Covid today..ಕೋವಿಶೀಲ್ಡ್ ಅಥವಾ ಕೋವ್ಯಾಕ್ಸಿನ್ ಯಾವುದು ಅತ್ಯುತ್ತಮವಾಗಿ ಪ್ರತಿಕಾಯ ಸೃಷ್ಟಿಸುತ್ತದೆ

COVID -19 REPORTS SIDDAPURA DATE AS ON: 7.6.21

1) Today positive case :33
2)today trace p+ case:29
3) Not tracebal case :4
4) Today Death. :0
5)Today Discharge case: 62
6) ON Hand case. :270
7) TOTAL. P+ CASE.4035

#PT ADDMITT Details
1) CCC. :38
2) Taluk Hospital :18
3) KWR. :1
4) Home isolation :210
5) Out of District. :2
6) Private Hospital :1
7)Total positive cases :4035
8) Total Death : 35

SWAB DETAILS
I)Today RTPCR Test :268
2) Total RTPCR.35058 Possitive. :3213

1)Today RAT. Test :113
2)Today Possitive. :4
3) Total RAT Test. :8418
4) Total RAT Possitive:822
Total RTPCR+RAT Test :-43476

I# VACCINATION ACHIEVEMENT #
Today achievement:497
Total achievement :20828

ಕೋವಿಶೀಲ್ಡ್ ಅಥವಾ ಕೋವ್ಯಾಕ್ಸಿನ್ ಯಾವುದು ಅತ್ಯುತ್ತಮವಾಗಿ ಪ್ರತಿಕಾಯ ಸೃಷ್ಟಿಸುತ್ತದೆ: ಇಲ್ಲಿದೆ ಅಧ್ಯಯನ ವರದಿ!

ಕೊರೋನಾ ವಿರುದ್ಧ ಕೋವಿಶೀಲ್ಡ್ ಅಥವಾ ಕೋವ್ಯಾಕ್ಸಿನ್ ಯಾವುದು ಅತ್ಯುತ್ತಮ ಲಸಿಕೆ ಎಂಬ ಚರ್ಚೆಗಳು ನಡೆಯುತ್ತಾ ಬಂದಿದ್ದು ಇದೀಗ ಅಧ್ಯಯನವೊಂದು ಯಾವುದು ಅತೀ ಉತ್ತಮ ಎಂದು ಬಹಿರಂಗಪಡಿಸಿದೆ.

ನವದೆಹಲಿ: ಕೊರೋನಾ ವಿರುದ್ಧ ಕೋವಿಶೀಲ್ಡ್ ಅಥವಾ ಕೋವ್ಯಾಕ್ಸಿನ್ ಯಾವುದು ಅತ್ಯುತ್ತಮ ಲಸಿಕೆ ಎಂಬ ಚರ್ಚೆಗಳು ನಡೆಯುತ್ತಾ ಬಂದಿದ್ದು ಇದೀಗ ಅಧ್ಯಯನವೊಂದು ಯಾವುದು ಅತೀ ಉತ್ತಮ ಎಂದು ಬಹಿರಂಗಪಡಿಸಿದೆ. 

ಒಂದು ಡೋಸ್ ಮತ್ತು ಎರಡು ಡೋಸ್ ಪಡೆದಿರುವ ಆರೋಗ್ಯ ಕಾರ್ಯಕರ್ತರ ಮೇಲೆ ಅಧ್ಯಯನ ನಡೆಸಲಾಗಿತ್ತು. ಇದರಲ್ಲಿ ಕೋವಿಶೀಲ್ಡ್ ಲಸಿಕೆ ಕೋವ್ಯಾಕ್ಸಿನ್ ಗಿಂತ ಹೆಚ್ಚಿನ ಪ್ರತಿಕಾಯಗಳನ್ನು ಉತ್ಪಾದಿಸಿದೆ ಎಂದು ಲಸಿಕೆ-ಪ್ರೇರಿತ ಆಂಟಿಬಾಡಿ ಟೈಟ್ರೆ(ಕೋವಾಟ್) ನಡೆಸಿದ ಪ್ರಾಥಮಿಕ ಅಧ್ಯಯನದಲ್ಲಿ ತಿಳಿದುಬಂದಿದೆ.  

ಮೊದಲ ಡೋಸ್ ನಂತರ ಕೋವ್ಯಾಕ್ಸಿನ್ ಹೋಲಿಸಿದರೆ ಕೋವಿಶೀಲ್ಡ್ ಸ್ವೀಕರಿಸಿದವರಲ್ಲಿ ಆಂಟಿ-ಸ್ಪೈಕ್ ಪ್ರತಿಕಾಯಕ್ಕೆ ಸೆರೊಪೊಸಿಟಿವಿಟಿ ದರಗಳು ಗಮನಾರ್ಹವಾಗಿ ಹೆಚ್ಚಿವೆ ಎಂದು ಅಧ್ಯಯನ ಹೇಳಿದೆ.

ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಎರಡೂ ಲಸಿಕೆಗಳ ಎರಡು ಡೋಸ್ ಪಡೆವರಲ್ಲಿ ಉತ್ತಮವಾಗಿ ಪ್ರತಿಕಾಯಗಳು ಹೆಚ್ಚಾಗಿವೆ ಎಂದು ಅಧ್ಯಯನ ಹೇಳಿದೆ. ಆದರೆ ಕೋವಿಶೀಲ್ಡ್ನಲ್ಲಿ ಸಿರೊಪೊಸಿಟಿವಿಟಿ ದರ ಮತ್ತು ಸರಾಸರಿ ಆಂಟಿ-ಸ್ಪೈಕ್ ಪ್ರತಿಕಾಯ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ತಿಳಿಸಿದೆ. 

227 ಮಹಿಳೆಯರು ಮತ್ತು 325 ಪುರುಷರು ಸೇರಿದಂತೆ 552 ಆರೋಗ್ಯ ಕಾರ್ಯಕರ್ತರನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಇದರಲ್ಲಿ 456 ಮಂದಿ ಕೋವಿಶೀಲ್ಡ್ ಮತ್ತು 96 ಮಂದಿ ಕೋವ್ಯಾಕ್ಸಿನ್ ಮೊದಲ ಡೋಸ್ ಪಡೆದಿದ್ದರು. ಒಟ್ಟಾರೆಯಾಗಿ ಕೋವಿಶೀಲ್ಡ್ ಪಡೆದವರಲ್ಲಿ ಶೇಕಡಾ 80ರಷ್ಟು ಪ್ರತಿಕಾಯ ಹೆಚ್ಚಾಗಿದೆ. ಅದಾಗ್ಯೂ, ಅಧ್ಯಯನದ ತೀರ್ಮಾನವು ಎರಡೂ ಲಸಿಕೆಗಳು ಉತ್ತಮ ರೋಗನಿರೋಧಕ ಪ್ರತಿಕ್ರಿಯೆಯನ್ನು ಪಡೆದಿವೆ ಎಂದು ತಿಳಿದುಬಂದಿದೆ.

ಎರಡೂ ಲಸಿಕೆಗಳು ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಹೊರಹೊಮ್ಮಿಸಿದರೂ, ಮೊದಲ ಡೋಸ್ ನಂತರ ಕೋವ್ಯಾಕ್ಸಿನ್ ಗೆ ಹೋಲಿಸಿದರೆ ಕೋವಿಶೀಲ್ಡ್ ಸ್ವೀಕರಿಸುವವರಲ್ಲಿ ಆಂಟಿ-ಸ್ಪೈಕ್ ಪ್ರತಿಕಾಯಕ್ಕೆ ಸಿರೊಪೊಸಿಟಿವಿಟಿ ದರಗಳು ಗಮನಾರ್ಹವಾಗಿ ಹೆಚ್ಚಿವೆ. ನಡೆಯುತ್ತಿರುವ ಕೋವಾಟ್ ಅಧ್ಯಯನವು ಎರಡನೇ ಡೋಸ್ ನಂತರ ಎರಡು ಲಸಿಕೆಗಳ ನಡುವಿನ ರೋಗನಿರೋಧಕ ಪ್ರತಿಕ್ರಿಯೆಯನ್ನು ಮತ್ತಷ್ಟು ತಿಳಿಸುತ್ತದೆ ಎಂದು ಅದು ಹೇಳಿದೆ. (kpc)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

ಜನಜಾತ್ರೆಯಂತಾದ ಜನಸ್ಪಂದನ, ಪಟ್ಟಣ ಪಂಚಾಯತ್‌ ಬಗ್ಗೆ ತಕರಾರು

ಸಿದ್ದಾಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ...

ಸಮಾಜಮುಖಿ ಡಾಟ್‌ ನೆಟ್‌ ಬ್ರೇಕಿಂಗ್……‌ ಅವರಗುಪ್ಪಾದ ಮಹಿಳೆ ಸೊರಬಾದಲ್ಲಿ ಆತ್ಮಹತ್ಯೆ

ಸೊರಬಾದ ವಸತಿನಿಲಯದ ಮುಖ್ಯ ಅಡುಗೆ ಸಿಬ್ಬಂದಿ ಮಹಿಳೆ ವಸತಿ ನಿಲಯದಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಸಿದ್ಧಾಪುರದ ಅವರಗುಪ್ಪಾ ಮೂಲದ ನೇತ್ರಾವತಿ ನಾಯ್ಕ ಆತ್ಮಹತ್ಯೆಗೆ...

ಹೋರಾಟಗಳ ಮೂಲಕ ಸುಧಾರಣೆ ಇಂದಿನ ಅನಿವಾರ್ಯತೆ

ಬಹುಜನ ಚಳವಳಿಗಳಿಗೆ ನಾರಾಯಣ ಗುರುಗಳು ಮತ್ತು ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಚಿಂತನೆಗಳು ಪೂರಕ ಎಂದಿರುವ ಯುವ ಚಿಂತಕ ಲೋಹಿತ್‌ ನಾಯ್ಕ ಈಗಲೂ ಸೈದ್ಧಾಂತಿಕ...

ಅಕ್ರಮ ಮದ್ಯ ಮಾರಾಟ, ಮದ್ಯ ಸೇವಿಸಿ ವಾಹನ ಚಾಲನೆ ನಿಯಂತ್ರಣಕ್ಕೆ ಭೀಮಣ್ಣ ಆದೇಶ

ಶಿರಸಿ-ಸಿದ್ಧಾಪುರಗಳಲ್ಲಿ ಸಾಮಾಜಿಕ ಪಿಡುಗಾಗಿ ಜನರ ಜನಜೀವನಕ್ಕೆ ತೊಂದರೆ ಕೊಡುತ್ತಿರುವ ಅಕ್ರಮ ಮದ್ಯ ಮತ್ತು ಮದ್ಯ ಸೇವಿಸಿ ವಾಹನ ಚಲಾಯಿಸುವ ಬಗ್ಗೆ ಸ್ಥಳೀಯ ಶಾಸಕ ಭೀಮಣ್ಣ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *