

ರಾಜ್ಯದಲ್ಲಿ ಕರೋನಾ ಕಾವು ನಿಧಾನವಾಗಿ ಇಳಿಯುತ್ತಿದೆ. ಕರೋನಾ ಲಾಕ್ ಡೌನ್ ಮುಂದಿನ ವಾರದಿಂದಲೇ ಸಡಿಲವಾಗಲಿದೆ. ಕರೋನಾ ನಂತರ ಈಗಿನ ವ್ಯವಸ್ಥೆಗಳು ಅಮೂಲಾಗ್ರವಾಗಿ ಬದಲಾಗಲಿವೆ.ರಾಜ್ಯದ ಬಹುತೇಕ ಕಡೆ ಆರೋಗ್ಯ ತುರ್ತು ಪರಿಸ್ಥಿ ತಿ ನಿಭಾಯಿಸಲು ಸರ್ಕಾರೇತರ ವ್ಯಕ್ತಿಗಳು,ಸಂಸ್ಥೆಗಳು ಪಕ್ಷಗಳು ವಿಭಿನ್ನ ವ್ಯವಸ್ಥೆಗಳನ್ನು ಮಾಡಿದ್ದರು.ಅಂಥ ವಿಶೇಶ ಆರೋಗ್ಯ ವ್ಯವಸ್ಥೆಯಲ್ಲಿ ಕಾಂಗ್ರೆಸ್ ಪಕ್ಷ ಪ್ರಾರಂಭಿಸಿದ್ದ ಆರೋಗ್ಯ ಹಸ್ತವೂ ಒಂದು.
ಈ ಆರೋಗ್ಯ ಹಸ್ತ ಯೋಜನೆಯಡಿ ಗ್ರಾಮೀಣ ಜನರ ಆರೋಗ್ಯ ತಪಾಸಣೆ ಕರೋನಾ ಸೇನಾನಿಗಳಿಗೆ ಸುರಕ್ಷತಾ ಸಲಕರಣೆ ವಿತರಣೆ ಸೇರಿದ್ದವು. ಉತ್ತರ ಕನ್ನಡ ಜಿಲ್ಲೆಯಲ್ಲಿ ಎಲ್ಲಾ ತಾಲೂಕುಗಳಲ್ಲಿ ಈ ಆರೋಗ್ಯ ಹಸ್ತ ಕಾರ್ಯಕ್ರಮ ನಡೆಯುತ್ತಿದೆ. ಪ್ರತಿಗ್ರಾಮ ಪಂಚಾಯತ್ ಕೇಂದ್ರಗಳಿಗೆ ತೆರಳಿ ಆರೋಗ್ಯ ತಪಾಸಣೆ, ಔಷಧೋಪಚಾರ ಮಾಡುವ ಈ ವ್ಯವಸ್ಥೆಯೊಂದಿಗೆ ಅನಿವಾರ್ಯತೆಯಲ್ಲಿ ಎಂಬುಲನ್ಸ್ ಕೂಡಾ ನೀಡಲಾಗುತಿತ್ತು.
ಕರೋನಾ ಅನಿವಾರ್ಯತೆಯಲ್ಲಿ ಜನಸಾಮಾನ್ಯರಿಗೆ ನೆರವಾದ ಕಾಂಗ್ರೆಸ್ ಸಹಾಯಹಸ್ತ ಕರೋನಾ ಮುಗಿದ ನಂತರ ಸ್ಥಗಿತಗೊಳ್ಳಲಿದೆಯಾ ಎನ್ನುವ ಪ್ರಶ್ನೆ ಜನಸಾಮಾನ್ಯರಲ್ಲಿ ಮೊಳಕೆಯೊಡೆದಿತ್ತು. ಈ ಪ್ರಶ್ನೆ ಅನುಮಾನಗಳಿಗೆ ಉತ್ತರ ನೀಡಿರುವ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ನಾಯಕರು ಕರೋನಾ ಅವಧಿಯಲ್ಲಿ ಪ್ರಾರಂಭವಾಗಿರುವ ಕಾಂಗ್ರೆಸ್ ನ ಆರೋಗ್ಯ ಹಸ್ತ ಕಾರ್ಯಕ್ರಮ ಮುಂದುವರಿಯಲಿದೆ ಎಂದು ಸ್ಪಸ್ಟಪಡಿಸಿದ್ದಾರೆ.
ಶಿರಸಿ ಸಿದ್ಧಾಪುರ ತಾಲೂಕುಗಳ 45 ಕ್ಕೂ ಹೆಚ್ಚು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಆರೋಗ್ಯ ಹಸ್ತ ಕಾರ್ಯಕ್ರಮ ನಡೆಸಿದ ಕಾಂಗ್ರೆಸ್ ಜಿಲ್ಲೆಯಾದ್ಯಂತ ಈ ಕಾರ್ಯಕ್ರಮದ ಮೂಲಕ ಜನಸಾಮಾನ್ಯರಿಗೆ ನೆರವಾಗಿದೆ.
ಸಿದ್ಧಾಪುರದ ಹಲಗೇರಿ ಗ್ರಾಮ ಪಂಚಾಯತ್ ಸುಂಕತ್ತಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಕೆಲವು ಮಾರ್ಪಾಡುಗಳೊಂದಿಗೆ ಕಾಂಗ್ರೆಸ್ ಆರೋಗ್ಯ ಹಸ್ತ ಮುಂದುವರಿಯಲಿದೆ, ರಾಜ್ಯ ಕೇಂದ್ರ ಸರ್ಕಾರಗಳು ವ್ಯವಸ್ಥಿತವಾಗಿ ತಮ್ಮ ಜವಾಬ್ಧಾರಿ ನಿರ್ವಹಿಸಿದ್ದರೆ ಈ ತೊಂದರೆ ಆಗುತ್ತಿರಲಿಲ್ಲ. ಕರೋನಾ ಕಾಲದಲ್ಲಿ ಜನರಿಗಾದ ತೊಂದರೆಗೆ ಸ್ಫಂದಿಸುವ ಉದ್ದೇಶದಿಂದ ಪ್ರಾರಂಭವಾದ ಈ ಆರೋಗ್ಯ ಹಸ್ತ ಕಾರ್ಯಕ್ರಮ ನಿರೀಕ್ಷೆಮೀರಿ ಯಶಸ್ವಿಯಾಗಿದ್ದು ಜನರ ಅಗತ್ಯ ಅನಿವಾರ್ಯತೆ ಆಧರಿಸಿ ಮುಂದೆಕೂಡಾ ಮುಂದುವರಿಯಲಿದೆ ಎಂದರು. ಈ ಸಮಯದಲ್ಲಿ ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ, ಡಿ.ಸಿ.ಸಿ. ಪ್ರಮುಖ ಎಸ್.ಕೆ. ಭಾಗವತ್ ಶಿರಸಿಮಕ್ಕಿ, ಪ್ರಸನ್ನ ಶೆಟ್ಟಿ,ಸಿ.ಆರ್. ನಾಯ್ಕ, ವಿ.ಎನ್. ನಾಯ್ಕ ಜಾಬಿ, ಮಾರುತಿ ನಾಯ್ಕ, ಎಚ್. ಆರ್. ನಾಯ್ಕ, ರವಿಕುಮಾರ ಎಸ್.ಆರ್. ಸೇರಿದಂತೆ ಅನೇಕರಿದ್ದರು.


