

ಪಂಪನ ಬನವಾಸಿ ಉತ್ತರ ಕನ್ನಡ ಜಿಲ್ಲೆಯ ವಿಶಿಷ್ಟ ಪ್ರದೇಶ. ಈ ಭಾಗದ ಪ್ರತಿಭೆಗಳು ದೇಶದ ಗಡಿದಾಟಿ ಹೆಸರು ಮಾಡಿವೆ. ಕೃಷಿ, ಸಾಹಿತ್ಯ, ಸಾಂಸ್ಕೃತಿಕತೆ,ಚರಿತ್ರೆ ಎಲ್ಲಾ ಕ್ಷೇತ್ರಗಳ ಪ್ರತಿಭೆಗಳ ಕಣವಾಗಿರುವ ಬನವಾಸಿಯ ಬಿ.ಸೋಮಶೇಖರ್ ಇಂದು ನಿಧನರಾದರೆ ಇಲ್ಲಿಯ ರವಿ ಪುರೋಹಿತ ಇತ್ತೀಚೆಗೆ ನಿಧನರಾಗಿದ್ದಾರೆ. ರವಿಪುರೋಹಿತ ಪುಸ್ತಕೋದ್ಯಮದ ಯುವ ಪ್ರತಿಭೆಯಾಗಿದ್ದು ಎಲ್ಲರೊಳಗೊಂದಾಗಿದ್ದ ಪ್ರತಿಭಾವಂತ.

ಇಂದು ಕೋವಿಡ್ ನಿಂದ ನಿಧನರಾದ ಬಿ. ಸೋಮಶೇಖರ್ ಪ್ರವಾಸೋದ್ಯಮ ಇಲಾಖೆಯ ಉದ್ಯೋಗಿಯಾಗಿದ್ದು ಬೆಳಗಾವಿಯಲ್ಲಿ ಸೇವೆ ಸಲ್ಲಿಸಿದ್ದರು.ರಾಜ್ಯ ಚೆನ್ನಯ್ಯ ಸಮಾಜದ ಅಧ್ಯಕ್ಷರಾಗಿದ್ದ ಸೋಮಶೇಖರ್ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ಧೇಶಕರಾಗಿ ಮಂಗಳೂರು ಉಡುಪಿಗಳಲ್ಲಿ ಸೇವೆ ಸಲ್ಲಿಸಿದ್ದರು. ಬಹುಮುಖ ಪ್ರತಿಭೆಯ ಹೋರಾಟಗಾರ ಸೋಮಶೇಖರ್ ಒಂದು ತಿಂಗಳ ಹಿಂದೆ ಕೋವಿಡ್ ನಿಂದ ತಾಯಿಯನ್ನು ಕಳೆದುಕೊಂಡಿದ್ದರು.

ಯುವಕರು, ಸಜ್ಜನ ಪ್ರತಿಭಾವಂತರು ಆಗಿದ್ದ ರವಿಪುರೋಹಿತ್ ಮತ್ತು ಬಿ. ಸೋಮಶೇಖರ್ ನಿಧನಕ್ಕೆ ರಮೇಶ್ ಮತ್ತು ದಿನೇಶ್ ಭಾಶಿ, ಗೋಪಾಲ ನಾಯ್ಕ ಭಾಶಿ, ಮೌಲಾಲಿ ಕಲಕರಡಿ, ವಿಜಯ ಕಲಕರಡಿ ಮತ್ತು ಮಾರುತಿ ಉಪ್ಪಾರ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.
