ಮೈಕ್ರೋ ಕಂಟೋನ್ಮೆಂಟ್ ವಲಯಗಳ ಬಗ್ಗೆ ಈ ಕೆಳಗಿನಂತೆ ಸ್ಪಷ್ಟೀಕರಣ ಜಿಲ್ಲಾಧಿಕಾರಿ ಉತ್ತರ ಕನ್ನಡ ಜಿಲ್ಲೆ .
ಹೊಸದಾಗಿ ಹೊರಡಿಸಿದ ಮಾರ್ಗಸೂಚಿಯಲ್ಲಿ ತಿಳಿಸಿದಂತೆ, ಸೋಮವಾರ ಮಂಗಳವಾರ ಬುಧವಾರ ಗುರುವಾರ ದಿನಗಳಂದು ಬೆಳಿಗ್ಗೆ 8:00 ಇಂದ ಬೆಳಿಗ್ಗೆ 12 ಗಂಟೆಯವರೆಗೆ ಸಾರ್ವಜನಿಕರಿಗೆ ಸಡಿಲಿಕೆ ಇರುತ್ತದೆ.
ಈ ಸಂದರ್ಭದಲ್ಲಿ ರಾಜ್ಯ ಸರ್ಕಾರವು ನೀಡಿದ ಮಾರ್ಗಸೂಚಿಯಲ್ಲಿ ನಮೂದಾಗಿರುವ ಅಗತ್ಯ ವಸ್ತುಗಳು ಮತ್ತು ದಿನಸಿ ವಸ್ತುಗಳನ್ನು ಮಾರಾಟ ಮಾಡಲು ಅನುಕೂಲ ಮಾಡಿಕೊಡಲಾಗಿದೆ ಮತ್ತು ವಿಶೇಷವಾಗಿ ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ವಸ್ತುಗಳನ್ನು ರೈತಸಮುದಾಯ ಪಡೆದುಕೊಳ್ಳಲು ಸೂಕ್ತ ವ್ಯವಸ್ಥೆಯನ್ನು ಮಾಡಿಕೊಡಲು ತಿಳಿಸಿದೆ.
ಈ ಹಿಂದೆ ಕಂಟೋನ್ಮೆಂಟ್ ವಲಯಗಳೆಂದು ಗುರುತಿಸಲಾಗಿರುವ ಪ್ರಮುಖವಾಗಿ, ಕಾರವಾರ ದಾಂಡೇಲಿ, ಸಿದ್ದಾಪುರ, ಶಿರಸಿ ಯಲ್ಲಾಪುರ, ಮುಂಡಗೋಡ ಇವುಗಳಲ್ಲಿ ಮೈಕ್ರೋ ಕಂಟೋನ್ಮೆಂಟ್ ವಲಯಗಳನ್ನು ಗುರುತಿಸಿ, ಇಂತಹ ಮೈಕ್ರೋ ಕಂಟೋನ್ಮೆಂಟ್ ವಲಯಗಳಲ್ಲಿ ಸಂಪೂರ್ಣ ಲಾಕ್ಡೌನ್ ವ್ಯವಸ್ಥೆಯನ್ನು ಜಾರಿಗೆ ತಂದು ಇಂತಹ ವಲಯಗಳಲ್ಲಿ ಜನರ ಅತ್ಯವಶ್ಯಕ ವಸ್ತುಗಳಿಗೆ ತೊಂದರೆಯಾಗದಂತೆ ಎಲ್ಲ ರೀತಿಯ ವ್ಯವಸ್ಥೆಯನ್ನು ಮಾಡಿಕೊಳ್ಳಲು ಸೂಚಿಸಲಾಗಿದೆ ತುರ್ತು ಸೇವೆಗಳಿಗೆ ಜನರಿಗೆ ಯಾವುದೇ ತೊಂದರೆ ಆಗದಂತೆ ವ್ಯವಸ್ಥೆಯನ್ನು ಮಾಡಿಕೊಳ್ಳಲು ಸೂಚಿಸಲಾಗಿದೆ. ಪಡಿತರ ಚೀಟಿಯ ಆಹಾರ ಶೇಕಡಾ 90 ರಷ್ಟು ಹಂಚಿಕೆ ಆಗಿದ್ದು ಉಳಿದ ಪಡಿತರ ಹಂಚಿಕೆಯನ್ನು ಮಾಡಿಕೊಡುವ ವ್ಯವಸ್ಥೆಯನ್ನು ತಹಸೀಲ್ದಾರರು ಮಾಡಲು ಸೂಚಿಸಿದೆ.
ಯಾವ ಪ್ರದೇಶದಲ್ಲಿ ಕೋವಿಡ್ ಪ್ರಕರಣಗಳು ಹರಡುವ ಸಾಧ್ಯತೆ ಇರುತ್ತದೆ ಎಂಬುದನ್ನು ಪರಿಶೀಲಿಸಿಕೊಂಡು ಸೂಕ್ಷ್ಮ ಕಂಟೋನ್ಮೆಂಟ್ ವಲಯಗಳನ್ನಾಗಿ ಮಾಡಲು ತಹಶೀಲ್ದಾರರಿಗೆ ಮತ್ತು ಸಹಾಯಕ ಆಯುಕ್ತರು ಗಳಿಗೆ ತಿಳಿಸಿದೆ ಸೂಕ್ಷ್ಮ ಕಂಟೋನ್ಮೆಂಟ್ ವಲಯಗಳೆಂದು ಘೋಷಣೆ ಮಾಡಿದ ಪ್ರದೇಶಗಳಿಗೆ ದಿನಸಿ ವಸ್ತುಗಳು ಹಣ್ಣು-ತರಕಾರಿಗಳನ್ನು ಜನರ ಮನೆಬಾಗಿಲಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಲು ಆಯಾ ಸ್ಥಳೀಯ ಆಡಳಿತ ವ್ಯವಸ್ಥೆಗೆ ಸೂಚನೆಯನ್ನು ನೀಡಲಾಗಿದೆ. ಇವೆಲ್ಲವುಗಳನ್ನು ಮಾಡುವಾಗ ಸಾರ್ವಜನಿಕರಿಗೆ ತೊಂದರೆಯಾಗದಂತೆ ಬಹಳ ಮುಖ್ಯವಾಗಿ ಕೋವಿಡ್ ಪ್ರಕರಣಗಳು ಪ್ರಸರಣ ಆಗದ ರೀತಿಯಲ್ಲಿ ನೋಡಿಕೊಳ್ಳುವಂತೆ ಸಲಹೆಗಳನ್ನು ಮತ್ತು ಸೂಚನೆಗಳನ್ನು ನೀಡಲಾಗಿದೆ. ಅತ್ಯಗತ್ಯ ವಸ್ತುಗಳ ಸಾಗಾಣಿಕೆಗೆ ಯಾವುದೇ ರೀತಿಯ ತೊಂದರೆ ಆಗದ ರೀತಿಯಲ್ಲಿ ಕಾರ್ಯವನ್ನು ನಿರ್ವಹಿಸಲು ತಿಳಿಸಲಾಗಿದೆ.