


ಉ.ಕ ಜಿಲ್ಲಾ ಪಂಚಾಯಿತಿ ಕಟ್ಟಡದಲ್ಲಿ ಅಗ್ನಿ ಅವಘಡ: ಬೆಂಕಿ ನಂದಿಸಲು ಹರಸಾಹಸ
ಕಾರವಾರ, 05- ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿಯ ಅಭಿಲೇಖಾಲಯದಲ್ಲಿ ಆಕಸ್ಮಿಕ ಬೆಂಕಿ ತಗುಲಿ ಮೂರು ಮಹಡಿಯ ಕಟ್ಟಡ ಹೊತ್ತಿ ಉರಿದಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.ಕಾರವಾರದ ಜಿಲ್ಲಾ ಪಂಚಾಯಿತಿ ಹಿಂಭಾಗದಲ್ಲಿರುವ ಅಭಿಲೇಖಾಲಯದಲ್ಲಿ ಶಾರ್ಟ್ ಸರ್ಕ್ಯೂಟ್ನಿಂದಾಗಿ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದ್ದು, ಬೆಂಕಿ ಕಟ್ಟಡದ ಮೂರು ಮಹಡಿಗೂ ಆವರಿಸಿದೆ. ಕಟ್ಟಡದಲ್ಲಿ ಜಿಲ್ಲಾ ಪಂಚಾಯಿತಿಯ ದಾಖಲಾತಿಗಳನ್ನು ಇಡಲಾಗಿದ್ದು, ಕೆಲವು ದಾಖಲಾತಿಗಳಿಗೆ ಬೆಂಕಿ ತಗುಲಿದೆ ಎನ್ನಲಾಗಿದೆ.ಅವಘಡವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದು ,. ಸ್ಥಳದಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್, ಸಿಇಒ ಪ್ರಿಯಾಂಗ್ ಎಂ. ಹಾಜರಿದ್ದು ಪರಿಶೀಲನೆ ನಡೆಸಿದ್ದಾರೆ.



ಶಿರಸಿ : ಉಪೇಂದ್ರ ಪೈ ಸೇವಾ ಟ್ರಸ್ಟ, ವತಿಯಿಂದ
ಟ್ರಸ್ಟಿನ ಅಧ್ಯಕ್ಷರಾದ ಉಪೇಂದ್ರ ಪೈ ಅವರು ತಮ್ಮ ಮನೆಯ ಆವರಣದಲ್ಲಿ ಶಿರಸಿಯ ಸವಿತಾ ಸಮಾಜದ ಭಾಂದವರಿಗೆ ಹಾಗೂ ಸಾರ್ವಜನಿಕರಿಗೆ
ಒಬ್ಬರಿಗೆ ಒಂದು ಡಜನ್ ಮೊಟ್ಟೆಯಂತೆ ಸರಿ ಸುಮಾರು ಅಂದಾಜು 3000 ಮೊಟ್ಟೆ ವಿತರಿಸಿದರು …ಸಮಸ್ತ ಸವಿತಾ ಸಮಾಜದ ಬಾಂಧವರು, ಸಾರ್ವಜನಿಕರು ಉಪೇಂದ್ರ ಪೈ ಅವರಿಗೆ ಅಭಿನಂದನೆ ಸಲ್ಲಿಸಿದರು ಈ ಸಂದರ್ಭದಲ್ಲಿ ಶಿರಸಿ ನಗರದ ಆಟೋ ಚಾಲಕ ಹಾಗೂ ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಈಶ್ವರ್ ಆಚಾರಿ, ಸಂಘದ ಸದಸ್ಯರು ಉಪಸ್ಥಿತರಿದ್ದರು.


