

ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕಡೆಕೋಡಿ ಗ್ರಾಮದ ದಿಶಾ ಭಾಗ್ವತ್ ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿ ಅಟಾರ್ನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದು ಜಿಲ್ಲೆಗೆ ಅತ್ಯಂತ ಹೆಮ್ಮೆಯ ಸಂಗತಿಯಾಗಿದ್ದು, ಅತಿ ಚಿಕ್ಕ ವಯಸ್ಸಿನಲ್ಲೇ ಅತ್ಯಂತ ಮಹತ್ತರ ಸಾಧನೆ ಮಾಡಿರುವ ಕುಮಾರಿ. ದಿಶಾ ಭಾಗ್ವತ್ ಅವರ ಪರಿಶ್ರಮ, ಶ್ರದ್ಧೆ ಹಾಗೂ ಸಾಧಿಸಬೇಕು ಎನ್ನುವ ಹಂಬಲವು ಇಂದಿನ ಯುವ ಪೀಳಿಗೆ ಮಾದರಿಯಾಗಿದೆ. ಇವರನ್ನು ಅನೇಕರು ಅಭಿನಂದಿಸಿದ್ದಾರೆ.

ಪೊಲೆಂಡ್ ಕುಸ್ತಿ ಟೂರ್ನಿ; ಚಿನ್ನ ಮುಡಿಗೇರಿಸಿಕೊಂಡ ವಿನೇಶ್ ಫೋಗಟ್
ಭಾರತದ ತಾರಾ ಕುಸ್ತಿ ಪಟು ವಿನೇಶ್ ಫೋಗಟ್ ವಾರ್ಸಾದಲ್ಲಿ ನಡೆಯುತ್ತಿರುವ ಪೋಲೆಂಡ್ ಕುಸ್ತಿ ಟೂರ್ನಿಯ ಮಹಿಳೆಯರ 53 ಕೆಜಿ ವಿಭಾಗದ ಫೈನಲ್ ನಲ್ಲಿ ಉಕ್ರೇನಿನ ಕ್ರಿಸ್ಟಿಯಾನ ಬ್ರೀಜಾ ಅವರನ್ನು ಮಣಿಸಿ ಚಿನ್ನದ ಪದಕ ಮುಂಡಿಗೇರಿಸಿಕೊಂಡಿದ್ದಾರೆ.
ನವದೆಹಲಿ: ಭಾರತದ ತಾರಾ ಕುಸ್ತಿ ಪಟು ವಿನೇಶ್ ಫೋಗಟ್ ವಾರ್ಸಾದಲ್ಲಿ ನಡೆಯುತ್ತಿರುವ ಪೋಲೆಂಡ್ ಕುಸ್ತಿ ಟೂರ್ನಿಯ ಮಹಿಳೆಯರ 53 ಕೆಜಿ ವಿಭಾಗದ ಫೈನಲ್ ನಲ್ಲಿ ಉಕ್ರೇನಿನ ಕ್ರಿಸ್ಟಿಯಾನ ಬ್ರೀಜಾ ಅವರನ್ನು ಮಣಿಸಿ ಚಿನ್ನದ ಪದಕ ಮುಂಡಿಗೇರಿಸಿಕೊಂಡಿದ್ದಾರೆ.
ಶುಕ್ರವಾರ ನಡೆದ ಫೈನಲ್ ಪಂದ್ಯದಲ್ಲಿ ಫೋಗಟ್ ಎದುರಾಳಿ ಬ್ರೀಜಾ ಅವರನ್ನು 8-0 ಪಾಯಿಂಟ್ ಗಳಿಂದ ಸೋಲಿಸಿದರು. 26 ವರ್ಷದ ವಿನೀಶ್ ಈ ಋತುವಿನಲ್ಲಿ ತಮ್ಮದಾಗಿಸಿಕೊಂಡ ಮೂರನೇ ಚಿನ್ನದ ಪದಕ ಇದಾಗಿದೆ. ಮಾರ್ಚ್ ನಲ್ಲಿ ನಡೆದ ಮೆಟ್ಟಿಯೂ ಪೆಲಿಕಾನ್ ಇವೆಂಟ್ ಹಾಗೂ ಏಪ್ರಿಲ್ ನಲ್ಲಿ ನಡೆದ ಏಷಿಯನ್ ಚಾಂಪಿಯನ್ ಶಿಪ್ ನಲ್ಲಿ ಸ್ವರ್ಣಪದಕ ಗೆದ್ದಿದ್ದರು.
ಪೊಲೆಂಡ್ ಕುಸ್ತಿ ಟೂರ್ನಿಯಲ್ಲಿ ಭಾರತಕ್ಕೆ ಇದು ಎರಡನೇಯ ಪದಕವಾಗಿದೆ. ಇದಕ್ಕೂ ಮೊದಲು ಬುಧವಾರ ನಡೆದಿದ್ದ ಪುರುಷರ 61 ಕೆ.ಜಿ.ವಿಭಾಗದಲ್ಲಿ ರವಿಕುಮಾರ್ ದಹಿಯಾ ಬೆಳ್ಳಿ ಪದಕ ಗೆದ್ದಿದ್ದರು.
ಭಾರತ ತಂಡದ ಮತ್ತೊಬ್ಬ ಸದಸ್ಯೆ ಅಂನ್ಶು ಮಲಿಕ್ 57 ಕೆಜೆ ವಿಭಾಗದಲ್ಲಿ ಸ್ಪರ್ಧಿಸಬೇಕಿತ್ತು. ಆದರೆ ಜ್ವರದ ಲಕ್ಷಣಗಳು ಕಾಣಿಸಿಕೊಂಡ ಕಾರಣ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಅವರು ಕೋವಿಡ್ ಪರೀಕ್ಷೆಗೆ ಒಳಗಾಗಿದ್ದು, ಪರೀಕ್ಷಾ ವರದಿ ಬರುವವರೆಗೆ ಆಕೆ ಐಸಲೇಷನ್ ಗೆ ಒಳಗಾಗಿದ್ದಾರೆ.
ಅಧಿಕೃತ ತೂಕದ ಸಮಯದಲ್ಲಿ ಅಂನ್ಶು ಮಲಿಕ್ ಅವರಿಗೆ ಜ್ವರದ ಲಕ್ಷಣಗಳು ಕಂಡು ಬಂದ ಕಾರಣ ಸ್ಪರ್ಧೆಯಿಂದ ದೂರ ಸರಿಯುವಂತೆ ಸೂಚಿಸಲಾಗಿದೆ. ಟೂರ್ನಿಯಿಂದ ದೂರ ಸರಿದ ಎರಡನೇ ಭಾರತೀಯ ಕುಸ್ತಿ ಪಟು ಆಗಿದ್ದಾರೆ
ಇದಕ್ಕೂ ಮೊದಲು, ಮಂಗಳವಾರ, ಪುರುಷರ 86 ಕೆಜಿ ವಿಭಾಗದ ದೀಪಕ್ ಪುನಿಯಾ ಕಾಲಿನ ಗಾಯದಿಂದಾಗಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು.
ಟೊಕಿಯೊ ಒಲಿಂಪಿಕ್ಸ್ ಗೆ ತೆರಳಲಿರುವ ನಾಲ್ವರು ಕುಸ್ತಿ ಪಟುಗಳಾದ ವಿನೇಶ್ ಪೋಗಟ್, ಅಂನ್ಶುಮಲಿಕ್, ರವಿಕುಮಾರ್ ದಹಿಯಾ ಹಾಗೂ ದೀಪಕ್ ಪುನಿಯಾ ಅವರನ್ನು ಪೊಲೆಂಡ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದಾರೆ. ಮುಂದಿನತಿಂಗಳು ಆರಂಭವಾಗಲಿರುವ ಟೊಕಿಯೋ ಒಲಿಂಪಿಕ್ಸ್ ಗೆ ಮೊದಲು ನಡೆಯುತ್ತಿರುವ ಈ ಟೂರ್ನಿ ಕೊನೆಯ ರ್ಯಾಂಕಿಂಗ್ ಸರಣಿಯಾಗಿದೆ, (kpc)
