

ಮೊಬೈಲ್ ಬಂದ್ ಮಾಡಿಕೊಂಡು ತನ್ನ ಬೇಡಿಕೆಗೆ ಸ್ಪಂದಿಸದೆ ತಲೆಮರೆಸಿಕೊಂಡಿದ್ದಾನೆ ಎನ್ನುವ ನೆಪದಿಂದ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ಶುಕ್ರವಾರ ನಡೆದಿದೆ. ಆತ್ಮಹತ್ಯೆಗೆ ಶರಣಾದ ಯುವತಿ ಸಿದ್ಧಾಪುರ ದಾಸನಗದ್ದೆಯ ಪಲ್ಲವಿ ಮಡಿವಾಳ ಎನ್ನಲಾಗಿದ್ದು ಹೆರವಳ್ಳಿಯ ಪವನ್ ಮಡಿವಾಳ ಪಲ್ಲವಿಯನ್ನು ಪ್ರೇಮಿಸಿ ನಂಬಿಕೆದ್ರೋಹ ಮಾಡಿದ್ದ ಎನ್ನಲಾಗಿದೆ.
ಸಿದ್ಧಾಪುರದ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತಿದ್ದ ಪಲ್ಲವಿ ತನ್ನ ನೆರೆಮನೆಗೆ ಬರುತಿದ್ದ ಬೆಂಗಳೂರಿನಲ್ಲಿ ಕೆಲಸಮಾಡುವ ಪವನ್ ನನ್ನು ಪ್ರೀತಿಸಿದ್ದಳು. ಮದುವೆಗೆ ಒಪ್ಪದ ಪವನ್ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪಲ್ಲವಿಯ ಸಂಪರ್ಕದಿಂದ ದೂರ ಉಳಿದದ್ದೇ ಈ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ.
ಸಿದ್ದಾಪುರ ಪಟ್ಟಣದ ಭಾರತ್ ಪೆಟ್ರೋಲ್ ಬಂಕ್ ಎದುರು ಶನಿವಾರ ಕಾಂಗ್ರೆಸ್ ಪಕ್ಷದ ವತಿಯಿಂದ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ನಡೆಸಲಾಯಿತು. ಉ.ಕ. ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರು ಹಾಗೂ ತಾಲೂಕ ಅಧ್ಯಕ್ಷರು ಕೇಂದ್ರ ರಾಜ್ಯ ಸರ್ಕಾರಗಳ ಬೆಲೆ ಏರಿಕೆ ನೀತಿ ವಿರುದ್ಧ ವಾಗ್ದಾಳಿ ನಡೆಸಿದರು ಜನರಿಗೆ ಸುಳ್ಳು ಹೇಳುವ ಮೂಲಕ ಬಿ.ಜೆ.ಪಿ. ಅಧಿಕಾರಕ್ಕೆ ಬಂದಿದೆ. ಗರೀಬಿ ಹಠಾವೋ ಬೇಟಿ ಬಚಾವೋ, ಅಚ್ಚ ದಿನ್ ಆಯೆಗಾ ಎಂದು ಹೇಳಿ ಸಾಮಾನ್ಯ ಜನರನ್ನು ರೈತರನ್ನು ಸುಲಿಗೆ ಮಾಡುತ್ತಿದೆ.
ಅಧಿಕಾರಕ್ಕೆ ಬಂದ ಮೇಲೆ ಬೆಲೆ ಏರಿಕೆ ಮಾಡಿ ಶ್ರೀಸಾಮಾನ್ಯರ ಬದಕನ್ನು ಕಷ್ಟದ ಪರಿಸ್ಥಿತಿಗೆ ನೂಕಿದೆ. ಕೂಡಲೇ ಈ ಸರ್ಕಾರ ತೊಲಗಬೇಕು. ಬಡಜನರ ರಕ್ತಹೀರುವ ಕೆಲಸವನ್ನು ನರೇಂದ್ರ ಮೋದಿ ಮುಂದಾಳತ್ವದ ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದು ಇಲ್ಲಿ ಸೇರಿದ್ದ ಮುಖಂಡರು ದೂರಿದರು.
ಸಂಸದರಾದ ಅನಂತ್ ಕುಮಾರ್ ಹೆಗಡೆ ಯವರು ಚುನಾವಣೆಗೆ 6 ತಿಂಗಳು ಇರುವಾಗ ಕ್ಷೇತ್ರದ ಜನರ ಮುಂದೆ ಬರುತ್ತಾರೆ. ಬಂದಾಗ ನನಗೆ ಮುಸ್ಲಿಮರ ಓಟು ಬೇಡ ಎನ್ನುತ್ತಾರೆ.
ಮುಸ್ಲಿಮರನ್ನು ವಿರೋಧ ಮಾಡುವವರು ತಮ್ಮ ಹಲವಾರು ವ್ಯವಹಾರಗಳನ್ನು ಮುಸ್ಲಿಮ ರೊಂದಿಗೆ ನಡೆಸುತ್ತಾರೆ. ಎಂದು ಆರೋಪ ಗಳನ್ನು ಮಾಡಿದರು. ಪ್ರತಿಭಟನೆಯಲ್ಲಿ, ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಸೀಮಾ ಹೆಗಡೆ , ಅಲ್ಪಸಂಖ್ಯಾತ ಘಟಕದ ತಾಲೂಕು ಅಧ್ಯಕ್ಷ ಅಬ್ದುಲ್ ಶರೀಫ್ ಸಾಬ್, ತಾಲೂಕ ಯುವ ಘಟಕದ ಅಧ್ಯಕ್ಷ ಪ್ರಶಾಂತ್ ನಾಯ್ಕ ಹೊಸೂರು, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ವಿ ಎನ್ ನಾಯ್ಕ, ಕಾಂಗ್ರೆಸ್ ಸೇವಾದಳದ ತಾಲೂಕ ಅಧ್ಯಕ್ಷ ಗಾಂಧೀಜಿ ನಾಯ್ಕ, ತಾ ಪಂ ಮಾಜಿ ಸದಸ್ಯ ನಾಸಿರ್ ಖಾನ್ , ರ ಜೊತೆಗೆ ಕೆಲವು ಕಾರ್ಯಕರ್ತರು ಭಾಗವಹಿಸಿದ್ದರು.

ತೈಲ ಮತ್ತಿತರ ಅವಶ್ಯಕ ಸರಕುಗಳ ಬೆಲೆ ಏರಿಕೆ ವಿರುದ್ಧ ರಾಷ್ಟ್ರವ್ಯಾಪಿ ಎಡಪಕ್ಷಗಳ ಪ್ರತಿಭಟನೆ
ತೈಲ, ಅಗತ್ಯ ವಸ್ತುಗಳು ಮತ್ತು ಔಷಧಿಗಳ ಬೆಲೆ ಏರಿಕೆ ವಿರುದ್ಧ ಎಡಪಕ್ಷಗಳು ಬುಧವಾರದಿಂದ ಹದಿನೈದು ದಿನಗಳ ಕಾಲ ರಾಷ್ಟ್ರವ್ಯಾಪ್ತಿ ಪ್ರತಿಭಟನೆ ನಡೆಸಲಿವೆ.

ನವದೆಹಲಿ: ತೈಲ, ಅಗತ್ಯ ವಸ್ತುಗಳು ಮತ್ತು ಔಷಧಿಗಳ ಬೆಲೆ ಏರಿಕೆ ವಿರುದ್ಧ ಎಡಪಕ್ಷಗಳು ಬುಧವಾರದಿಂದ ಹದಿನೈದು ದಿನಗಳ ಕಾಲ ರಾಷ್ಟ್ರವ್ಯಾಪ್ತಿ ಪ್ರತಿಭಟನೆ ನಡೆಸಲಿವೆ.
ಸಿಪಿಐ(ಎಂ) ಸಿಪಿಐ, ಅಲ್ ಇಂಡಿಯಾ ಫಾರ್ವಡ್ ಬ್ಲಾಕ್, ಕ್ರಾಂತಿಕಾರಿ ಸಮಾಜವಾದಿ ಪಕ್ಷ, ಸಿಪಿಐ (ಎಲ್) ಒಳಗೊಂಡಂತೆ ಎಡಪಕ್ಷಗಳು ಭಾನುವಾರ ಪ್ರತಿಭಟನೆ ಕುರಿತು ಜಂಟಿ ಹೇಳಿಕೆ ಹೊರಡಿಸಿವೆ. ಈ ಹೇಳಿಕೆ ಪ್ರಕಾರ ಜೂನ್ 16 ರಂದು ಆರಂಭವಾಗಲಿರುವ ಪ್ರತಿಭಟನೆ ಜೂನ್ 30 ರಂದು ಅಂತ್ಯವಾಗಲಿದೆ.
ಹೆಚ್ಚುತ್ತಿರುವ ತೈಲ ಬೆಲೆಯನ್ನು ಇಳಿಸಬೇಕು ಹಾಗೂ ಅಗತ್ಯ ವಸ್ತುಗಳು ಮತ್ತು ಔಷಧಿಗಳ ಬೆಲೆಗಳನ್ನು ನಿಯಂತ್ರಿಸಬೇಕು ಎಂದು ಎಡಪಕ್ಷಗಳು ಕೇಂದ್ರ ಸರ್ಕಾರವನ್ನು ಒತ್ತಾಯಿಸಿವೆ. ನಿರಂತರವಾಗಿ ಹೆಚ್ಚಾಗುತ್ತಿರುವ ತೈಲ ಬೆಲೆಯಿಂದ ಜನಸಾಮಾನ್ಯರ ಬದುಕಿಗೆ ಹೊರೆಯಾಗಿದೆ. ಇತ್ತೀಚಿಗೆ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶದ ನಂತರ 21 ಬಾರಿ ತೈಲ ಬೆಲೆಯನ್ನು ಕೇಂದ್ರ ಸರ್ಕಾರ ಹೆಚ್ಚಿಸಿದೆ ಎಂದು ಎಡಪಕ್ಷಗಳು ಆರೋಪಿಸಿವೆ.
ತೈಲ ಬೆಲೆ ಏರುತ್ತಿರುವ ಸಂದರ್ಭದಲ್ಲಿ ದೇಶದ ಆರ್ಥಿಕ ಕುಸಿತಗೊಂಡಿದ್ದು, ನಿರುದ್ಯೋಗ ಹೆಚ್ಚಾಗಿದೆ, ಖರೀದಿ ಸಾಮರ್ಥ್ಯ ಕುಸಿತಗೊಂಡಿದ್ದು, ಹಸಿವಿನ ಪ್ರಮಾಣ ಹೆಚ್ಚಳವಾಗಿದೆ ಎಂದು ಆರೋಪಿಸಿರುವ ಎಡಪಕ್ಷಗಳು, ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡದ ಎಲ್ಲಾ ಕುಟುಂಬಗಳಿಗೆ ಆರು ತಿಂಗಳವರೆಗೂ ತಿಂಗಳಿಗೆ 7,500 ರೂ.ಗಳನ್ನು ಕೇಂದ್ರ ಸರ್ಕಾರ ಕೂಡಲೇ ನೇರ ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿವೆ.

