Big news of the day -ನಿಸರ್ಗ ನಿಯಮ ಮೀರುತ್ತಿರುವ ಮಾನವ..!

5G ವಿಕಿರಣ ಅಪಾಯ ಪ್ರಶ್ನಿಸಿ ಕೊರ್ಟ ಮೆಟ್ಟಿಲೇರಿದ್ದ ಚಿತ್ರ ನಟಿ ಜೂಹೀ ಚಾವ್ಲಾ ಅವರಿಗೆ ನ್ಯಾಯಾಲಯ 20 ಲಕ್ಷ ರೂಪಾಯಿ ದಂಡ ವಿಧಿಸಿ ಅರ್ಜಿ ವಜಾ ಗೊಳಿಸಿದೆ ಮತ್ತು “ಪ್ರಚಾರದ ಉದ್ದೇಶಕ್ಕಾಗಿ ಅರ್ಜಿ ಸಲ್ಲಿಸಲಾಗಿದೆ ಮತ್ತು ನ್ಯಾಯಾಂಗ ಪ್ರಕ್ರೀಯೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಅಸಮಾಧಾನ ವ್ಯಕ್ತ ಪಡಿಸಿದೆ” ದಶಕಗಳಕಾಲ ಒಬ್ಬ ಸ್ಟಾರ್ ನಟಿಯಾಗಿ ಮಿಂಚಿದ ಒಬ್ಬ ನಟಿ ಒಂದು ಪೆಟಿಶನ್ ಮೂಲಕ ಪ್ರಚಾರ ಪಡೆದುಕೊಳ್ಳುವ ಅಗತ್ಯ ಇದೆಯೇ? ಅಷ್ಟಕ್ಕೂ ಒಂದೇ ಒಂದು ವೈಜ್ಞಾನಿಕ ತನಿಖೆಗೆ ಆದೇಶ ನಿಡಿದ್ದಿದ್ದ್ರೆ ಸತ್ಯ ಜನಗಳ ಎದುರು ಬರ್ತಾ ಇತ್ತು ನಂತರದಲ್ಲಿ ಯಾವ ತೀರ್ಮಾನ ಬೇಕಿದ್ದ್ರೂ ನೀಡುವ ಅಧಿಕಾರ ನ್ಯಾಯಲಯಕ್ಕೆ ಇದ್ದೆ ಇತ್ತು,ಆದರೆ ನ್ಯಾಯಾಲಯಕ್ಕೆ ಈ ಪೆಟಿಶನ್ ಕೈಗೆತ್ತಿಕೊಳ್ಳುವ ಆಸಕ್ತಿ ಇರಲೇ ಇಲ್ಲ ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಗೊತ್ತಾಗುತ್ತದೆ. ಪರಿಣಾಮ ಆದಷ್ಟು ಬೇಗ 5G ತಂತ್ರಜ್ಞಾನ ಆರಂಭ.

#ವಿಷಯ_2

ಈ ಮೊಬೈಲ್ ಟಾವರ್ ಗಳು,ರೇಡಿಯೇಶನ್ ಗಳಿಂದ ಆಗುವ ಅನಾಹುತಗಳ ಬಗ್ಗೆ ಒಂದಿಷ್ಟು ಜನಗಳಿಗೆ ತಿಳುವಳಿಕೆ ಇದೆ,ಅಲ್ಲಲ್ಲಿ ಆಗಾಗ ಚರ್ಚೆಗಳು ಮಾಡುವುದನ್ನು ಕಾಣಬಹುದು ಗುಬ್ಬಚ್ಚಿಗಳು ಚಿಕ್ಕ ಪುಟ್ಟ ಪಕ್ಷಿಗಳು ಮೋಬೈಲ್ ಟಾವರ್ ಗಳ ತರಂಗಗಳ ಹೊಡೆತಕ್ಕೆ ಸತ್ತು ಹೋಗುವುದು,ಮನುಷ್ಯನ ಮೆದುಳು ಹಾನಿಗೆ ಒಳಗಾಗುವುದು ಇತ್ಯಾದಿ ವಿಷಯಗಳನ್ನು ಪತ್ರಿಕೆಗಳಲ್ಲಿ ಮ್ಯಾಗಜಿನ್ ಗಳಲ್ಲಿ ಎಲ್ಲೋ ಒಂದ್ಕಡೆ ಓದಿರ್ತೆವೆ. ಆದರೆ ಇದರಷ್ಟೇ ಭಯಾನಕವಾದ ಮತ್ತು ಮನುಷ್ಯ ಪಕ್ಷಿ ಸಂಕುಲಗಳಿಗೆ ಹಾನಿ ಉಂಟು ಮಾಡುವ ಇನ್ನೊಂದು ಉದ್ಯಮ ಇದೆ.ಅದೇ ಗಾಳಿಯಿಂದ ವಿದ್ಯುತ್ ಉತ್ಪಾದಿಸುವ ವಿಂಡ್ ಟರ್ಬೈನ್ ಗಳು ,ಅವುಗಳಿಂದ ಹೊರಡುವ ಸೂಕ್ಷ್ಮ ತರಂಗಗಳು ಕೂಡ ಗುಬ್ಬಚ್ಚಿಗಳು ಮತ್ತು ಚಿಕ್ಕ ಪುಟ್ಟ ಹಕ್ಕಿಗಳ ಬ್ರೈನ್ ಗೆ ಆಘಾತವನ್ನು ಉಂಟು ಮಾಡಿ ಸಾಯಿಸ್ತವೆ,ಮೇಲ್ಗಡೆ ಇರೋ ಫ್ಯಾನ್ ಗಳು ಒಂದು ಸುತ್ತು ಹಾಕುವಷ್ಟರಲ್ಲಿ ಕೆಳಭಾಗದಲ್ಲಿ ಸೆಟ್ ಮಾಡಲಾದ ಡೈನಮೊಗಳು 300ಕ್ಕೂ ಹೆಚ್ಚಿನ ಸುತ್ತು ಹಾಕ್ತವೆ ಅಂದ್ರೆ ಆ ತರಂಗಗಳು ಪಕ್ಷಿ ಸಂಕುಲಕ್ಕೆ ಎಷ್ಟು ಹಾರ್ಮ‌ ಫುಲ್ ಅಂತ ಯೋಚಿಸಿ.ಈ ವಿಂಡ್ ಟರ್ಬೈನ್ ಗಳ ತರಂಗಗಳು ಎಷ್ಟು ಅಪಾಯಕಾರಿ ಎಂದರೆ ಅವುಗಳ ಸುತ್ತ ಇರುವ ಗ್ರಾಮ,ಹಟ್ಟಿಗಳಲ್ಲಿನ ಗರ್ಭಿಣಿ ಸ್ತ್ರೀಯರಿಗೆ ಗರ್ಭಪಾತ ನಿಶ್ಚಿತ.ಅವುಗಳನ್ನು ಆದಷ್ಟು ಜನ ನಿಬಿಡ ಪ್ರದೇಶಗಳಿಂದ ದೂರ ಗುಡ್ಡಗಾಡು ಪ್ರದೇಶಗಳಲ್ಲಿ ಸ್ಥಾಪಿಸಬೇಕು ಎಂಬ ನಿಯಮವಿದೆ,ಆದಾಗ್ಯೂ ಅವುಗಳ ಗುತ್ತಿಗೆ ದಾರರು (ಬಹುತೇಕ ದೊಡ್ಡ ರಾಜಕೀಯ ಕುಳಗಳೇ)ಈ ನಿಯಮಗಳನ್ನು ಅನುಸರಿಸುತ್ತಿಲ್ಲ.ರೈತರಿಗೆ ಹೆಚ್ಚಿನ ಬೆಲೆ ನೀಡುವುದಾಗಿ ಮರಳು ಮಾಡಿ ಅವರ ಭೂಮಿಗಳನ್ನು ಕೊಂಡುಕೊಂಡು ಗ್ರಾಮಗಳ ಸುತ್ತಲೂ ವಿಂಡ್ ಟರ್ಬೈನ್ ಗಳನ್ನು ಸ್ಥಾಪಿಸುತ್ತಿದ್ದಾರೆ.ಅದರಲ್ಲಿ ರಾಜಕಾರಣಿಗಳ ಪಾಲುದಾರಿಕೆಯೂ ಸಹ ಇರೊದ್ರಿಂದ ಪ್ರತಿ ಗ್ರಾಮಗಳ ಸುತ್ತ ಮುತ್ತ ಹತ್ತಾರು ಫ್ಯಾನ್ ಗಳು ತಡೆ ರಹಿತವಾಗಿ ಸ್ಥಾಪಿತವಾಗುತ್ತಲೇ ಇವೆ.ಒಂದು ಪವನ ವಿದ್ಯುತ್ ಸ್ಥಾವರದ ಸ್ಥಾಪನೆಗೆ ತಗುಲುವ ವೆಚ್ಚ ಅಂದಾಜು 12-16 ಕೋಟಿ.ಇದಕ್ಕೆ ವಿಶ್ವದ ದೊಡ್ಡ ದೊಡ್ಡ ಬ್ಯಾಂಕ್ ಗಳಿಂದ ಲೋನ್ ಸೌಲಭ್ಯ ಇದೆ.ಒಂದು ಫ್ಯಾನ್ ಪ್ರತಿನಿತ್ಯ ಉತ್ಪಾದಿಸುವ ವಿದ್ಯುತ್ ನ ಮೌಲ್ಯ ಸರಿ ಸುಮಾರು ಎರಡು ಲಕ್ಷ ರೂಪಾಯಿಗಳು,ಒಂದು ಫ್ಯಾನ್ ನ ಬಾಳಿಕೆ 18-20 ವರ್ಷಗಳು ಒಂದು ದಿನಕ್ಕೆ ಎರಡು ಲಕ್ಷದಂತೆ ಲೆಕ್ಕಕ್ಕೆ ತಗೊಂಡಲ್ಲಿ ಎರಡು ಎರಡೂವರೇ ವರ್ಷಗಳಲ್ಲಿ ಉದ್ಯಮಿ ಹಾಕಿದ ಬಂಡವಾಳ ವಾಪಸ್, ಮುಂದಿನ ಹತ್ತು ಹದಿನೈದು ವರ್ಷಗಳು ನಿರಂತರ ಲಾಭ .ಇದರ ಬಗ್ಗೆ ಜನಗಳಲ್ಲಿ ಅದರಲ್ಲೂ ಹಳ್ಳಿಗಾಡಿನ ರೈತರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಾಕಷ್ಟು ಮಾಹಿತಿಗಳನ್ನು ಕಲೆ ಹಾಕುವ ಪ್ರಯತ್ನ ಮಾಡಿದ್ವಿ.ಆದರೆ ಇವುಗಳಿಗೆ ಸಂಬಂಧಪಟ್ಟ “ಕರ್ನಾಟಕ ರಾಜ್ಯ ಪುನರ್ ನವೀಕರಿಸಬಹುದಾದ ಇಂಧನಗಳ ಇಲಾಖೆ” ಯವರು ನಮ್ಮ ಯಾವ ಮನವಿಗಳಿಗೂ RTI ಗಳಿಗೂ ಸೂಕ್ತ ಉತ್ತರ ಕೊಡದೆ ನುಣಿಚಿಕೊಂಡರು..ಇನ್ನೊಂದಿಷ್ಟು ದಾಖಲೆ ಸಿಕ್ಕಿದ್ದಲ್ಲಿ ಕಾನೂನು ಹೋರಾಟಕ್ಕೆ ನಾವೂ ಸಹಿತ ಜೂಹೀ ಚಾವ್ಲಾ ಅವರಂತೆ ಸಜ್ಜಾಗಿದ್ದೆವು ಆದರೆ ಇಲಾಖೆಯ ಬೇಜವಾಬ್ದಾರಿ ತನದಿಂದ ನಮ್ಮ ಪ್ರಯತ್ನಕ್ಕೆ ತಾತ್ಕಾಲಿಕ ಹಿನ್ನಡೆಯಾಯಿತು.

ವಿಷಯ_3

ಬಿಜಾಪುರದ ಕೂಡಿಗೆ ಅಣುಸ್ಥಾವರ ಸ್ಥಾಪನೆ ಅಲ್ಲೂ ಕೂಡ ಬಡ ರೈತರ ಜಮಿನುಗಳನ್ನು ಎರಡು ಮೂರು ಪಟ್ಟು ಹೆಚ್ಚಿನ ಬೆಲೆಗೆ ಕೊಂಡು ಕೊಳ್ಳಲಾಯಿತು.ಅಣು ಸ್ಥಾವರ ಸ್ಥಾಪನೆ ಗೆ “ಪಾಟೀಲ್”(ಹೆಸರು ನೆನಪಿಲ್ಲ) ಎನ್ನುವ ಪರಿಸರ ಪ್ರೇಮಿ ಒಬ್ಬರು ವೀರೋಧ ಮಾಡಿ ಲಕ್ಷಾಂತರ ತಮ್ಮ ಸ್ವಂತ ಹಣ ಖರ್ಚು ಮಾಡಿ ಪ್ರೊಜೆಕ್ಟರ್ ಮೂಲಕ ರೈತರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು,ನ್ಯಾಯಾಲಯದ ಮೊರೆ ಕೂಡ ಹೋದರು ಆದರೆ ಯಾವ ಪ್ರಯೋಜನವೂ ಆಗಲಿಲ್ಲ ದುಡ್ಡಿನಾಸೆಗೆ ಬಿದ್ದ ರೈತರು ಜಮಿನುಗಳನ್ನು ಮಾರಿ ಬಾರು ಬಿಯರು ಅಂತ ಬುಲ್ಲೆಟ್,ಸ್ಕಾರ್ಪಿಯೋ ಗಳಲ್ಲಿ ತಿರುಗಾಡೊ ಶೋಕಿಗೆ ಬಿದ್ದು ಶೇಕಡಾ 75% ಜನ ಒಂದೆರಡು ವರ್ಷಗಳಲ್ಲಿ ಕುಡಿದು,ಅಪಘಾತ ಗಳಲ್ಲಿ ಸತ್ತು ಹೋದರು.ಅಣು ಸ್ಥಾವರ ನಿರಾತಂಕವಾಗಿ ಆರಂಭ ಆಯಿತು! ಒಂದು ಮಾಹಿತಿಯ ಪ್ರಕಾರ ಬಿಜಾಪುರದ ಕೂಡಿಗೆ ಅಣುಸ್ಥಾವರ ದಿಂದ ಹೊರ ಸೂಸುವ ಬೂದಿ ಸುತ್ತ ಮುತ್ತ ಸುಮಾರು 40km radius ನಲ್ಲಿ ಹಾರಿ ಹರಡುತ್ತದೆ.ಕುಡಿಯುವ ನೀರಿನಲ್ಲಿ ಗಾಳಿಯಲ್ಲಿ ಬೆರೆತು. ಜನಗಳು ಉಸಿರಾಟದ ತೊಂದರೆ,ಅಸ್ಥಮಾ,ಕ್ಯಾನ್ಸರ್ ನಂತಹ ಮಾರಕ ರೋಗಗಳಿಂದ ಬಳಲಿದರೆ ಹುಟ್ಟುವ ಮಕ್ಕಳು ವಿಕಲಾಂಗ ರಾಗಿ ಹುಟ್ಟುತ್ತವೆ.ಇಷ್ಟೆಲ್ಲ ಮಾಹಿತಿ ಸರ್ಕಾರಕ್ಕೆ Environment Department ಗೆ ಇದ್ದರೂ ಸಹ ಜನಗಳ ಜೀವಕ್ಕಿಂತ ಅವರುಗಳಿಗೆ ಉದ್ದಿಮೆ,ಲಾಭ ,ಅಭಿವೃದ್ದಿ!? ಮುಖ್ಯ.

ವಿಷಯ_4

ಬಳ್ಳಾರಿ ಗಣಿ ಮಾಫಿಯಾನೇ ತಗೊಳ್ಳಿ ಪ್ರತಿ ನಿತ್ಯ ಲಕ್ಷಾಂತರ ಟನ್ ಭೂಮಿ ತಾಯಿ ಒಡಲು ಬಗೆದು ಹೊರತೆಗೆದ ಮಣ್ಣು ವಿದೇಶಗಳ ಪಾಲಾಯಿತು, ಒಂದು ಟನ್ ಮಣ್ಣಿಗೆ ಸರ್ಕಾರಕ್ಕೆ ಹೋಗತ್ತಿದ್ದ Royalty 150-200.ಅದೇ ಈ ಗಣಿ ಮಾಲಿಕರು ವಿದೇಶಗಳಲ್ಲಿ ಈ ಮಣ್ಣು ಮಾರ್ತ ಇದ್ದಿದ್ದು 2000 ರೂಪಾಯಿಗೆ ಟನ್.ಸ್ವತಃ ಸರ್ಕಾರಗಳೇ ತನ್ನ ಸಂಪತ್ತನ್ನು ಹಾಳು ಗೆಡವಲು ಪಣ ತೊಟ್ಟಂತೆ ನಿಂತು ಬಿಟ್ಟಿತು.ಪರಿಣಾಮ ಬಳ್ಳಾರಿ ಬೆಂಗಾಡಾಗಿ ಹೋಯ್ತು ಅಲ್ಲಿನ ಚಿಕ್ಕ ಪುಟ್ಟ ಪ್ರಾಣಿ ಪಕ್ಷಿಗಳ ಸಂಕುಲ ನಾಶವಾಗಿ ಹೋಯಿತು.ಕುಡಿಯುವ ನೀರಿನ‌ ಸಮಸ್ಯೆ,ರೋಗ ರುಜಿನಗಳ ಉಲ್ಬಣದಿಂದ ಜನಸಾಮಾನ್ಯರ ಜೀವನ ನರಕ ಆಗಿ ಹೋಯ್ತು.ಇಷ್ಟೆಲ್ಲ ಆದ್ರೂ ನಮ್ಮ ಜನಗಳಿಗೆ ಅದು ಆಘಾತಕಾರಿ ವಿಷಯ ಅಲ್ವೇ ಅಲ್ಲ.ಅದು ಸರ್ಕಾರಿ ಆಸ್ತಿ ಏನಾದ್ರೂ ಆಗಲಿ ನಮಗ್ಯಾಕೆ ಎನ್ನುವ ಮನೋಭಾವ, ಜನಗಳಲ್ಲಿನ ಪರಿಸರ ಪ್ರೇಮ ಯಾಕೆ ಸಾಯತ್ತಿದೆ ? ನಿಸರ್ಗ ಅಳಿದರೆ ಮನುಷ್ಯ ಕುಲ ಸರ್ವನಾಶ ಆಗದೆ ಇರಲು ಸಾಧ್ಯವೆ ? ಎನ್ನುವ ಕನಿಷ್ಟ ಪ್ರಜ್ಞೆ ಕೂಡ ಯಾಕೆ ಮನುಷ್ಯನಲ್ಲಿಲ್ಲ ? ಮನುಷ್ಯ ಯಾವಾಗ ಪ್ರಕೃತಿಯ ನಿಯಮಗಳನ್ನು ಮೀರುತ್ತಾನೋ ಆವಾಗ ಖಂಡಿತ ಏಟು ತಿಂದೆ ತಿಂತಾನೆ.ಆದರೆ ಅದರ ಅರಿವು ಆತನಿಗಿಲ್ಲ , ತಂತ್ರಜ್ಞಾನ,ಡೆವಲಪ್ಮೆಂಟ್,ಅಧುನಿಕತೆ,ಯ ಹೆಸರಲ್ಲಿ ನಾವು ನಿಸರ್ಗವನ್ನು ಎದುರು ಹಾಕಿ ಕೊಳ್ಳುತ್ತಿದ್ದೆವೆ.ಇದರ ಪರಿಣಾಮ ಇನ್ನು ಕೆಲವೇ ವರ್ಷಗಳಲ್ಲಿ ಅನುಭವಿಸಲಿದ್ದೇವೆ,ಕೊನೆಯ ಮಾತು ನೆನಪಿಡಿ ಈ ಭೂಮಿ ಮೇಲೆ ಜೇನು ನೊಣಗಳ ಸಂಕುಲ ಬದುಕಿರುವ ವರೆಗೆ ಮಾತ್ರ ಮಾನವನ ಬದುಕು ಅವುಗಳು ನಾಶಗೊಂಡ ವರ್ಷವೇ ಮನುಷ್ಯನ ಸರ್ವನಾಶ ಆರಂಭ.ಇನ್ನಾದರೂ ಎಚ್ಚರಗೊಳ್ಳಿ ಪರಿಸರ ಸಂರಕ್ಷಿಸಿ ಬದುಕಿಕೊಳ್ಳಿ ಇಲ್ಲವೇ ಆತ್ಮ ಹತ್ಯೆಗೆ ಸಿದ್ದರಾಗಿ.

-ರವೀಂದ್ರ ಎನ್ ಎಸ್ .

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *