

ಕರೋನಾ ಸೋಂಕಿತರ ಸರಾಸರಿ ಪ್ರಮಾಣದಲ್ಲಿ ಉತ್ತರ ಕನ್ನಡ ಜಿಲ್ಲೆ ದೇಶದಲ್ಲೇ ನಂ1, ಕರೋನಾ ಪರೀಕ್ಷೆಗೊಳಪಟ್ಟ ಜನರ ಸರಾಸರಿ ಪ್ರಮಾಣದಲ್ಲೂ ಉತ್ತರ ಕನ್ನಡ ದ ಸಾಧನೆ ಟಾಪ್ ನಲ್ಲೇ ಇದೆ. ಇಂಥ ದಾಖಲೆಗಳ ಉತ್ತರ ಕನ್ನಡ ಜಿಲ್ಲೆಯಲ್ಲಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕರೋನಾ ಶಂಕಿತರಿಗೆ ಹೆಬ್ಬಾರ್ ಕಿಟ್ ಗಳನ್ನು ವಿತರಿಸುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಮೇಲ್ಪಂಕ್ತಿ ಹಾಕಿದ್ದಾರೆ.



ಉತ್ತರ ಕನ್ನಡ ಜಿಲ್ಲೆಯಲ್ಲಿ ಯಲ್ಲಾಪುರ ಮತ್ತು ಸಿದ್ಧಾಪುರಗಳು ಹೆಚ್ಚು ಕೋವಿಡ್ ಪರೀಕ್ಷೆ ಮಾಡಿದ ಪ್ರಮುಖ ತಾಲೂಕುಗಳಾಗಿವೆ. ಈ ಎರಡೂ ತಾಲೂಕುಗಳಲ್ಲಿ ಇರುವ ಸಂರಚನೆಯಲ್ಲೇ ಈ ಸಾಧನೆ ಮಾಡಲಾಗಿದೆ. ವಿಶೇಶವೆಂದರೆ… ಯಲ್ಲಾಪುರದ ಅರಬೈಲ್ ಶಿವರಾಮ ಹೆಬ್ಬಾರ್ ತಮ್ಮ ಕ್ಷೇತ್ರ, ಹುಟ್ಟೂರು ಯಲ್ಲಾಪುರದಲ್ಲಿ ಸುಸಜ್ಜಿತ ಕೋವಿಡ್ ಲಸಿಕೆ ನೀಡಿಕೆ ಕೇಂದ್ರವನ್ನು ಪ್ರಾರಂಭಿಸಿದ್ದಾರೆ. ಯಲ್ಲಾಪುರ ಸರ್ಕಾರಿ ಆಸ್ಫತ್ರೆ ಆವರಣದಲ್ಲೇ ತಲೆ ಎತ್ತಿರುವ ಈ ನೂತನ ಕಟ್ಟಡವನ್ನು ಶಿವರಾಮ ಹೆಬ್ಬಾರ್ ರ ಸ್ನೇಹಿತ ಬಾಲಕೃಷ್ಣ ನಾಯಕ ನಿರ್ಮಿಸಿಕೊಟ್ಟಿದ್ದಾರೆ. ಕಳೆದ 25 ವರ್ಷಗಳಿಂದ ಜನಪ್ರತಿನಿಧಿಯಾದವರು ಮಾಡದ ಕೆಲಸವನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಮಾಡಿ ಮಾದರಿಯಾಗಿದ್ದಾರೆ ಎನ್ನುವ ಪ್ರಶಂಸೆಗೂ ಅವರು ಪಾತ್ರರಾಗಿದ್ದಾರೆ.
