

ಸಿದ್ದಾಪುರ
ಸೇವಾ ಭಾರತಿ ಸಂಘಟನೆಯ ಕೋರಿಕೆಯ ಮೇರೆಗೆ ಮುಂಬೈ ನ ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ನುರಿತ ಅರವಳಿಕೆ ತಜ್ಞ , ಮೂಲತ: ಸಿದ್ದಾಪುರದವರಾದ ಡಾ| ವಿದ್ಯಾಧರ ಗಜಾನನ ಲಕ್ಕಪ್ಪನ್ ತಾಲೂಕ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರು ಹಾಗೂ ಸಿಬ್ಬಂದಿಗಳಿಗೆ ಆಸ್ಪತ್ರೆಯಲ್ಲಿ ಲಭ್ಯವಿರುವ ವೆಂಟಿಲೇಟರ್ ನ ನಿರ್ವಹಣೆ ಹಾಗೂ ಅದರ ಕುರಿತಾಗಿ ಹೆಚ್ಚಿನ ಮಾಹಿತಿ ನೀಡಿದರು. ಅವರ ಮಾಹಿತಿಯಿಂದ ಹೆಚ್ಚಿನ ಪ್ರಯೋಜನವಾಗಿದೆ ಎಂದು ವೈದ್ಯರುಗಳು ಸೇವಾ ಭಾರತಿ ಮತ್ತು ಡಾ|ವಿದ್ಯಾಧರ ಲಕ್ಕಪ್ಪನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.


