

ದಾಂಡೇಲಿಯಲ್ಲಿ ನಿನ್ನೆ ಪೋಲಿಸರಿಗೆ ಸಿಕ್ಕಿಬಿದ್ದ ಕೋಟಾನೋಟು ಪ್ರಕರಣದ ಒಟ್ಟೂ 6 ಆರೋಪಿಗಳೊಂದಿಗೆ 2 ಕಾರುಗಳನ್ನು ವಶಪಡಿಸಿಕೊಂಡಿರುವ ಪೊಲೀಸರು 65 ಸಾವಿರಕ್ಕೂ ಹೆಚ್ಚು ಕೋಟಾ ನೋಟು, 5 ಲಕ್ಷಕ್ಕಿಂತ ಹೆಚ್ಚು ಅಸಲಿ ಕರೆನ್ಸಿ ವಶಕ್ಕೆ ಪಡೆದಿದ್ದಾರೆ. 6 ಜನರಲ್ಲಿ ಮೂವರು ಸ್ಥಳಿಯರು ಮೂವರು ಮಹಾರಾಷ್ಟ್ರದವರಾಗಿದ್ದು ಕೋಟಾ ನೋಟು ದಂಧೆಯ ಬೃಹತ್ಜಾಲ ಪತ್ತೆ ಮಾಡಿದ ದಾಂಡೇಲಿ ಪೊಲೀಸರನ್ನು ಎಸ್.ಪಿ. ಶಿವಪ್ರಕಾಶ ದೇವರಾಜು ಅಭಿನಂದಿಸಿದ್ದಾರೆ.
13.5 ಲಕ್ಷ ಮೌಲ್ಯದ ಕೋಟಾ ನೋಟನ್ನು ಚಲಾವಣೆ ನಡೆಸುವ ಉದ್ದೇಶದಿಂದ ಕಾರ್ಯನಿರ್ವಹಿಸುತಿದ್ದ ಮಹಾರಾಷ್ಟ್ರ ಮೂಲದ ಇಬ್ಬರು ಆರೋಪಿಗಳನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸರು ದಾಂಡೇಲಿಯಲ್ಲಿ ಬಂಧಿಸಿದ್ದಾರೆ. ಇದೇ ಪ್ರಕರಣದಲ್ಲಿ ಶಾಮೀಲಾದ ದಾಂಡೇಲಿಯ ಶಬ್ಬೀರ್ ಕುಟ್ಟಿ ಎನ್ನುವವನು ಪರಾರಿಯಾಗಿದ್ದಾನೆ. ಆರೋಪಿಗಳು ಮಹಾರಾಷ್ಟ್ರದಿಂದ ತಂದಿದ್ದ 500 ಮುಖಬೆಲೆಯ ನೋಟಿನ ಕಟ್ಟುಗಳ ಮೌಲ್ಯ ಒಟ್ಟೂ 13.5 ಲಕ್ಷ ಎನ್ನಲಾಗಿದೆ. ಸ್ವಿಫ್ಟ್ ಕಾರಿನಲ್ಲಿ ಬಂದಿದ್ದ ಮಹಾರಾಷ್ಟ್ರ ರತ್ನಗಿರಿ ಜಿಲ್ಲೆಯ ಆಗಂತುಕರನ್ನು ದಾಂಡೇಲಿ ಗ್ರಾಮೀಣ ಪೊಲೀಸರು ಭರ್ಚಿ ಚೆಕ್ ಪೋಸ್ಟ್ ಬಳಿ ವಿಚಾರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.




ಸಿದ್ಧಾಪುರದಲ್ಲಿ ಜೂನ್ ಒಂದರಂದು ಕೋವಿಡ್ ನಿಂದ ಮೃತರಾದವರು 68 ವರ್ಷದ ಶ್ರೀನಿವಾಸ್ ಹೆಗಡೆ ವಿದ್ಯಾಗಿರಿ,65 ವರ್ಷಗಳ ಲಕ್ಷ್ಮೀ ಮೊಗೇರ್ ಹೊಸೂರು, 65 ವರ್ಷಗಳ ಖಾದರ್ ಖಾನ್ ಹೊಸೂರು


