

ಧರ್ಮಶ್ರೀ ಪೌಂಡೇಶನ್ ಮತ್ತು ಲಯನ್ಸ್ ಕ್ಲಬ್ ಸಿದ್ದಾಪುರ ಸಹಯೋಗದಲ್ಲಿ ಆಟೋ ರಿಕ್ಷಾ ಚಾಲಕರಿಗೆ ದಿನಸಿ ಕಿಟ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಕೆ.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕರಾದ ಆರ್.ಎಂ.ಹೆಗಡೆ ಬಾಳೇ ಸರ ಮಾತನಾಡಿ ಕೊರೋನಾ ಮಹಾ ಮಾರಿಯಿಂದ ದುಡಿಮೆ ಮಾಡಿ ಜೀವನ ನಡೆಸುವವರ ಸ್ಥಿತಿ ಕಷ್ಟವಾಗಿದೆ. ಈ ಸಮಯದಲ್ಲಿ ಧರ್ಮಶ್ರೀ ಪೌಂಡೇಶನ್ ಮತ್ತು ಲಯನ್ಸ್ ಕ್ಲಬ್ ಸೇರಿ ನೀಡುತ್ತಿರುವ ಆಹಾರ ದಿನಸಿ ಕಿಟ್ ಆಟೋ ಚಾಲಕರ ಸಹಾಯಕ್ಕೆ ಬರಲಿದೆ ಎಂದರು.
ಈ ಸಂಸ್ಥೆಗಳ ರೀತಿಯಲ್ಲಿ ಇತರ ಸಂಘ ಸಂಸ್ಥೆಗಳೂ ಸಹಾಯ ನೀಡಲು ಮುಂದೆ ಬರಲಿ ಎಂದು ಆಶಿಸಿದರು. ಜರ್ಮನಿಯಲ್ಲಿ ಉದ್ಯೋಗದಲ್ಲಿರುವ ಸಾಪ್ಟ್ ವೇರ್ ಇಂಜಿನಿಯರ್ ಅಲೋಕ ಹೆಗಡೆ ಮಾತನಾಡಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ಮಾನವೀಯತೆ ಎಂದರು. ಧರ್ಮಶ್ರೀ ಫೌಂಡೇಶನ್ ಕಾರ್ಯಾಧ್ಯಕ್ಷ ಡಾ.ರವಿ ಹೆಗಡೆ ಹೂವಿನಮನೆ ಧರ್ಮಶ್ರೀ ಫೌಂಡೇಶನ್ ಕುರಿತು ತಿಳಿಸಿದರು. ಲಯನ್ಸ್ ಕ್ಲಬ್ ಅಧ್ಯಕ್ಷರಾದ ಶ್ಯಾಮಲಾ ಆರ್. ಹೆಗಡೆ ಮಾತನಾಡಿ ಲಯನ್ಸ್ ಸಂಸ್ಥೆಯ ಸದಸ್ಯರು ಮತ್ತು ಧರ್ಮಶ್ರೀ ಪೌಂಡೇಶನ್ ಜೊತೆ ಸೇರಿ ಈ ಸಹಾಯ ಮಾಡಿದೆ. ಲಯನ್ಸ್ ಸಂಸ್ಥೆಗೆ ಹೊರಗಡೆಯಿಂದ ಸಹಾಯ ಬರುತ್ತದೆ ಎನ್ನುವ ಅಭಿಪ್ರಾಯ ಇದೆ ಆದರೆ ಸತ್ಯವೆಂದರೆ ನಾವೇ ಸದಸ್ಯರು ನಮ್ಮ ಹಣ ಕೂಡಿಸಿ ಸಾರ್ವಜನಿಕ ಸೇವೆ ಮಾಡುವುದಾಗಿ ತಿಳಿಸಿದರು.
ಆಟೋ ಚಾಲಕರ ಸಂಘದ ಅಧ್ಯಕ್ಷ ವಾಸು ಕೊಂಡ್ಲಿ ಮಾತನಾಡಿ ತಮ್ಮ ಕಷ್ಟ ಗುರುತಿಸಿ ಸಹಾಯ ಮಾಡಿದ ಕುರಿತು ಎರಡೂ ಸಂಸ್ಥೆಗಳಿಗೆ ಧನ್ಯವಾದ ಹೇಳಿ ಮುಂದಿನ ದಿನಗಳಲ್ಲಿ ತಾವೂ ಲಯನ್ಸ್ ಸಂಸ್ಥೆಯ ಜೊತೆ ಸಮಾಜ ಸೇವೆಗೆ ಕೈ ಜೋಡಿಸಲು ಶಕ್ತಿ ನೀಡಲಿ ಎಂದು ಕೋರಿದರು. ಸತೀಶ್ ಗೌಡರ,ಕಾರ್ಯದರ್ಶಿ ರಾಘವೇಂದ್ರ ಭಟ್,ಪ್ರತೀಕ್ ಹೆಗಡೆ,ಸುಶ್ರುತ ಹೆಗಡೆ ಹೂವಿನಮನೆ ಉಪಸ್ಥಿ ತ ರಿದ್ದರು. ಜಿ ಜಿ.ಹೆಗಡೆ ಬಾಳಗೋಡ ಕಾರ್ಯಕ್ರಮ ನಿರ್ವಹಣೆ ಮಾಡಿದರು




ಸಿದ್ದಾಪುರ ತಾಲೂಕಿನ ಮನಮನೆ ಗ್ರಾಮದಲ್ಲಿ ರವಿ ಡಿ ಚೆನ್ನಣ್ಣನವರ್ ಅಭಿಮಾನಿ ಬಳಗದ ವತಿಯಿಂದ ರವಿ ಚೆನ್ನಣ್ಣನವರ್ ಮಾರ್ಗದರ್ಶನದಲ್ಲಿ ಕೋವಿಡ್ ಸಮಯದಲ್ಲಿ ಮನಮನೆ ಊರಿನಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ 90 ಕುಟುಂಬಗಳಿಗೆ ದಿನಸಿ ಕಿಟ್ ಗಳನ್ನೂ ವಿತರಿಸಲಾಯಿತು. ಈ ವಿತರಣೆ ಸಮಯದಲ್ಲಿ ಸಿದ್ದಾಪುರ ಪೊಲೀಸ್ ಠಾಣೆಯ ಪಿಎಸ್ಐ ಮಹಾಂತಪ್ಪ ಕುಂಬಾರ್ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು. ಊರಿನ ನಾಗರಿಕರು ಇವರೆಲ್ಲರಿಗೂ ಅಭಿನಂದನೆ ತಿಳಿಸಿದರು.



ಸುಬ್ರಾಯ ಗಣಪತಿ ಹೆಗಡೆ ನಿಧನ
ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾ ಸಮೀಪದ ಚಳ್ಳೆಹದ್ದ ನಿವಾಸಿ ಸುಬ್ರಾಯ ಗಣಪತಿ ಹೆಗಡೆ(68) ಹೃದಯಾಘಾತದಿಂದ ಗುರುವಾರ ನಿಧನಹೊಂದಿದರು.
ಅವರಿಗೆ ಇಬ್ಬರು ಪುತ್ರರು ಹಾಗೂ ಅಪಾರ ಬಂಧುಬಳಗವಿದೆ. ಇವರು ಕವಲಕೊಪ್ಪ ಸಿದ್ಧಿವಿನಾಯಕ ದೇವಸ್ಥಾನದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಒಂದೊಂದು ಹೆಣ ಬಿದ್ದರೂ ಬಿಜೆಪಿಗರ ಜೇಬಿಗೆ ಹಣ ಬಿದ್ದಂತೆ, ಈ ಹಣಕ್ಕಾಗಿಯೇ ಕಿತ್ತಾಟ ಶುರು-ಕಾಂಗ್ರೆಸ್

ಬೆಂಗಳೂರು: ಕೊರೋನಾ ಕಾಲಘಟ್ಟವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಭರಪೂರ ಲೂಟಿಗೆ ಬಳಸಿಕೊಳ್ಳುತ್ತಿವೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಆರೋಪಿಸಿದೆ.
‘ಒಂದೊಂದು ಹೆಣ ಬಿದ್ದರೂ ಬಿಜೆಪಿಗರ ಜೇಬಿಗೆ ಹಣ ಬಿದ್ದಂತೆ,ಈ ಹೆಣದ ಮೇಲಿನ ಹಣಕ್ಕಾಗಿಯೇ ಬಿಜೆಪಿಯಲ್ಲಿ ಕಿತ್ತಾಟ ಶುರುವಾಗಿರುವುದು, ಪಿಎಂ ಕೇರ್ಸ್‌ನಿಂದ ಹಿಡಿದು ಔಷಧ ಕಾಳಸಂತೆ, ಲಸಿಕೆ ಬ್ಲಾಕಿಂಗ್‌ವರೆಗೂ ಇವರ ಬಾಚಿ ತಿನ್ನುವ ಕೈಗಳು ಚಾಚಿವೆ ಎಂದು ಅಪಾದಿಸಿದೆ.
ಆರೋಗ್ಯ ತುರ್ತು ಪರಿಸ್ಥಿತಿಯನ್ನು ರಾಜ್ಯ ಬಿಜೆಪಿ ನಾಯಕರು ಹಣ ದೋಚಲು ಬಳಸಿಕೊಳ್ಳುತ್ತಿರುವುದು ಅತ್ಯಂತ ನೀಚ ಹಾಗೂ ಅಮಾನವೀಯ. ಕೇಂದ್ರದ ಲಸಿಕೆ ಅನ್ಯಾಯದ ವಿರುದ್ಧ ತುಟಿ ಬಿಚ್ಚದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ತೇಜಸ್ವಿ ಹಾಗೂ ರವಿ ಸುಬ್ರಮಣ್ಯ ಬಡವರ ವ್ಯಾಕ್ಸಿನ್ ಕಳ್ಳತನ ಮಾಡಿದ್ದರ ಬಗ್ಗೆ ಇನ್ನೂ ತನಿಖೆ ಏಕಿಲ್ಲ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. (kpc)
