಶೇಧಾಜ್ಞೆಯನ್ನೇ ಇನ್ನಷ್ಟು ಬಿಗುಗೊಳಿಸಿ, ಹಾಲು-ಅಲ್ಕೋಹಾಲು, ಕಾರ್ಮಿಕರು ಅವರಿವರ ಚಲನವಲನವನ್ನೇ ಒಂದು ವಾರದ ಮಟ್ಟಿಗೆ ನಿರ್ಬಂಧಿಸಿದರೆ ಆಗ ಕರೋನಾ ಪ್ರಮಾಣ ನಿಯಂತ್ರಣಕ್ಕೆ ಬರಬಹುದು ಎನ್ನುವ ಅರ್ಥದಲ್ಲಿ ಮಾತನಾಡಿದರು.
ಈ ಬಗ್ಗೆ ತಾಲೂಕಾ ಮಟ್ಟದ ಅಧಿಕಾರಿಗಳ ಜೊತೆ ಚರ್ಚಿಸಿದ ಅವರು ಒಂದು ವಾರ ಕಾಲ ಯಾರ ಚಲನವಲನವೂ ಇಲ್ಲದ ಸಂಪೂರ್ಣ ರಿಯಾಯತಿ ರಹಿತ ಲಾಕ್ ಡೌನ್ ನಿಶೇಧಾಜ್ಞೆಯನ್ನು ಕಟ್ಟುನಿಟ್ಟಾಗಿ ಜಾರಿ ಮಾಡಿದರೆ ಹೇಗೆ ಎಂದು ಚರ್ಚಿ ಸಿದರಂತೆ! ಹೀಗೆ ಅಧಿಕಾರಿಗಳ ಪರಿಶೀಲನೆ, ನಿರ್ಧಾರಗಳಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ದಿನಕ್ಕೆ ಎರಡ್ಮೂರರಂತೆ ಆದೇಶಗಳು, ನಿಯಮಗಳು ಜಾರಿಯಾಗುತ್ತಿವೆ.
ಇಂದು ಕಾರವಾರ ತಲುಪಿ ನಾಳೆ ವರದಿ ನೀಡಲಿರುವ ಶಿವಪ್ರಕಾಶ ದೇವರಾಜು ವರದಿ, ಸಲಹೆ ಆಧರಿಸಿ ಮತ್ತೆ ಲಾಕ್ ಡೌನ್ ಬಿಗುವಾದರೆ ಜಿಲ್ಲೆಯಲ್ಲಿ ಕನಿಷ್ಟ ಒಂ ದು ವಾರ ಕಠಿಣ ನಿರ್ಬಂಧಿತ ಲಾಕ್ ಡೌನ್ ಜಾರಿಯಾಗಲಿದೆ. ಸ್ಥಳಿಯ ಅಧಿಕಾರಿಗಳು ಈಗಿನಂತೆಯೇ ಮುಂದೆ ಕೂಡಾ ಜನರ ಮನೆ ಬಾಗಿಲಿಗೆ ಅವಶ್ಯ ವಸ್ತು ಪೂರೈಸುತ್ತೇವೆ ಎಂದಿದ್ದಾರಂತೆ. ಹಳ್ಳಿಗಾಡಿನ ಜನರಂತೂ ಅವರು ಆಯ್ಕೆ ಮಾಡಿದ ಅನಂತ, ವಿಶ್ವೇ ಶ್ವರ, ನರೇಂದ್ರರಂಥ ತಮ್ಮ ಪ್ರತಿನಿಧಿಗಳ ಹೆಸರಿನ ದೇವರ ನಾಮ ಭಜಿಸಬೇಕಷ್ಟೆ….


